ಕನ್ನಡಿಗರ ‘ಚಿನ್ನಾರಿ ಮುತ್ತ’ ವಿಜಯ ರಾಘವೇಂದ್ರ ಅವರ ಹೊಸ ಸಿನಿಮಾ ಹೇಗಿದೆ ನೋಡಿ!
ವಿಜಯ ರಾಘವೇಂದ್ರ ಅಂದ್ರೆ ಕನ್ನಡಿಗರಿಗೆ ತುಂಬಾನೆ ಪ್ರೀತಿ, ಯಾಕಂದ್ರೆ ಸಣ್ಣ ವಯಸ್ಸಿನಲ್ಲೇ ಈ ನಟ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದರು. 'ಚಿನ್ನಾರಿ ಮುತ್ತ' ಸಿನಿಮಾ ಮೂಲಕ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಈ ನಟ, ಇದೀಗ 2024ರ ಆರಂಭದಲ್ಲೇ ಸರ್ಪ್ರೈಸ್ ನೀಡಿದ್ದಾರೆ. ಅಂದ್ರೆ ತಮ್ಮ ಮುಂದಿನ ಸಿನಿಮಾಗೆ ಸಜ್ಜಾಗಿ ನಿಂತಿದ್ದಾರೆ ನಟ ವಿಜಯ ರಾಘವೇಂದ್ರ ಅವರು. ಇದೀಗ ಅವರ ಹೊಸ ಸಿನಿಮಾ ತಂಡ, ಹೊಸ ವರ್ಷಕ್ಕೆ ಸರ್ಪ್ರೈಸ್ ನೀಡಿದೆ!
2000ದ ಸುತ್ತಮುತ್ತ ಚಿತ್ರರಂಗಕ್ಕೆ ಭರ್ಜರಿಯಾಗಿ ರೀ ಎಂಟ್ರಿ ಕೊಟ್ಟಿದ್ದ ವಿಜಯ ರಾಘವೇಂದ್ರ, ಕಾಲೇಜು ಹುಡುಗರಿಂದ ಹಿಡಿದು ಹಿರಿಯರ ತನಕ ತಮ್ಮ ನಟನೆ ಮೂಲಕ ಮನಸ್ಸು ಗೆದ್ದರು. ಸಾಲು ಸಾಲು ಹಿಟ್ ಸಿನಿಮಾ ಕೊಟ್ಟಿದ್ದ ನಟ ವಿಜಯ ರಾಘವೇಂದ್ರ ದೊಡ್ಡ ಬ್ರೇಕ್‌ಗಾಗಿ, ಇದೀಗ ಕಾಯುತ್ತಿದ್ದಾರೆ. ಆ ಸಾಲಿನಲ್ಲಿ 'ಕೇಸ್ ಆಫ್ ಕೊಂಡಾಣ' ಎಂಬ ಸಿನಿಮಾ ಇದೀಗ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

'ಕೇಸ್ ಆಫ್ ಕೊಂಡಾಣ' ಹೇಗಿದೆ?
ಹೌದು ವಿಜಯ ರಾಘವೇಂದ್ರ ಅಭಿನಯ ಮಾಡಿರುವ ಹೊಸ ಸಿನಿಮಾ ರಿಲೀಸ್‌ಗೆ ರೆಡಿಯಾಗಿ ನಿಂತಿದೆ. ಇದೇ ತಿಂಗಳು ಅಂದ್ರೆ ಜನವರಿಯಲ್ಲಿ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೀತಾರಾಮ್ ಬಿನೋಯ್ ಕ್ರೈಂ ಥ್ರಿಲ್ಲರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಅವರು ಈಗ, ಮತ್ತೊಮ್ಮೆ ವಿಭಿನ್ನ ಕಥಾ ಹಂದರದ 'ಕೇಸ್ ಆಫ್ ಕೊಂಡಾಣ' ತೆರೆಗೆ ತರಲು ಸಜ್ಜಾಗಿದ್ದಾರೆ. ಅದರಲ್ಲೂ ಈ ತಿಂಗಳ ಅಂತ್ಯಕ್ಕೆ ಈ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲು ಸಜ್ಜಾಗಿದೆ.
