ನವರಸ ನಾಯಕ ಜಗ್ಗೇಶ್ + ಏನಿಲ್ಲ ಏನಿಲ್ಲ = ಫುಲ್ ಎಂಟರ್‌ಟೈನ್‌ಮೆಂಟ್ ಗುರೂ!
ನಟ ಜಗ್ಗೇಶ್ ತಮ್ಮ ಕಾಮಿಡಿ ಮೂಲಕವೇ ಕನ್ನಡಿಗರ ಮನಸ್ಸನ್ನು ಗೆದ್ದರು. ಹೀಗೆ ಇಡೀ ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ವಿಭಿನ್ನ ಮ್ಯಾನರಿಸಂನ ಮೂಲಕ ನವರಸ ನಾಯಕರಾದ ಜಗ್ಗೇಶ್ ಅವರು ಸೌಂಡ್ ಮಾಡಿದ್ದಾರೆ. ಕನ್ನಡ ಸಿನಿ ರಂಗದಲ್ಲಿ, ಲೆಜೆಂಡ್ ಆಗಿರುವ ಜಗ್ಗೇಶ್ ಅವರಿಗೂ ಇದೀಗ ಉಪೇಂದ್ರ ಸಿನಿಮಾದ 'ಏನಿಲ್ಲ ಏನಿಲ್ಲ, ನಿನ್ನ ನನ್ನ ನಡುವೆ ಏನಿಲ್ಲ..' ಸಾಂಗ್ ಬೆನ್ನುಹತ್ತಿದೆ!
ಹೌದು, ಇದು ಸೋಷಿಯಲ್ ಮೀಡಿಯಾ ಜಮಾನ. ಇಲ್ಲಿ ಏನೇ ಆದ್ರೂ ಜನ ಮೊದಲು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಅಲ್ಲಿ ಅಪ್‌ಡೇಟ್ ಮಾಡ್ತಾರೆ. ಅದ್ರಲ್ಲೂ ಭಗ್ನಪ್ರೇಮಿಗಳ ನೋವು ಹೇಳಿಕೊಳ್ಳುವ ತಾಣ ಸೋಷಿಯಲ್ ಮೀಡಿಯಾ. ಇಂತಹ ಜಾಗದಲ್ಲಿ ಈಗ ಭಾರಿ ಸದ್ದು ಮಾಡುತ್ತಿರುವ ಒಂದೇ ಒಂದು ಹಾಡೆಂದರೆ 'ಏನಿಲ್ಲ ಏನಿಲ್ಲ'. 1999ರ ಅಕ್ಟೋಬರ್ 22ರಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದ, ಕನ್ನಡಿಗರ 'ಉಪೇಂದ್ರ' ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಹಾಗೇ ಈ ಸಿನಿಮಾದ 'ಏನಿಲ್ಲ ಏನಿಲ್ಲ' ಹಾಡು ದೊಡ್ಡ ಹಿಟ್ ಕಂಡು ಸಿಕ್ಕಾಪಟ್ಟೆ ಮಿಂಚು ಹರಿಸಿತ್ತು. ಇದೇ ಹಾಡು ಈಗ ಮತ್ತೆ ಹವಾ ಎಬ್ಬಿಸಿದೆ.

ಎಲ್ಲೆಲ್ಲೂ ಹಬ್ಬಿದೆ 'ಏನಿಲ್ಲ ಏನಿಲ್ಲ'!
ಉತ್ತರ ಕರ್ನಾಟಕ ಮೂಲದ ಯುವಕನೊಬ್ಬ, ಉಪೇಂದ್ರ ಸಿನಿಮಾದ ಏನಿಲ್ಲ ಏನಿಲ್ಲ ಹಾಡಿನ ಸಾಲು ಬಳಸಿ ಡೈಲಾಗ್ ಹೊಡೆದು ಅದನ್ನ ರೀಲ್ಸ್ ಮಾಡಿ ಹಾಕಿದ್ದರು. ಈ ಮೂಲಕ ಕೈಕೊಟ್ಟ ಹುಡುಗಿ ಬಗ್ಗೆ ಮಾತನಾಡಿದ್ದರು. ಈಗ ಆ ಯುವಕನ ಈ ಒರಿಜಿನಲ್ ಡೈಲಾಗ್ ಹಾಗೂ ಏನಿಲ್ಲ ಏನಿಲ್ಲ ಸಾಂಗ್ ವೈರಲ್ ಆಗುತ್ತಿದೆ. ಇದೇ ಸಮಯದಲ್ಲೇ ನಟ ಜಗ್ಗೇಶ್ ಅವರ ಡಾನ್ಸ್‌ಗೆ ಕೂಡ ಏನಿಲ್ಲ ಏನಿಲ್ಲ ಹಾಡಿನ ಜೊತೆ ಸಿಂಕ್ ಆಗಿದೆ. ಈ ಮೂಲಕ ಸಖತ್ ಸೌಂಡ್ ಮಾಡುತ್ತಿದೆ ಉಪೇಂದ್ರ ಸಿನಿಮಾದ ಹಾಡು. ಈಗ ಸ್ವತಃ ಜಗ್ಗೇಶ್ ಅವರು ಉಪೇಂದ್ರ ಸಿನಿಮಾದ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಜಗ್ಗೇಶ್ ಹೇಳಿದ್ದೇನು?
ನಟ ಜಗ್ಗೇಶ್ ಮನದ ಮಾತು...
ಅಷ್ಟಕ್ಕೂ ಜಗ್ಗೇಶ್ ಅವರ ಹಾಡಿಗೆ ಇದೀಗ 'ಏನಿಲ್ಲ ಏನಿಲ್ಲ' ಮತ್ತು 'ಮೊಯೆ ಮೊಯೆ' ಹಾಡಿನ ಮ್ಯೂಸಿಕ್ ರಿಮಿಕ್ಸ್ ಮಾಡಿ ಹಾಕಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದೆ, ಈ ಮಧ್ಯೆ ಸ್ವತಃ ಜಗ್ಗೇಶ್ ಕೂಡ ವಿಡಿಯೋ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಹಾಗೇ ಈ ವಿಡಿಯೋ ನೋಡಿ ಕನ್ನಡಿಗರು ಕೂಡ ಖುಷ್ ಆಗಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಅವರು, ಈ ಹಾಡಿನ ರಿಮಿಕ್ಸ್ ಬಗ್ಗೆ ಹೇಳಿದ್ದಾದರೂ ಏನು?

