ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗೆ 1000ಕ್ಕೂ ಹೆಚ್ಚು ಪ್ರದರ್ಶನ, ಮೊದಲ ದಿನವೇ ಅಬ್ಬರ ಜೋರು!

'ಕಾಟೇರ' ಅಬ್ಬರ ನಾಳೆಯಿಂದ ಶುರುವಾಗಲಿದೆ, ಕೆಲವು ಥಿಯೇಟರ್‌ಗಳಲ್ಲಿ ರಾತ್ರಿಯಿಂದ ಸಂಭ್ರಮ ಮೇಳೈಸಲಿದೆ. ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಕೋಟ್ಯಂತರ ಫ್ಯಾನ್ಸ್ 'ಕಾಟೇರ' ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗಿದ್ದಾಗ ಸುಮಾರು 1000ಕ್ಕೂ ಹೆಚ್ಚು ಪ್ರದರ್ಶನವನ್ನ ಮೊದಲ ದಿನವೇ ಅಭಿಮಾನಿಗಳಿಗೆ ನೀಡೋಕೆ 'ಕಾಟೇರ' ಸಜ್ಜಾಗಿದೆ.

ಕಾಟೇರ ಸಿನಿಮಾದ ಹಲವು ಶೋಗಳು ಬೆಳ್ಳಂಬೆಳಗ್ಗೆ ಶುರು ಆಗಲಿವೆ. ಹೀಗೆ ಬೆಳಗ್ಗೆಯಿಂದಲೇ, ಕಾಟೇರ ಅಬ್ಬರ ಶುರುವಾಗಲಿದೆ. ರಾಜಧಾನಿ ಬೆಂಗಳೂರಿನ ಕೆ.ಜಿ. ರಸ್ತೆಯಲ್ಲಿರುವ ಥಿಯೇಟರ್ ಅನುಪಮ ಕಾಟೇರ ಆಗಮನಕ್ಕೆ ಕಾಯುತ್ತಿದೆ. ಅನುಪಮ ಸಿನಿಮಾ ಮಂದಿರದಲ್ಲಿ, ಬೆಳಗ್ಗೆ 6 ಗಂಟೆಗೆ ಶೋ ಶುರುವಾಗಲಿದೆ. ಸುಂಕದಕಟ್ಟೆಯ ಮೋಹನ್ ಥಿಯೇಟರ್ ಬೆಳಗ್ಗೆ 5.30ಕ್ಕೆ ಶೋ ಶುರು ಮಾಡಲಿದೆ. ಇನ್ನು ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನ ಕೂಡ ಕಾಟೇರ ಸಿನಿಮಾಗೆ ಸಿಂಗರಿಸಲಾಗಿದೆ. ಬೆಳಗ್ಗೆ 5 ಗಂಟೆಗೆ ಶೋ ಶುರುವಾಗಲಿದೆ. ಈ ಮೂಲಕ ಇನ್ನೂ ಹಲವಾರು ಥಿಯೇಟರ್‌ಗಳಲ್ಲಿ ಇಂದು ಮಧ್ಯರಾತ್ರಿಯೇ ವಿಶೇಷ ಪ್ರದರ್ಶನಗಳು ಶುರುವಾಗಲಿದೆ.

Sandalwood Movie Kaatera Will Release Tomorrow

ರಾಜ್ಯದ ಮೂಲೆ ಮೂಲೆಯಲ್ಲೂ..

ರಾಕ್‌ಲೈನ್‌ ಸಿನಿಮಾಸ್‌ನಲ್ಲಿ ಮಧ್ಯರಾತ್ರಿಯಿಂದಲೆ ಕಾಟೇರ ಸಿನಿಮಾ ಶೋ ಶುರುವಾಗಲಿದ್ದು ಟಿಕೆಟ್ ಮಾರಾಟ ಕೂಡ ಭರ್ಜರಿಯಾಗಿದೆ. ಕಳೆದ ಒಂದು ವಾರದಿಂದ 'ಕಾಟೇರ' ಟಿಕೆಟ್ ಭರ್ಜರಿಯಾಗಿ ಸೇಲ್ ಆಗಿವೆ. ಹೀಗಾಗಿ ಸಿನಿಮಾ ಬಿಡುಗಡೆ ಆದ ಮೊದಲ 3 ದಿನಗಳ ಕಾಲ ಟಿಕೆಟ್ ಬಹುತೇಕ ಬುಕ್ ಆಗಿದ್ದು, ಅಭಿಮಾನಿಗಳು 'ಕಾಟೇರ' ಕಾಣ್ತುಂಬಿಕೊಳ್ಳೋಕೆ ಈ ಮೂಲಕ ಕಾಯುತ್ತಿದ್ದಾರೆ. ಸಿಂಗಲ್ ಸ್ಕ್ರೀನ್ ಸೇರಿದಂತೆ ಮಾಲ್‌ಗಳಲ್ಲಿ ಕೂಡ ಅಬ್ಬರಿಸೋಕೆ 'ಕಾಟೇರ' ಸಿನಿಮಾ ಸಜ್ಜಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದ್ದು, ನೆರೆ ರಾಜ್ಯಗಳಲ್ಲೂ ಕನ್ನಡ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ.

'ಕ್ರಾಂತಿ' ಬಳಿಕ 'ಕಾಟೇರ' ಸೌಂಡ್

2023 ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದೆ. ಯಾಕೆ ಅಂದರೆ ಈ ವರ್ಷ ಎರಡೆರಡು ಸಿನಿಮಾ ರಿಲೀಸ್ ಆಗುತ್ತಿವೆ. ಕೆಲವು ತಿಂಗಳ ಹಿಂದಷ್ಟೇ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿ ದಾಖಲೆ ಧೂಳ್ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್ ದರ್ಶನ್ ಅವರು ಕಾಟೇರ ಮೂಲಕ ರೀ ಎಂಟ್ರಿಯನ್ನ ಕೊಡ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಸಿನಿಮಾ ಬಿಡುಗಡೆ ಹಿನ್ನೆಲೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಫ್ಯಾನ್ಸ್.

Sandalwood Movie Kaatera Will Release Tomorrow

ಥಿಯೇಟರ್ ಎದುರು ಕಟೌಟ್ ಅಬ್ಬರ

ಈಗಾಗಲೇ ಬಹುತೇಕ ಥಿಯೇಟರ್‌ಗಳ ಎದುರಲ್ಲಿ ನಟ ದರ್ಶನ್ ಅವರ ಕಟೌಟ್‌ಗಳ ಹಾಕಿ ಸಂಭ್ರಮ ಶುರು ಮಾಡಿದ್ದಾರೆ ಫ್ಯಾನ್ಸ್. ಇನ್ನೇನಿದ್ದರೂ ಸಿನಿಮಾ ನೋಡಿ, ಬೆಳ್ಳಿತೆರೆ ಮೇಲೆ ಅದರ ಅಬ್ಬರ ಕಣ್ತುಂಬಿಕೊಳ್ಳುವುದು ಬಾಕಿ. ಹೀಗಾಗಿ ಇಂದು ರಾತ್ರಿಯಿಂದಲೇ ಬಹುತೇಕ ಸಿನಿಮಾ ಮಂದಿರಗಳ ಎದುರು ಕಾಟೇರ ಸಂಭ್ರಮ ಶುರುವಾಗಲಿದೆ. ಕೆಲ ಥಿಯೇಟರ್ ಬಳಿ ಮುಗಿಲ ಎತ್ತರಕ್ಕೆ ಎದ್ದು ನಿಂತಿರುವ ಕಟೌಟ್‌ಗಳು ರಾರಾಜಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+