Salman khan Horoscope 2024: 2024ರಲ್ಲಿ ಮದುವೆಯಾಗ್ತಾರಾ ಸಲ್ಮಾನ್ ಖಾನ್? ಹೊಸ ವರ್ಷದ ಭವಿಷ್ಯವೇನು ಹೇಳುತ್ತೆ?
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿಮಾನಿಗಳು ದೇಶದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಇದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬ ಬಂತು ಅಂದ್ರೆ ಸಾಕು ಯಾವ ಹಬ್ಬಕ್ಕೂ ಕಡಿಮೆ ಇಲ್ಲದಂತೆ ಅವರ ಜನ್ಮ ದಿನವನ್ನು ಆಚರಿಸಲಾಗುತ್ತದೆ.
ಸಲ್ಮಾನ್ ಖಾನ್ ಎಲ್ಲಾ ವಯಸ್ಸಿನ ಜನರನ್ನು ಸೆಳೆದ ಪ್ರಸಿದ್ಧ ಬಾಲಿವುಡ್ ನಟ. ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸುವುದು ಮಾತ್ರವಲ್ಲದೆ ಸಲ್ಮಾನ್ ಖಾನ್ ಅವರ ವೈಯಕ್ತಿಕ ಜೀವನದಲ್ಲಿಯೂ ಯಾವಾಗಲೂ ಅಗತ್ಯವಿರುವವರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಆದರೆ ಈವರೆಗೂ ಸಲ್ಮಾನ್ ಖಾನ್ ಅವರು ಮದುವೆ ಮಾಡಿಕೊಳ್ಳುವ ಮನಸ್ಸು ಮಾಡಿಲ್ಲ. ಇದು ಅಭಿಮಾನಿಗಳಿಗೆ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆಯಾಗಿದೆ.

ತಮ್ಮ ನೆಚ್ಚಿನ ನಟ ಈವರೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿಲ್ಲ. ಇದಕ್ಕೆ ಕಾರಣವೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗದೆ ಸುಮ್ಮನಾದವರೇ ಹೆಚ್ಚು. ಮುಂಬರುವ ವರ್ಷದಲ್ಲಾದರೂ ನಟ ಸಲ್ಮಾನ್ ಖಾನ್ ಮದುವೆ ಆಗ್ತಾರಾ? ಅವರ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ನಾವು ಜ್ಯೋತಿಷ್ಯಶಾಸ್ತ್ರದ ಮೂಲಕ ತಿಳಿಯಬಹುದು. ಹಾಗಾದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸಲ್ಮಾನ್ ಖಾನ್ 2024 ಜಾತಕ
ಬಾಲಿವುಡ್ ಹಿರಿಯ ನಟ ಸಲ್ಮಾನ್ ಖಾನ್ ಅವರು 1965 ರಲ್ಲಿ ಡಿಸೆಂಬರ್ 27 ರಂದು ಬೆಳಿಗ್ಗೆ 9.30 ಕ್ಕೆ ಜನಿಸಿದರು. ಈ ವರ್ಷ ಸಲ್ಮಾನ್ ಅವರ ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಈ ವರ್ಷ ಅವರು ಹೊಸ ಅವಕಾಶಗಳನ್ನು ಒದಗಿಸುವ ಹೊಸ ಒಪ್ಪಂದಗಳಿಗೆ ಸಹಿ ಹಾಕುತ್ತಾರೆ.
ವೃತ್ತಿಜೀವನದ ದೃಷ್ಟಿಯಿಂದ ಮುಂಬರುವ ವರ್ಷವು ಅವರಿಗೆ ಉತ್ತಮವಾಗಿರುತ್ತದೆ. ಜೊತೆಗೆ 2024 ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ. ಯಶಸ್ಸಿನ ಸಾಧ್ಯತೆಯ ಹೊರತಾಗಿಯೂ, ಅಪಘಾತಗಳು ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಅವರು ಎಚ್ಚರಿಕೆ ವಹಿಸಬೇಕು. ಆದರೆ ಅವರ ಖ್ಯಾತಿ ಹೆಚ್ಚಾದಂತೆ ಮಾನಸಿಕ ಒತ್ತಡ ಮತ್ತು ಕೌಟುಂಬಿಕ ಚಿಂತೆಗಳೂ ಹೆಚ್ಚಾಗಬಹುದು. 2024ನೇ ವರ್ಷದಲ್ಲಿ ಅವರಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ವೈಯಕ್ತಿಕ ಬೆಳವಣಿಗೆ ಮತ್ತು ಹೆಚ್ಚಿದ ಜವಾಬ್ದಾರಿಗಳು ಸಹ ಅವರ ಹೆಗಲ ಮೇಲೇರುತ್ತವೆ.

ಸಲ್ಮಾನ್ ಖಾನ್ 2024ರಲ್ಲಿ ಮದುವೆಯಾಗುತ್ತಾರಾ?
ಅಭಿಮಾನಿಗಳು ಸಲ್ಮಾನ್ ಮದುವೆಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಸಲ್ಮಾನ್ ವರನಾಗುವುದು ಯಾವಾಗ ಎಂದು ಕಾತುರರಾಗಿ ಕಾಯುತ್ತಿದ್ದಾರೆ. ಸಲ್ಮಾನ್ ತುಂಬಾ ಸುಂದರ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಅವರು ಮದುವೆಯಾಗಲು ಸಿದ್ಧರಾದರೆ ನಾ ಮುಂದು ತಾ ಮುಂದು ಅಂತ ಸರತಿ ಸಾಲಿನಲ್ಲಿ ನಿಲ್ಲುವವರು ಹೆಚ್ಚು. ಹೀಗಿರುವಾಗ ಅವರು ಮದುವೆಯಾಗಲು ಯಾಕಾಗಿ ಸಿದ್ಧರಿಲ್ಲ ಎನ್ನುವ ಪ್ರಶ್ನೆಗಳು ಸೃಷ್ಟಿಯಾಗಿವೆ. ಜ್ಯೋತಿಷ್ಯದ ಪ್ರಕಾರ, ವಿಷ ಯೋಗದಿಂದಾಗಿ ಅವರ ಮದುವೆ ಬಹಳ ತಡವಾಗಿ ನಡೆಯುತ್ತದೆ ಅಥವಾ ನಡೆಯದೇ ಇರಬಹುದು ಎಂದು ಹೇಳಲಾಗುತ್ತದೆ.
ಸಲ್ಮಾನ್ ಜಾತಕದಲ್ಲಿ ದೋಷ
ಸಲ್ಮಾನ್ ಖಾನ್ ಅವರ ಜಾತಕದಲ್ಲಿ ಭಾಗಶಃ ಕಾಲ ಸರ್ಪ ದೋಷ ರೂಪುಗೊಂಡಿದೆ. ಅವರು ಕಾಲಕಾಲಕ್ಕೆ ಕಾಲ ಸರ್ಪ ದೋಷಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇದು ಅವರ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ದೂರವಿಡುತ್ತದೆ. ಹೀಗೆ ಮಾಡುವುದರಿಂದ ಹೊಸ ವರ್ಷದಲ್ಲಿ ಅವರು ಗೌರವ ಮತ್ತು ಹಠಾತ್ ಸಂಪತ್ತನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಮದುವೆಯಾಗುವ ಯೋಗ ಕೂಡ ಕೂಡಿ ಬರಬಹುದು.
(ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ತಜ್ಞರ ಸಲಹೆಯನ್ನು ಪಡೆಯಿರಿ)












Click it and Unblock the Notifications