‘ಕಾಂತಾರ’ ರಿಷಬ್ ಶೆಟ್ಟಿ ಬದಲು ‘ಬ್ಯಾಚುಲರ್ ಪಾರ್ಟಿ’ ಅಖಾಡದಲ್ಲಿ ಯೋಗಿ ಫುಲ್ ಮಿಂಚಿಂಗ್!

ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಈ ವಾರ ಭರ್ಜರಿ ಗಿಫ್ಟ್ ಸಿಕ್ಕಿದ್ದು ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲೂ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ನಿನ್ನೆಯಷ್ಟೇ ರಿಲೀಸ್ ಆಗಿದ್ದ 'ಬ್ಯಾಚುಲರ್ ಪಾರ್ಟಿ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಇದೀಗ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಕೂಡ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೀಗಿದ್ದಾಗ 'ಕಾಂತಾರ' ರಿಷಬ್ ಶೆಟ್ಟಿ ಬದಲು 'ಬ್ಯಾಚುಲರ್ ಪಾರ್ಟಿ' ಅಖಾಡದಲ್ಲಿ ನಟ ಯೋಗಿ ಫುಲ್ ಮಿಂಚುತ್ತಿದ್ದಾರೆ.

'ಕಾಂತಾರ' ದೊಡ್ಡ ಸಕ್ಸಸ್ ಪಡೆದ ನಂತರ ರಿಷಬ್ ಶೆಟ್ಟಿ ಅವರು ಅನಿವಾರ್ಯವಾಗಿ ಹಲವು ಸಿನಿಮಾಗಳಿಂದ ಹಿಂದೆ ಸರಿದರು. 'ಬ್ಯಾಚುಲರ್‌ ಪಾರ್ಟಿ' ಸಿನಿಮಾ ಕೂಡ ಅದರಲ್ಲಿ ಒಂದು. 'ಕಾಂತಾರ' ಹಿಟ್ ಆಗುವ ಮೊದಲು ಸಿನಿಮಾ ಘೋಷಣೆ ಆಗಿತ್ತು. ಈ ಚಿತ್ರಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಹಣ ಹಾಕೋದು ಕನ್ಫರ್ಮ್ ಆಗಿತ್ತು. ಅಂತಿಮವಾಗಿ ಕಾಂತಾರ ಸಿನ್ಮಾ ಜಗತ್ತಿನಾದ್ಯಂತ ಸಕ್ಸಸ್ ಆಗಿ. ಎಲ್ಲಾ ಕಡೆ ಅಬ್ಬರಿಸಲು ಶುರುವಾದ ನಂತರ, ಅನಿವಾರ್ಯವಾಗಿ ರಿಷಬ್ ಶೆಟ್ಟಿ ಅವರು ಕಾಂತಾರ ಸಿನಿಮಾ ಮುಂದುವರಿದ ಭಾಗಕ್ಕೆ ಸಜ್ಜಾದರು. ಹೀಗಾಗಿ ಬ್ಯಾಚುಲರ್‌ ಪಾರ್ಟಿ ಸಿನಿಮಾ ಬಿಟ್ಟುಕೊಟ್ಟರು.

Sandalwood Movie Bachelor Party Getting Good Review From The Fans

ಯೋಗಿ ಬಂದರು ಯೋಗಿ!

'ಬ್ಯಾಚುಲರ್‌ ಪಾರ್ಟಿ' ಟೈಟಲ್‌ನಡಿ ರಿಲೀಸ್ ಆಗಿದ್ದ ಸಿನಿಮಾ ಒಂದರ ಫಸ್ಟ್ ಲುಕ್ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿತ್ತು. 'ಬ್ಯಾಚುಲರ್‌ ಪಾರ್ಟಿ' ಫಸ್ಟ್ ಲುಕ್ ನೋಡಿದ್ದ ಅಭಿಮಾನಿಗಳು ಥ್ರಿಲ್ ಆಗಿದ್ದರು. ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಜತೆಗೆ ಅಚ್ಯುತ್ ಕುಮಾರ್ ಮತ್ತು ದಿಗಂತ್ ನಟಿಸೋದು ಗ್ಯಾರಂಟಿ ಆಗಿತ್ತು. ಆದರೆ 'ಕಾಂತಾರ' ಅಬ್ಬರದ ಎದುರು, ಎಲ್ಲವೂ ಬದಲಾಗಿ ಹೋಗಿತ್ತು.

ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು?

ನಟ ರಿಷಬ್ ಶೆಟ್ಟಿ ತಮ್ಮ ಪೂರ್ಣ ಗಮನ ಕಾಂತಾರ-1 ಸಿನಿಮಾ ಮೇಲೆ ಕೇಂದ್ರೀಕರಿಸಿದ್ದರಿಂದ 'ಬ್ಯಾಚುಲರ್‌ ಪಾರ್ಟಿ' ಬಿಟ್ಟುಕೊಟ್ಟರು. ಅವರ ಜಾಗಕ್ಕೆ ಲೂಸ್ ಮಾದ ಯೋಗಿ ಬಂದರು ಈ ಸಿನಿಮಾ ಈಗ ರಿಲೀಸ್ ಆಗಿ ಬೆಳ್ಳಿತೆರೆ ಮೇಲೂ ಅಬ್ಬರಿಸುತ್ತಿದೆ. ಹಾಗೇ ಯೋಗಿ ನಟನೆಗೂ ಪ್ರೇಕ್ಷಕ ಫಿದಾ ಆಗಿದ್ದಾನೆ. ಹಾಗೆ ಬ್ಯಾಚುಲರ್‌ ಪಾರ್ಟಿ ಸಿನಿಮಾ ಅತ್ಯುತ್ತಮವಾದ ರಿವ್ಯೂವ್ ಕೂಡ ಪಡೆಯುತ್ತಿದೆ.

ಸಖತ್ ಮಜವಾಗಿದೆ 'ಬ್ಯಾಚುಲರ್‌ ಪಾರ್ಟಿ'

ಗಣರಾಜ್ಯೋತ್ಸದ ದಿನವೇ ರಿಲೀಸ್ ಆಗಿದ್ದ 'ಬ್ಯಾಚುಲರ್‌ ಪಾರ್ಟಿ'ಗೆ, ಭರ್ಜರಿ ಬೆಂಬಲವೂ ಸಿಗುತ್ತಿದೆ. ಲೂಸ್ ಮಾದ ಯೋಗಿ & ದೂದ್ ಪೇಡ ದಿಗಂತ್ ಜೊತೆಗೆ ನಟ ಅಚ್ಯುತ್ ಅವರಿಗು ಫುಲ್ ಮಾರ್ಕ್ಸ್ ಸಿಕ್ಕಿದೆ. ಫ್ಯಾಮಿಲಿ ಜಂಜಾಟದ ನಡುವೆ ಹೊರ ದೇಶಕ್ಕೆ ಹೋಗುವವರ ಬಗ್ಗೆ ಈ ಸಿನಿಮಾ ಕಥೆ ಹೆಣೆಯಲಾಗಿದೆ. ಹೀಗಾಗಿ ಪ್ರೇಕ್ಷಕರು ಕೂಡ ಎಂಜಾಯ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+