Radhika Pandit: ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಯಶ್ ಮನದರಸಿ ರಾಧಿಕಾ ಪಂಡಿತ್
ರಾಕಿಂಗ್ ಸ್ಟಾರ್ ಯಶ್ ಮನದರಸಿ, ಮೊಗ್ಗಿನ ಮನಸಿನ ಹುಡುಗಿ ನಟಿ ರಾಧಿಕಾ ಪಂಡಿತ್ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳದೇ ಕೆಲವು ವರ್ಷಗಳು ಕಳೆದು ಹೋಯ್ತು. ಕೊನೆಯದಾಗಿ ಆದಿ ಲಕ್ಷ್ಮೀ ಪುರಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು ಬಳಿಕ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾದರು.
ನಟಿ ರಾಧಿಕಾ ಪಂಡಿತ್ ಕಥೆಯ ಆಯ್ಕೆಯಲ್ಲಿ ಬಹಳ ಜಾಗರೂಕರಾಗಿದ್ದು, ಮೊಗ್ಗಿನ ಮನಸ್ಸು ಸಿನಿಮಾ ಸೇರಿದಂತೆ 11 ವರ್ಷಗಳಲ್ಲಿ 21 ಸಿನಿಮಾ ಮಾಡಿದ್ದರು. ಸದ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಾಧಿಕಾ ಪಂಡಿತ್ ಬೆಳ್ಳಿ ತೆರೆಗೆ ಮರಳಿ ಬರುವುದು ಯಾವಾಗ? ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಅಲ್ಲದೇ ರಾಧಿಕಾ ಪಂಡಿತ್ ಅಭಿಮಾನಿಗಳು ಮಾತ್ರವಲ್ಲದೇ ಯಶ್ ಅಭಿಮಾನಿಗಳು ಕೂಡ ರಾಧಿಕಾ ಪಂಡಿತ್ ಕಂಬ್ಯಾಕ್‌ಗೆ ಕಾತುರರಾಗಿದ್ದಾರೆ.

ಇತ್ತೀಚಿಗೆ ರಾಧಿಕಾ ಪಂಡಿತ್ ಕೆಲವು ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಹಿಂದಿನ ಲುಕ್‌ಗೆ ವಾಪಸ್ ಆಗಿದ್ದಾರೆ. ಇಬ್ಬರು ಮಕ್ಕಳ ತಾಯಾಗಿರುವ ರಾಧಿಕಾ ಪಂಡಿತ್ ಅವರ ಬ್ಯೂಟಿ ಸೀಕ್ರೆಟ್ ಏನಿರಬಹುದು ಎನ್ನುವ ಪ್ರಶ್ನೆಗೆ ಇದೀಗ ಸ್ವತಃ ರಾಧಿಕಾ ಪಂಡಿತ್ ಅವರೇ ಉತ್ತರಿಸಿದ್ದು, ಅವರ ಉತ್ತರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ರೇಗಲ್ ಜ್ಯುವೆಲ್ಸ್(Regal Jewellers) ಕಾರ್ಯಕ್ರಮಕ್ಕೆ ಬಂದ ರಾಧಿಕಾ ಪಂಡಿತ್ ಅವರಿಗೆ ಅಭಿಮಾನಿಯೊಬ್ಬರು ಯಶ್, ರಾಧಿಕಾ ಪಂಡಿತ್, ಐರಾ ಹಾಗೂ ಯಥರ್ವ ಫೋಟೋವನ್ನು ಸ್ಕೆಚ್ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ನೋಡುತ್ತಿದ್ದಂತೆ ಫುಲ್ ಖುಷಿಯಾದ ರಾಧಿಕಾ ಪಂಡಿತ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಯಶ್ ಅವರ ಬಗ್ಗೆ ಮಾತನಾಡಿದ್ದಾರೆ.

'ಇಂದು ಯಶ್ ಅವರು ನಮ್ಮೆಲ್ಲರ ಹೆಮ್ಮೆ. ನನ್ನ ನಗುವಿನ ಹಿಂದಿನ ಕಾರಣ ಅವರು. ನನ್ನ ಬ್ಯೂಟಿ ಸೀಕ್ರೆಟ್ ಏನು ಎಂದು ಎಲ್ಲರೂ ಕೇಳುತ್ತಿರುತ್ತಾರೆ. ನಾನು ಇಷ್ಟೊಂದು ಖುಷಿ ಖುಷಿಯಾಗಿ ನಗುನಗುತ್ತಾ ಇದ್ದೇನೆ ಅಂದರೆ ಅದಕ್ಕೆ ಕಾರಣ ಯಶ್' ಎಂದು ಬಹಳ ಪ್ರೀತಿಯಿಂದ ಹಾಗೂ ಹೆಮ್ಮೆಯಿಂದ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.
ಇನ್ನು ತಾವು ಹಾಗೂ ಯಶ್ ತಮ್ಮ ಮಕ್ಕಳನ್ನು ಬೆಳೆಸುತ್ತಿರುವ ಪರಿ ಬಗ್ಗೆ ಮಾತನಾಡಿದ ಅವರು, 'ನಾನು ತುಂಬಾ ಶಿಸ್ತಿನಿಂದ ಬೆಳೆಸುತ್ತಿದ್ದೇನೆ. ಆದರೆ ಯಶ್ ಅವರು ಮಕ್ಕಳನ್ನು ತುಂಬಾ ಮುದ್ದು ಮಾಡುತ್ತಾರೆ. ಅವರಿಗೆ ಅವರ ತಂದೆ ಎಂದರೆ ಎಲ್ಲಾ. ನಾನು ಶಿಸ್ತಿನಿಂದ ಇರುವುದರಿಂದ ಅವರಿಬ್ಬರು ಏನೇ ಬೇಕಿದ್ದರು ಅಪ್ಪನನ್ನು ಕೇಳುತ್ತಾರೆ. ತಾಯಂದಿರು ಶಿಸ್ತಿನಿಂದ ಇರಬೇಕು. ಇಲ್ಲ ಅಂದರೆ ಮಕ್ಕಳಲ್ಲಿ ಶಿಸ್ತು ಬೆಳೆಸುವುದು ಹೇಗೆ?' ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.












Click it and Unblock the Notifications