Get Updates
Get notified of breaking news, exclusive insights, and must-see stories!

Samantha Ruth Prabhu: ಸಮಂತಾಗೂ ಕಾಡಿದ ಫ್ಯಾನ್ಸ್‌, ಕಿರಿಕಿರಿಯಿಂದ ವಾಪಸ್ಸಾದ ನಟಿ; ವಿಡಿಯೋ ವೈರಲ್

ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕರೆ ಅಭಿಮಾನಿಗಳು ಖುಷಿಪಡುತ್ತಾರೆ. ಸೆಲ್ಫಿಗಾಗಿ ಮುಗಿಬೀಳುವುದು ಕೂಡ ಸಾಮಾನ್ಯ. ಆದರೆ ಅಭಿಮಾನದ ಹೆಸರಿನಲ್ಲಿ ಅತಿರೇಕ ಹಾಗೂ ಅನುಚಿತವಾಗಿ ವರ್ತನೆ ಮಾಡುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗಷ್ಟೇ ನಟಿ ನಿಧಿ ಅಗರ್ವಾಲ್‌ ಅವರ ಮೇಲೆ ಅಭಿಮಾನಿಗಳು ಮುಗಿಬಿದ್ದಿದ್ದ ಘಟನೆ ವರದಿಯಾಗಿತ್ತು. ಈ ವಿಡಿಯೋ ವೈರಲ್‌ ಕೂಡ ಆಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ನಟಿಗೆ ಇದೇ ಕಹಿ ಅನುಭವ ಆಗಿದೆ. ನಟಿ ಸಮಂತಾ ರುತ್‌ ಪ್ರಭು ಮೇಲೂ ಅಭಿಮಾನಿಗಳ ಗುಂಪು ಮೈಮೇಲೆ ಬಿದ್ದಿದ್ದು, ಇದರಿಂದ ನಟಿ ಕಿರಿಕಿರಿ ಅನುಭವಿಸಿದ್ದಾರೆ.

ಇತ್ತೀಚೆಗೆ "ದಿ ರಾಜಾ ಸಾಬ್" ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಟಿ ನಿಧಿ ಅಗರ್ವಾಲ್ ಅವರನ್ನು ಅಭಿಮಾನಿಗಳು ತಳ್ಳಾಡಿ, ಕೆಟ್ಟದಾಗಿ ನಡೆದಿಕೊಂಡಿದ್ದರು. ಈ ಘಟನೆಯ ವಿಡಿಯೋ ವೈರಲ್ ಆಗಿ ಭಾರೀ ಖಂಡನೆಯೂ ವ್ಯಕ್ತವಾಗಿತ್ತು. ಅಭಿಮಾನಿಗಳು ಈ ರೀತಿ ಮಿತಿ ಮೀರಿ ವರ್ತಿಸುವುದು ತಪ್ಪು ಎಂದು ಬೇಸರ ಹೊರಹಾಕಿದ್ದರು. ಈ ಘಟನೆ ಬೆನ್ನಲ್ಲೇ ನಟಿ ಸಮಂತಾಗೂ ಕೂಡ ಇದೇ ರೀತಿಯ ಕೆಟ್ಟ ಅನುಭವ ಆಗಿದೆ.

Samantha Ruth Prabhu Harassed by Fans Actress Leaves Event In Discomfort

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಾಗ ಸಮಂತಾ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ವೇದಿಕೆಯಿಂದ ತನ್ನ ವಾಹನಕ್ಕೆ ಬರಲು ಪ್ರಯತ್ನಿಸುತ್ತಿರುವಾಗ ಅವರ ಸುತ್ತಲೂ ಭದ್ರತಾ ಸಿಬ್ಬಂದಿ ಇದ್ದರೂ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಇದರ ನಡುವೆ ಸಮಂತಾ ಅಲ್ಲಿಂದ ಹೊರಡಲು ಹರಸಾಹಸವೇ ಪಡಬೇಕಾಯಿತು. ಅಲ್ಲಿದ್ದ ಅಭಿಮಾನಿಗಳ ಗುಂಪು ಕೈಯಲ್ಲಿ ಮೊಬೈಲ್‌ ಹಿಡಿದು ಸಮಂತಾ ಅವರನ್ನು ಸುತ್ತುವರೆದಿದ್ದಾರೆ. ಅಭಿಮಾನದ ಹೆಸರಲ್ಲಿ ನಟಿಗೆ ಕಿರಿಕಿರಿ ಉಂಟಾಗುವಂತೆ ಮಾಡಿದ್ದಾರೆ. ಆದರೂ ಸಮಂತಾ ಶಾಂತವಾಗಿ, ನಗುತ್ತಾ ಮತ್ತು ಸಂಯಮದಿಂದಲೇ ಇದನ್ನು ನಿಭಾಯಿಸಿದ್ದಾರೆ.

