Salman Khan: ಕಿಚ್ಚ ಸುದೀಪ್ ಬೆನ್ನಲ್ಲೆ ನಿರೂಪಣೆಯಿಂದ ಸಲ್ಮಾನ್ ಖಾನ್ ಎಕ್ಸಿಟ್! ಬೇರೆ ನಿರೂಪಕ ಯಾರು?
Bigg Boss: ಎಲ್ಲಿ ನೋಡಿದರೂ ಬಿಗ್ ಬಾಸ್ ರಿಯಾಲಿಟಿ ಶೋನದ್ದೆ ಸುದ್ದಿ. ಇತ್ತೀಚೆಗೆ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಿಂದ ನಟ ಕಿಚ್ಚ ಸುದೀಪ್ ಅವರು ಹೊರ ಬರುವುದಾಗಿ ಘೋಷಿಸಿದ್ದರು. ಬಿಗ್ ಬಾಸ್ 11ನೇ ಸೀಸನ್ ನಡೆಯುವಾಗ ಯಾಕೆ ಈ ದಿಢೀರ್ ನೀರ್ಧಾರ ಘೋಷಲಾಯಿತು ಎಂದು ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದರು. ಇದೀಗ ಸುದೀಪ್ ಬೆನ್ನಲ್ಲೆ ಹಿಂದಿ ಬಿಗ್ ಬಾಸ್ 18ನೇ ಶೋನಿಂದ ನಟ ಸಲ್ಮಾನ್ ಖಾನ್ ಸಹ ಹೊರ ನಡೆಯಲಿದ್ದಾರೆ.
ಹಿಂದಿ 'ದಬಾಂಗ್' 3 ಸಿನಿಮಾದಲ್ಲಿ ಈ ಇಬ್ಬರು ನಟರು ಒಟ್ಟಿಗೆ ನಟಿಸಿದ್ದರು. ಇಬ್ಬರ ಮಧ್ಯೆ ಒಳ್ಳೆ ಸ್ನೇಹ ಸಂಬಂಧವಿದೆ. ಈ ಇಬ್ಬರು ದಶಕಗಳಿಂದ ಬಿಗ್ ಬಾಸ್ ಶೋ ನಡೆಸಿಕೊಂಡು ಬರುತ್ತಿದ್ದರು. ಇದೀಗ ಇಬ್ಬರು ಒಟ್ಟಿಗೆ ಶೋ ಹೋಸ್ಟ್ ಮಾಡುವುದು ನಿಲ್ಲಿಸುತ್ತಿದ್ದಾರೆಯೇ? ಈ ಬಗ್ಗೆ ಅನುಮಾನಗಳಿಗೆ ಉತ್ತರ ಇಲ್ಲಿದೆ.

ಕನ್ನಡದಲ್ಲಿ ನಟ ಸುದೀಪ್ ಕೆಲವು ಕಾರಣಾಂತರಗಳಿಂದ ಮುಂದಿನ ಯಾವ ಬಿಗ್ ಬಾಸ್ ಸೀಸನ್ ಹೋಸ್ಟ್ ಮಾಡುವುದಿಲ್ಲ. ಇದೇ ನನ್ನ ಕೊನೆ ನಿರೂಪಣೆ ಎಂದಿದ್ದಾರೆ. ಆದರೆ ಸಲ್ಮಾನ್ ಅವರದ್ದು ಬೇರೆಯ ಕಥೆ ಇದೆ. ಅವರು ಮೇಲೆ ಹತ್ಯೆಯ ಸಂಚು ನಡೆದಿದೆ. ಈ ಹಿಂದೆಯು ಅವರ ಮನೆ ಶೂಟೌಟ್ ನಡೆದಿತ್ತು. ಇದೀಗ 25 ಲಕ್ಷಕ್ಕೆ ಅವರನ್ನು ಕೊಲೆ ಮಾಡುವುದಾಗಿ ಸುಪಾರಿ ನೀಡಲಾಗಿದೆ ಎಂಬ ಮಾಹಿತಿ ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ಮಧ್ಯೆ ಅವರು ಬಿಗ್ ಬಾಸ್ ಹಿಂದಿ ಶೋ ನಿರೂಪಣೆ ಮಾಡುತ್ತಿದ್ದರು. ಮತ್ತೊಂದೆಡೆ ಬಾಬಾ ಸಿದ್ದಿಕಿ ಕೊಲೆಯಾಗಿದೆ. ಲಾರೆನ್ಸ್ ಬಿಷ್ಣೋಯ್ ಕೈವಾಡ ಈ ಹತ್ಯೆ ಹಿಂದೆ ಇದೆ ಎಂಬ ಮಾತು ಕೇಳಿ ಬಂದಿದೆ. ಈ ಕೊಲೆ ಘಟನೆಯಿಂದ ಬಾಲಿವುಡ್ ಶಾಕ್ ಆಗಿದೆ. ಇತ್ತ ಸಲ್ಮಾನ್ ಖಾನ್ ವಿರುದ್ಧ ಕೊಲೆ ಸಂಚು ಬಹಿರಂಗಗೊಳ್ಳುತ್ತಿದ್ದಂತೆ ಅವರು ಬಿಗ್ ಬಾಸ್ ಶೋನ ಈ ವಾರಾಂತ್ಯ ನಿರೂಪಣೆಯಿಂದ ಅವರು ಹೊರ ಬಂದಿದ್ದಾರೆ ಎನ್ನಲಾಗಿದೆ.
ಭದ್ರತೆ ಕಾರಣ ಹಾಗೂ ಪೊಲೀಸರ ಸಲಹೆ ಮೆರೆಗೆ ಸಲ್ಮಾನ್ ಖಾನ್ ಅವರು ಯಾರನ್ನು ಭೇಟಿ ಮಾಡುತ್ತಿಲ್ಲ. ಈ ಮಧ್ಯೆ ವಾರಾಂತ್ಯಕ್ಕೆ ಬಿಗ್ ಶೋ ನಡೆಸುವುದು ಬೇಡ ಎಂಬ ಸಲಹೆ ಬಂದ ಹಿನ್ನೆಲೆಯಲ್ಲಿ ಅವರು ಈವಾರ ಬಿಗ್ ಬಾಸ್ ಶೋನಿಂದ ಹೊರಗುಳಿದಿದ್ದಾರೆ. ಮತ್ತೊಂದಡೆ ಇಲ್ಲ, ಅವರು ಬಿಗಿ ಭದ್ರತೆ ನಡುವೆ ವಾರಾಂತ್ಯ ಶೋ ನಡೆಸಿಕೊಡುತ್ತಾರೆ ಅಂತಲೂ ತಿಳಿಸಲಾಗಿದೆ.
ಸಲ್ಮಾನ್ ಖಾನ್ ಬದಲಾಗಿ ಯಾರು ಬರ್ತಾರೆ ಶೋಗೆ
ಈ ವಾರಾಂತ್ಯದ ಸಂಚಿಕೆಯಿಂದ ಸಲ್ಮಾನ್ ಹೊರಗುಳಿದ ಬೆನ್ನಲ್ಲೆ ಆ ಶೋ ಅನ್ನು ನಡೆಸಿಕೊಡಲು ಹಲವು ಹಿಂದಿ ನಟರ ಹೆಸರು ಕೇಳಿ ಬರುತ್ತಿದೆ. ಫರಾನ್ ಖಾನ್, ಕರಣ್ ಜೋಹರ್ ಅವರ ಹೆಸರು ಸಹ ಕೇಳಿ ಬಂದಿದೆ. ಇನ್ನೊಂದೆಡೆ ಹಿರಿಯ ನಟ ಅನಿಲ್ ಕಪೂರ್ ಅವರ ಹೆಸರು ಕೇಳಿ ಬರುತ್ತಿದೆ. ಆದರೆ ಬಿಗ್ ಬಾಸ್ ನಿರೂಪಕರೂ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡಬೇಕು.












Click it and Unblock the Notifications