Amrutha Iyengar: ಮದುವೆ ಬಗ್ಗೆ ಶಾಕಿಂಗ್ ಉತ್ತರ ಕೊಟ್ಟ ನಟಿ ಅಮೃತಾ: ಅಂತದ್ದೇನಾಯ್ತು..?
ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ನಟಿ ಅಮೃತಾ ಅಯ್ಯಂಗಾರ್ ಸಾಲು ಸಾಲು ಹಿಟ್ ಸಿನಿಮಾಗಳನ್ನೇ ನೀಡುತ್ತಾ ಕನ್ನಡಿಗರ ಮೆಚ್ಚಿನ ನಾಯಕಿಯಾಗಿದ್ದಾರೆ. ಸದ್ಯ ತಮ್ಮ ಹದಿನಾರನೇ ಸಿನಿಮಾ ಫಾದರ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಚಿತ್ರರಂಗದಲ್ಲಿ ಯಶಸ್ಸು ಕಾಣುತ್ತಿರುವ ಅಮೃತಾ ಅಯ್ಯಂಗಾರ್ ಅವರ ಖಾಸಗಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೂ ಕೂಡ ಕಾತುರರತೆ ಇದೆ. ಅಮೃತಾ ಅವರ ಮದುವೆ ಬಗ್ಗೆ ಆಗಾಗ ಊಹಾಪೋಹಗಳು ಹರಿದಾಡುತ್ತಿರುತ್ತದೆ. ಹೀಗಾಗಿ ಅಭಿಮಾನಿಗಳು ಕೂಡ ಅಮೃತಾ ಅಯ್ಯಂಗಾರ್ ಅವರ ಮದುವೆ ಅಪ್ಡೇಟ್ ಬಗ್ಗೆ ಯಾವುದೇ ಸುದ್ದಿ ಹರಿದಾಡಿದರೂ ಕೂಡ ಕುತೂಹಲದಿಂದ ವೀಕ್ಷಿಸುತ್ತಾರೆ. ಹೀಗಾಗಿ ಇದೀಗ ತಮ್ಮ ಮದುವೆ ಬಗ್ಗೆ ಸ್ವತಃ ಅಮೃತಾ ಅಯ್ಯಂಗಾರ್ ಅವರೇ ಉತ್ತರ ಕೊಟ್ಟಿದ್ದು, ಈ ಉತ್ತರಕ್ಕೆ ಅಭಿಮಾನಿಗಳು ಶಾಕ್ ಆಗಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೊಸ ಫೋಟೋಶೂಟ್‌ಗಳ ಫೋಟೋಗಳನ್ನು ಶೇರ್ ಮಾಡುವ ಮೂಲಕ ಆ್ಯಕ್ಟಿವ್ ಇರುವ ಅಮೃತಾ ಅಯ್ಯಂಗಾರ್ ಅವರು ಅಭಿಮಾನಿಗಳ ಜೊತೆಗೂ ಸಂಪರ್ಕದಲ್ಲಿರುತ್ತಾರೆ. ಹೀಗಾಗಿ ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡಬೇಕು ಎಂದುಕೊಂಡ ಅಮೃತಾ ಅವರು, ಇತ್ತೀಚಿಗೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ 'Ask me anything' ಎಂದು ಹಾಕಿಕೊಂಡಿದ್ದಾರೆ.
ಅಮೃತಾ ಅಯ್ಯಂಗಾರ್ ಈ ಸ್ಟೋರಿ ಹಾಕಿದ್ದೇ ತಡ ಅಭಿಮಾನಿಗಳು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಇದರಲ್ಲಿ ಒಂದು ಪ್ರಶ್ನೆ ಇಂಟ್ರಸ್ಟಿಂಗ್ ಅನಿಸಿದ್ದು, ಅಮೃತಾ ಕೂಡ ಇದಕ್ಕೆ ಉತ್ತರಿಸಿದ್ದಾರೆ. ಆದರೆ ಈ ಉತ್ತರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಮೃತಾ ಅಯ್ಯಂಗಾರ್ 'Ask me anything' ಸ್ಟೋರಿಗೆ ಅಭಿಮಾನಿಯೊಬ್ಬರು ಮದುವೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿದ ಅಮೃತಾ ಅಯ್ಯಂಗಾರ್ ನಿಷೇಧ ಚಿಹ್ನೆ ಹಾಕಿದ್ದಾರೆ. ನಟಿಯ ಈ ಉತ್ತರ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿಷೇಧ ಚಿಹ್ನೆ ಅಂದರೆ ಏನು ಅರ್ಥ..? ಮುದ್ದಾದ ನಟಿ ಅಮೃತಾ ಅಯ್ಯಂಗಾರ್ ಮದುವೆನೇ ಆಗಾಲ್ವಾ..? ಅಥವಾ ಈ ಸದ್ಯಕ್ಕೆ ಇಲ್ವಾ ಎಂದು ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಆದರೆ ಈ ಉತ್ತರದ ಮೂಲಕ ತಮ್ಮ ಮದುವೆ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಅಮೃತಾ ಅಯ್ಯಂಗಾರ್ ಫುಲ್ ಸ್ಟಾಪ್ ಹಾಕಿದ್ದಾರೆ.












Click it and Unblock the Notifications