Neethu Shetty: 'ದಪ್ಪ ಇದಿಯಾ ಅಂದ್ರೆ ದಿನಾ ಯಾರೋ ಜೊತೆ ಮಜಾ ಮಾಡ್ತಿದ್ದೀಯಾ ಅಂತಾರೆ'
ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಾಯಕಿಯರು ಕೆಲವೇ ಕೆಲವು ಸಿನಿಮಾಗಳನ್ನು ಕೊಟ್ಟು ತೆರೆಮರೆಗೆ ಸರಿದಿದ್ದಾರೆ. ಆದರೆ ಅವರು ಅಭಿನಯಿಸಿದ ಚಿತ್ರಗಳು ಸೂಪರ್ ಹಿಟ್ ಹಾಗೂ ಜನರ ಮನಸ್ಸಿನಲ್ಲಿ ಸದಾ ಉಳಿಯುವ ಚಿತ್ರಗಳು. ಅಂತವರ ಪೈಕಿ ನಟಿ ನೀತು ಶೆಟ್ಟಿ ಕೂಡ ಒಬ್ಬರು. ಪೂಜಾರಿ, ಗಾಳಿಪಟದಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ನೀತು ಶೆಟ್ಟಿ ಸದ್ಯ ಬೆಳ್ಳಿ ತೆರೆಯಿಂದ ಅಂತರದಲ್ಲಿದ್ದಾರೆ.
ಸಾಲು ಸಾಲು ಸಿನಿಮಾಗಳನ್ನು ನೀಡುವಾಗಲೇ ತಮ್ಮ ವೈಯಕ್ತಿಕ ಜೀವನದಲ್ಲಿ ಆದ ಬದಲಾವಣೆಗಳಿಂದ ನೀತು ತೆರೆಮರೆಗೆ ಸರಿದಿದ್ದರು. ಆದರೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿದ್ದಾರೆ. ಪಟಪಟ ಮಾತಿನ ಮಲ್ಲಿ ಎನಿಸಿಕೊಂಡಿದ್ದ ನೀತು ತಮ್ಮ ಜೀವನದಲ್ಲಾದ ಬದಲಾವಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ತಮ್ಮ ದೇಹದ ಬಗ್ಗೆ ಕಮೆಂಟ್ ಮಾಡುವವರ ಬಗ್ಗೆ ನೀನು ದಪ್ಪ ಎಂದು ಕಾಲೆಳೆಯುವರ ಬಗ್ಗೆ ನೀತು ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಮಾತನಾಡಿದ್ದು, ಕೆಲವು ಜನರ ಆಲೋಚನೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ನಟಿ ನೀತು 'ದಪ್ಪ ಇದಿಯಾ ಅಂದ್ರೆ ನೀನು ದಿನ ಯಾರೋ ಜೊತೆಗೆ ಇದಿಯಾ ಎನ್ನುವ ಕೆಟ್ಟ ಆಲೋಚನೆ ಇದೆ ಜನರಲ್ಲಿ. ಆ ಸಮಯದಲ್ಲಿ ನಿಮಗೆ ಬಾಯ್‌ಫ್ರೆಂಡ್ ಕೂಡ ಇರದೇ ಇರಬಹುದು. ದಪ್ಪ ಇದೀಯಾ ಅಂದ್ರೆ ಮಜಾ ಮಾಡ್ತಿದ್ದೀಯಾ ಎನ್ನುವಂತದ್ದು ಇದೆ. ಇದು ನನಗೆ ತುಂಬಾ ನೋವು ಕೊಟ್ಟ ಮಾತುಗಳು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಕೆಲವರು ನಮ್ಮ ಬಗ್ಗೆ ಎಲ್ಲಿ ತನಕ ಯೋಜನೆ ಮಾಡ್ತಾರೆ ಎನ್ನುವುದನ್ನು ಹೇಳುತ್ತಿದ್ದೇನೆ ಅಷ್ಟೇ. ನಮ್ಮ ಬೆಡ್‌ರೂಮ್‌ಯಿಂದ ಹಿಡಿದು ನಮ್ಮ ಊಟದ ತನಕ ಎಲ್ಲಾ ಯೋಚನೆ ಮಾಡುತ್ತಾರೆ. ಅವರು ಅಷ್ಟು ಯೋಚನೆ ಮಾಡುತ್ತಾರೆ ಎನ್ನುವುದು ಅಸಹ್ಯ. ನೀನು ದಪ್ಪ ಇದಿಯಾ ಅಂದ್ರೆ ಅವರ ಆಲೋಚನೆ ಅಲ್ಲಿ ತನಕನೂ ಹೋಗುತ್ತದೆ. ನನ್ನ ಮನಸ್ಸು ತುಂಬಾ ಸೂಕ್ಷ್ಮ ಇರಬಹುದು..ನನಗೆ ಅದು ಪರಿಣಾಮ ಬೀರಬಹುದು. ಅವರಿಗೇನು ಅಂದ್ರೆ ದಪ್ಪ ನೀನಿರುವುದು ಸಣ್ಣ ಆದ್ರೆ ನಾವೇನು ಹೇಳಲ್ಲ ಎನ್ನುವ ಮೆಂಟಾಲಿಟಿ ಕೆಲವರಿಗಿದೆ' ಎಂದು ನೀತು ತಮಗೆ ತುಂಬಾ ಬೇಸರವಾದ ಚುಚ್ಚು ಮಾತಿನ ಬಗ್ಗೆ ಮಾತನಾಡಿದ್ದಾರೆ.
ಮಾತು ಮುಂದುವರಿಸಿದ ನೀತು, 'ಯಾವುದೋ ಒಂದು ವಿಷಯಕ್ಕೆ ನನ್ನ ಅಭಿಪ್ರಾಯ ಇದೆ ಅಂತಾ ತಿಳಿದುಕೊಳ್ಳಿ. ನಾನು ಅದನ್ನು ಬರೆಯುತ್ತೇನೆ. ಅದು ಸಾಮಾನ್ಯದ ಅಭಿಪ್ರಾಯಕ್ಕಿಂತ ಸ್ವಲ್ಪ ಬೇರೆ ಅಭಿಪ್ರಾಯ ಇರುತ್ತದೆ ಅಂದುಕೊಳ್ಳಿ. ಆ ಸಂದರ್ಭದಲ್ಲಿಯೂ ಮೊದಲು ನೀನು ಸಣ್ಣ ಆಗು ಆಮೇಲೆ ನೀನು ಮಾತನಾಡು ಅಂತಾರೆ. ತೂಕಕ್ಕೂ ಆಲೋಚನೆಗೂ ಸಂಬಂಧನೇ ಇಲ್ಲ. ಅಭಿಪ್ರಾಯ ನನ್ನದು ಅದಕ್ಕೆ ನನ್ನ ದೇಹ ಹೇಗೆ ವಿಷಯವಾಗುತ್ತದೆ' ಎಂದು ಪ್ರಶ್ನಿಸಿದ್ದಾರೆ.
'ಅಲ್ಲದೇ ಈ ರೀತಿ ಆಲೋಚನೆ ಮಾಡುವವರು ಅಲ್ಲೇ ಇರುತ್ತಾರೆ ಮುಂದೆ ಬೆಳೆಯಲಾಗುವುದಿಲ್ಲ. ಆದರೆ ಈ ರೀತಿ ಕಮೆಂಟ್‌ಗಳಿಂದ ಡಿಪ್ರೆಷನ್ ಜಾಸ್ತಿಯಾಗುತ್ತದೆ. ಪ್ಯಾನಿಕ್ ಅಟ್ಯಾಕ್‌ನಂತಹ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತದೆ' ಎಂದು ನಟಿ ನೀತು ಶೆಟ್ಟಿ ಹೇಳಿದ್ದಾರೆ.
-
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ












Click it and Unblock the Notifications