ಟೈಗರ್ 3 ಅಬ್ಬರ: ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ ಫ್ಯಾನ್ಸ್, ಮುಂದೆ ಏನಾಯ್ತು?
ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಸಿನಿಮಾ ರಿಲೀಸ್ ಆಗಿ, ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದು ಈ ಸಿನಿಮಾ ಕಣ್ತುಂಬಿಕೊಳ್ಳಲು ಥಿಯೇಟರ್‌ಗೆ ಮುಗಿಬಿದ್ದಿದ್ದಾರೆ. ಆದರೆ ಇದೇ ಸಮಯದಲ್ಲಿ, ಕೆಲವರು ಮಾಡಿದ ಕಿಡಿಗೇಡಿ ಕೆಲಸದಿಂದ ನೂರಾರು ಜನರ ಜೀವ ಆಪತ್ತಿಗೆ ಸಿಲುಕಿತ್ತು. ಥಿಯೇಟರ್ ಒಳಗಡೆಯೇ ಪಟಾಕಿ ಸಿಡಿಸಿದ ಪರಿಣಾಮ ಸಲ್ಮಾನ್ ಖಾನ್ ಅಭಿಮಾನಿಗಳು ಎದ್ದು ಬಿದ್ದು ಓಡಿದರು.
ಸಲ್ಮಾನ್ ಖಾನ್ ಅಭಿಯದ ಸಿನಿಮಾಗಳು ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಇರುತ್ತೆ, ಅದರಲ್ಲೂ 'ಟೈಗರ್' ಸರಣಿಯ ಸಿನಿಮಾಗಳಿಗೆ ಭಾರಿ ಬೇಡಿಕೆ ಇದೆ. 'ಟೈಗರ್ 1' ಮತ್ತು 'ಟೈಗರ್ 2' ಹಿಟ್ ಆದ ನಂತರ ಇದೀಗ 'ಟೈಗರ್ 3' ತೆರೆಗೆ ಬಂದಿದ್ದು, ನೂರಾರು ಕೋಟಿ ರೂಪಾಯಿ ಬಾಚುವ ನಿರೀಕ್ಷೆ ಇದೆ. ಆದರೆ ಹೀಗಿದ್ದಾಗಲೇ ಕೆಲವು ಕಿಡಿಗೇಡಿಗಳು ಥಿಯೇಟರ್ ಒಳಗಡೆ ಪಟಾಕಿ ಸಿಡಿಸಿದ್ದಾರೆ. ಸಿನಿಮಾ ನೋಡಲು ಬಂದಿದ್ದ ಸಲ್ಮಾನ್ ಖಾನ್ ಅಭಿಮಾನಿಗಳಿಗೂ ಇದರಿಂದ ಜೀವಹಾನಿ ಎದುರಾಗುವ ವಾತಾವರಣ ಉಂಟಾಗಿತ್ತು.

ಎದ್ದುಬಿದ್ದು ಓಡಿದ ಸಲ್ಮಾನ್ ಫ್ಯಾನ್ಸ್
ಈ ಘಟನೆ ನಡೆದಿದ್ದು ಮಹಾರಾಷ್ಟ್ರ ರಾಜ್ಯದಲ್ಲಿರುವ ಮಲೇಗಾಂವ್ ಪ್ರದೇಶದಲ್ಲಿ. ಟೈಗರ್ 3 ಸಿನಿಮಾ ಪ್ರದರ್ಶನ ನಡೆಯುವಾಗ, ದೀಪಾವಳಿ ಸಂಭ್ರಮದಲ್ಲಿ ಅಭಿಮಾನಿಗಳು ಸಲ್ಮಾನ್ ಖಾನ್‌ರ ನಟನೆಯನ್ನು ಎಂಜಾಯ್ ಮಾಡುತ್ತಿದ್ದರು. ಆದರೆ ಈ ವೇಳೆ ಏಕಾಏಕಿ ಕೆಲವರು ಪಟಾಕಿ ಹಚ್ಚಿದ್ದು ಥಿಯೇಟರ್ ಒಳಗೆ ಬೆಂಕಿ ಕಿಡಿ ಎಲ್ಲೆಂದರಲ್ಲಿ ಹರಡಿದೆ. ತಕ್ಷಣ ಅಲ್ಲಿದ್ದ ಜನರು ಹೆದರಿದ್ದು, ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ನೂರಾರು ಜನ ಕೂತಿದ್ದ ಕಡೆಯೇ ಈ ರೀತಿಯಾಗಿ ಪಟಾಕಿ ಹಚ್ಚಿದ್ದಾರೆ ಕೆಲವು ಕಿಡಿಗೇಡಿಗಳು.