ಈ ವಿಡಿಯೋ ಕೂಡ ವೈರಲ್‌ ಆಗಿದ್ದು, ರಾಜಾಸಾಬ್ ಘಟನೆಯ ನಂತರವೂ ಅಭಿಮಾನಿಗಳು ಇನ್ನೂ ಏಕೆ ಈ ರೀತಿ ವರ್ತಿಸುತ್ತಿದ್ದಾರೆ? ಉತ್ಸಾಹ ಒಳ್ಳೆಯದು. ಆದರೆ ಗೌರವ ಮತ್ತು ವೈಯಕ್ತಿಕ ಸ್ಥಳವೂ ಸಹ ಕಲಾವಿದರಿಗೆ ಮುಖ್ಯ. ಯಾಕೆ ಅವರ ವೈಯಕ್ತಿಕ ಸ್ಥಳವನ್ನು ಇನ್ನೂ ಏಕೆ ಗೌರವಿಸುತ್ತಿಲ್ಲ? ಎಂದು ನೆಟ್ಟಿಗರು ಖಂಡಿಸಿದ್ದಾರೆ.

ಮುಜುಗರಕ್ಕೀಡಾದ ನಿಧಿ ಅಗರ್ವಾಲ್

ಕೆಲ ದಿನಗಳ ಹಿಂದಷ್ಟೇ ನಟಿ ನಿಧಿ ಅಗರ್ವಾಲ್‌ ಅವರಿಗೂ ಇದೇ ಅನುಭವ ಆಗಿತ್ತು. ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ಆಯೋಜಿಸಲಾಗಿದ್ದ "ದಿ ರಾಜಾ ಸಾಬ್" ಚಿತ್ರದ ಸಹನಾ ಸಹನಾ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಮಾನಿಗಳ ವರ್ತನೆಯಿಂದ ನಿಧಿ ಅಗರ್ವಾಲ್ ಅವರು ತೀವ್ರ ಮುಜುಗರ ಹಾಗೂ ಆತಂಕಕ್ಕೆ ಒಳಗಾಗಿದ್ದರು. ಕಾರ್ಯಕ್ರಮ ಮುಗಿಸಿ ಹೊರ ಬರುವಾಗ ನೂರಾರು ಅಭಿಮಾನಿಗಳು ಏಕಾಏಕಿ ನಿಧಿ ಅವರನ್ನು ಸುತ್ತುವರೆದಿದ್ದರು. ಸೆಲ್ಫಿ ತೆಗೆಸಿಕೊಳ್ಳುವ ಹಪಾಹಪಿಯಿಂದ ನಟಿಯ ಮೇಲೆ ಮುಗಿಬಿದ್ದಿದ್ದರು. ಕೊನೆಗೆ ಬೌನ್ಸರ್‌ಗಳು ಹರಸಾಹಸ ಪಟ್ಟು, ನಿಧಿ ಅವರನ್ನು ಕಾರಿನವರೆಗೆ ಕರೆದೊಯ್ದಿದ್ದರು.

ಇದು ಪ್ರಮುಖ ಭದ್ರತಾ ಲೋಪ ಎಂದು ಹೇಳಲಾಗಿತ್ತು. ಕಾರ್ಯಕ್ರಮದ ವ್ಯವಸ್ಥಾಪಕರು ಸಭೆಗೆ 'ಯಾವುದೇ ಅನುಮತಿ ತೆಗೆದುಕೊಂಡಿಲ್ಲ' ಎಂದು ಪೊಲೀಸರು ದೃಢಪಡಿಸಿದ್ದರು. ಮೇಲ್ವಿಚಾರಣೆಗಾಗಿ ಮಾಲ್ ಆಡಳಿತದ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಾಂತರ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+