ಕನ್ನಡಿಗರಿಗೆ ಜಗ್ಗೇಶ್ ಧನ್ಯವಾದ
ಈ ಬಗ್ಗೆ ಟ್ವೀಟ್ ಮಾಡಿರುವ ನವರಸ ನಾಯಕ ಜಗ್ಗೇಶ್, 'ಕನ್ನಡಿಗರಿಗೆ ನನ್ನ ಮೇಲಿನ ಪ್ರೀತಿ ಇದು🙏🙏🙏 ನನ್ನ ಹೃದಯ ನಿಮ್ಮ ಬಳಿ ಆಡವಿಟ್ಟು 40 ವರ್ಷವಾಗಿದೆ. ನಾನು ಬಿಡಿಸಿಕೊಳ್ಳುವುದಿಲ್ಲಾ ನೀವು ವಾಪಸ್ ಮಾಡದಿರಿ 🙏🙏🙏🙏 ಧನ್ಯವಾದ ಹರಸಿದ ಕನ್ನಡದ ಮನಗಳಿಗೆ🙏' ಎಂದು ಟ್ವೀಟ್ ಮಾಡಿದ್ದಾರೆ. ಹಾಗೇ ಕನ್ನಡಿಗರಿಗೆ ಧನ್ಯವಾದ ಕೂಡ ಅರ್ಪಿಸಿದ್ದಾರೆ.
ಕನ್ನಡಿಗರಿಗೆ ನನ್ನ ಮೇಲಿನಪ್ರೀತಿ ಇದು🙏🙏🙏
— ನವರಸನಾಯಕ ಜಗ್ಗೇಶ್ (@Jaggesh2) February 5, 2024
ನನ್ನ ಹೃದಯ ನಿಮ್ಮ ಬಳಿ ಆಡವಿಟ್ಟು 40ವರ್ಷವಾಗಿದೆ..ನಾನು ಬಿಡಿಸಿಕೊಳ್ಳುವುದಿಲ್ಲಾ ನೀವು ವಾಪಸ್ ಮಾಡದಿರಿ 🙏🙏🙏🙏
ಧನ್ಯವಾದ ಹರಸಿದ ಕನ್ನಡದ ಮನಗಳಿಗೆ🙏 pic.twitter.com/R92LIRBxyb
25 ವರ್ಷ ನಂತರ ವೈರಲ್!
'ಏನಿಲ್ಲ ಏನಿಲ್ಲ' ಹಾಡು ವೈರಲ್ ಆಗಿದ್ದೇ ತಡ ಸೋಷಿಯಲ್ ಮೀಡಿಯಾ ಪೂರ್ತಿ ಈ ಹಾಡು ಧೂಳೆಬ್ಬಿಸಿದೆ. ಹಾಗೇ ರೀಲ್ಸ್ ಸ್ಟಾರ್ಸ್ ಕೂಡ ಈ ಹಾಡಿಗೆ ಈಗ ತುಟಿ ಪೋಣಿಸಿ, ರೀಲ್ಸ್ ಮಾಡ್ತಾ 'ಏನಿಲ್ಲ ಏನಿಲ್ಲ' ಹಾಡಿನ ಸಂಭ್ರಮದಲ್ಲಿ ಕೈಜೋಡಿಸಿದ್ದಾರೆ. ಈ ಮೂಲಕ ಬರೋಬ್ಬರಿ 25 ವರ್ಷ ನಂತರ ಮತ್ತೆ ಉಪೇಂದ್ರ ಅವರ ಸಿನಿಮಾ ಹಾಡು ಫುಲ್ ವೈರಲ್ ಆಗುತ್ತಿದೆ.
ಒಟ್ನಲ್ಲಿ ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ಹವಾ ಎಬ್ಬಿಸಿರುವ ಸಮಯದಲ್ಲೇ ಮತ್ತೆ, ಮತ್ತೆ ಸ್ಯಾಂಡಲ್‌ವುಡ್ ಮಿಂಚುತ್ತಿದೆ. ಹೊಸ ಸಿನಿಮಾಗಳು ಮಾತ್ರವಲ್ಲ ಹಳೆಯ ಸಿನಿಮಾ ಕೂಡ ಭಾರಿ ಸೌಂಡ್ ಮಾಡುತ್ತಿವೆ. ಇನ್ನು ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಅವರ ಹಳೆಯ ಸಿನಿಮಾಗೆ ಕೂಡ ಮತ್ತೊಮ್ಮೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.












Click it and Unblock the Notifications