Salman Khan Fans bursted fire crackers inside the cinema hall in Malegaon which caused stampede like situation.
— Rishi Bagree (@rishibagree) November 13, 2023
pic.twitter.com/LA0uaye96z
ಬೆಂಕಿ ಹೊತ್ತಿದ್ದರೆ ದೊಡ್ಡ ಅನಾಹುತ
ಕೆಲವರು ಮಾಡುವ ಕಿತಾಪತಿ ಕೆಲಸಕ್ಕೆ ಹಲವರ ಜೀವ ಕಂಟಕ್ಕೆ ಸಿಲುಕುತ್ತದೆ. ಇಲ್ಲಿಯೂ ಅದೇ ರೀತಿ ಆಗಿತ್ತು, ಯಾರೋ ಕಿಡಿಗೇಡಿ ಪುಂಡರು ಸುಮ್ಮನೆ ಇರಲಾರದೆ ಪಟಾಕಿಯನ್ನು ಥಿಯೇಟರ್ ಒಳಗಡೆ ಹಚ್ಚಿಬಿಟ್ಟರು. ಆದರೆ ಈ ವೇಳೆ ಅಕಸ್ಮಾತ್ ಬೆಂಕಿ ಹೊತ್ತಿದ್ದರೆ ಏನು ಕಥೆ? ಅನ್ನೋ ಚಿಂತೆ ಶುರುವಾಗಿದೆ. ಆದ್ರೆ ಅದೃಷ್ಟಕ್ಕೆ ಈ ಬಾರಿ ಯಾವುದೇ ದೊಡ್ಡದಾದ ಅನಾಹುತ ಸಂಭವಿಸಿಲ್ಲ. ಹೀಗೆ ಮಾಡಿದವರ ವಿರುದ್ಧ ಈಗ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ ಸಲ್ಮಾನ್ ಖಾನ್ ಅವರ ಫ್ಯಾನ್ಸ್.
As Usual 💥 Salman Khan Fanclub Malegaon continues the TREND of Bursting Crackers in Theatres on Salman Khan's Entry, Though It is not advised but Fans ka emotion kon Samjhe 💀💥 #Tiger3review #Tiger3 pic.twitter.com/HIoVWKEWBp
— YOGESH (@i_yogesh22) November 12, 2023
ಒಟ್ನಲ್ಲಿ ಯಾರದ್ದೋ ಎಡವಟ್ಟು ನೂರಾರು ಜನರ ಜೀವಕ್ಕೆ ಗಂಡಾಂಗತರ ತಂದಿತ್ತು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೂಡ ಬೆಚ್ಚಿಬಿದ್ದಿದ್ದಾರೆ. ಹಾಗೆ ಥಿಯೇಟರ್ ಒಳಗೆ ಈ ರೀತಿ ಪಟಾಕಿ ಹಚ್ಚಲು ಮತ್ತು ಪಟಾಕಿ ಕೊಂಡೊಯ್ಯಲು ಬಿಟ್ಟಿದ್ದು ಯಾರು? ಎಂಬ ಪ್ರಶ್ನೆಯು ಈಗ ಭುಗಿಲೆದ್ದಿದೆ. ಹೀಗಾಗಿ ಸೂಕ್ತ ತನಿಖೆ ನಂತರವೇ ಎಲ್ಲವೂ ಬಯಲಾಗಲಿದೆ.












Click it and Unblock the Notifications