ಬೆಂಗಳೂರಿನಲ್ಲೇ ನಡೆಯುವ ಕಥೆ!
ಅಂದಹಾಗೆ ಈ ಚಿತ್ರವು ಸಂಪೂರ್ಣ ಬೆಂಗಳೂರಿನಲ್ಲಿ ನಡೆಯುವ ಕಥೆಯಾಗಿದ್ದು ಆರಂಭದಲ್ಲಿ 3 ಕಥೆಗಳು ಪ್ರಯಾಣ ಮುಂದುವರಿಸುತ್ತಾ, ಕೊನೆಯಲ್ಲಿ ಹೇಗೆ ಎಲ್ಲವೂ ಒಂದು ಕಡೆ ಸೇರುತ್ತವೆ ಎನ್ನುವುದೇ ಈ ಸಿನಿಮಾದ ಸ್ಪೆಷಾಲಿಟಿ ಎನ್ನಲಾಗಿದೆ. ಈ ಚಿತ್ರದ ಶೇಕಡಾ 80 ಭಾಗ ಒಂದು ರಾತ್ರಿಯಲ್ಲಿ ನಡೆಯುವ ಘಟನೆ ಆಗಿದೆ. ಬೆಂಗಳೂರಿನ ಕೊಂಡಾಣ ಎಂಬ ಕಾಲ್ಪನಿಕ ಸ್ಥಳದಲ್ಲಿ ಆ ರಾತ್ರಿ ನಡೆವ ಘಟನೆ ಆದರೂ ಏನು? ಎಂಬ ಎಲ್ಲಾ ಪ್ರಶ್ನೆಗೂ ಜನವರಿ 26ಕ್ಕೆ ಉತ್ತರ ಸಿಗುತ್ತೆ.
ಹೊಸ ವಿಜಯ ರಾಘವೇಂದ್ರ ಎಂಟ್ರಿ!
ಹಿಂದೆ ಎಂದೂ ಕಾಣಿಸಿಕೊಳ್ಳದ ರೀತಿ ವಿಜಯ ರಾಘವೇಂದ್ರ ಇಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿ ಎಮೋಷನ್ ಸೇರಿದಂತೆ ಕ್ರೈಂ, ಆಕ್ಷನ್, ಇರುವುದರ ಜೊತೆಗೆ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಚಿತ್ರ ಕಥೆ ಕೂಡ ಇದೆ. ಇನ್ನು ವಿಜಯ ರಾಘವೇಂದ್ರ, ಭಾವನಾ ಮೆನನ್, ಖುಷಿ ರವಿ, ರಂಗಾಯಣ ರಘು ಸೇರಿ ಬಹು ದೊಡ್ಡ ತಾರಾಬಳಗ ಇದೆ. ಸೀತಾ ರಾಮ್ ಬಿನೋಯ್ ಸಿನಿಮಾಗೆ ಕೆಲಸ ಮಾಡಿದ್ದ ಟೆಕ್ನಿಷಿಯನ್ಸ್ ಇಲ್ಲಿಯೂ ಕೆಲಸ ಮಾಡಿದ್ದಾರೆ.
ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ, ವಿಶ್ವ ಜಿತ್ ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಕಲಾ ನಿರ್ದೇಶನ & ಶಶಾಂಕ್ ನಾರಾಯಣ್ ಸಂಕಲನ ಇದೆ. ಪ್ರಮೋದ್ ಮರವಂತೆ ಸೇರಿದಂತೆ ವಿಶ್ವ ಜಿತ್ ರಾವ್ ಸಾಹಿತ್ಯ ಇರುವ ಈ ಚಿತ್ರಕ್ಕೆ ಜೋಗಿ ಅವರು ಸಂಭಾಷಣೆ ಕೂಡ ಬರೆದಿದ್ದಾರೆ. ನಿರ್ದೇಶನದ ಜೊತೆಗೆ ದೇವಿಪ್ರಸಾದ್ ಶೆಟ್ಟಿ ಅವರು, ಸಾತ್ವಿಕ್ ಹೆಬ್ಬಾರ್ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.












Click it and Unblock the Notifications