ಸಲ್ಮಾನ್ ಖಾನ್ ಸಿನಿಮಾ ದಾಖಲೆ ಮುರಿದ ಪ್ರಭಾಸ್ ಸಿನಿಮಾ ‘ಸಲಾರ್’..?

'ಸಲಾರ್' ಮೂಲಕ ನಟ ಡಾರ್ಲಿಂಗ್ ಪ್ರಭಾಸ್‌ಗೆ ಬ್ರೇಕ್ ಸಿಕ್ಕಿದೆ. ತಮ್ಮ ಸಿನಿಮಾ ಕರಿಯರ್ ಸಂಕಷ್ಟಕ್ಕೆ ಸಿಲುಕಿದೆ ಎನ್ನುವಷ್ಟರಲ್ಲಿ ಪ್ರಭಾಸ್ ಮತ್ತೆ ಖದರ್ ತೋರಿಸಿದ್ದಾರೆ. ಬಾಹುಬಲಿ-1 & ಬಾಹುಬಲಿ-2 ದೊಡ್ಡ ಹಿಟ್ ಆದ ನಂತರ 'ರಾಧೆ ಶ್ಯಾಮ್' & 'ಆದಿಪುರುಷ್' ಸಿನಿಮಾ ಸೋಲು ಪ್ರಭಾಸ್‌ರನ್ನ ಕಂಗೆಡಿಸಿತ್ತು. ಆದ್ರೆ ಇದೀಗ ಪ್ರಭಾಸ್ ಅವರು ನಿಟ್ಟುಸಿರು ಬಿಟ್ಟಿದ್ದು ಸಲ್ಮಾನ್ ಖಾನ್ ಅವರ ಸಿನಿಮಾ ಕೂಡ ಹಿಂದಿಕ್ಕಿದ್ದಾರಂತೆ!

'ಸಲಾರ್' ರಿಲೀಸ್ ಆಗಿ ಹಲವು ದಾಖಲೆಗಳನ್ನ ಪುಡಿ ಪುಡಿ ಮಾಡಿದೆ. ಈಗ ಭಾರತದಲ್ಲೇ ಈ ಸಿನಿಮಾ ಸುಮಾರು 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗಾಗಿ ಸಲ್ಮಾನ್ ಖಾನ್ ಅವರ ಸಿನಿಮಾ ಮಾಡಿದ್ದ ದಾಖಲೆಯನ್ನ ಹಿಂದಿಕ್ಕಿದೆ. ಟೈಗರ್-3 ಚಿತ್ರ, ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತ್ತು. ಸಲ್ಮಾನ್ ಖಾನ್ ಅವರ ಈ ಸಿನಿಮಾ ಭರ್ಜರಿ, 285.52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈಗ ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಸಲಾರ್' ಸಿನಿಮಾ ಭಾರತದಲ್ಲಿ ಬರೋಬ್ಬರಿ 297.40 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಈ ಮೂಲಕ ಸಲ್ಮಾನ್ ಖಾನ್ ಸಿನಿಮಾ ದಾಖಲೆ ಹಿಂದಿಕ್ಕಿದೆ ಡಾರ್ಲಿಂಗ್ ಪ್ರಭಾಸ್ ಮೂವಿ.

Salaar Star Prabhas Movie Now Crossed Salman Khan Movie Record

ಭಾರತದಲ್ಲೇ 300 ಕೋಟಿ ಕಮಾಲ್!

ಬಾಹುಬಲಿ ಪ್ರಭಾಸ್ ಭರ್ಜರಿ ಗೆಲುವು ಸಾಧಿಸಿದ್ದು, ಪ್ರಶಾಂತ್ ನೀಲ್ ಅವರ ಡೈರೆಕ್ಷನ್ ಇಲ್ಲೂ ಇತಿಹಾಸ ನಿರ್ಮಿಸಿದೆ. ಕನ್ನಡಿಗರು ಸೇರಿ ನಿರ್ಮಿಸಿರುವ 'ಸಲಾರ್' ಸಿನಿಮಾ ಬರೋಬ್ಬರಿ 400 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಸುಲಭವಾಗಿ ವಸೂಲಿ ಮಾಡಿದೆ ಎನ್ನಲಾಗಿದೆ. ಈ ಸಾಧನೆಯನ್ನ ಕೆಲವೇ ದಿನಕ್ಕೆ ಸಾಧಿಸಿದೆ ಕನ್ನಡಿಗರು ನಿರ್ಮಿಸಿರುವ ತೆಲುಗು ಸಿನಿಮಾ ಸಲಾರ್. ಜಗತ್ತಿನಾದ್ಯಂತ ಪ್ರಭಾಸ್ ಅಭಿಮಾನಿಗಳು ಸಿನಿಮಾ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಭಾರತದಲ್ಲಿ ಕೂಡ ಸಲಾರ್ ಸಿನಿಮಾ ಹಲವು ದಾಖಲೆ ಬರೆಯುತ್ತಿದೆ.

ಸಾಲು ಸಾಲು ಸಿನಿಮಾ ಹಿಟ್!

ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ 4ನೇ ಸಿನಿಮಾ 'ಸಲಾರ್' ಎಲ್ಲೆಲ್ಲೂ ಅಬ್ಬರಿಸುತ್ತಿದೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಸಿನಿಮಾ ಈಗಾಗಲೇ ಬಂಡವಾಳ ವಸೂಲಿ ಮಾಡಿದೆ. 400 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿರುವ ಸಲಾರ್ ಓಟಿಟಿ & ಸ್ಯಾಟಲೈಟ್ ಹಕ್ಕುಗಳು ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಗಿವೆ ಎನ್ನಲಾಗಿದೆ. ಕ್ರಿಸ್‌ಮಸ್ ರಜೆ ಹಿನ್ನೆಲೆ ಸಾಲು ಸಾಲು ರಜೆ ಎದುರಾಗಿದ್ದ ಕಾರಣ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿದೆ.

Salaar Star Prabhas Movie Now Crossed Salman Khan Movie Record

ದಕ್ಷಿಣ ಭಾರತದ ಅಬ್ಬರ ಮುಂದುವರಿಕೆ

ಅಂದಹಾಗೆ ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳ ಎದುರು ಮಂಕಾಗಿವೆ ಎನ್ನುವ ಮಾತಿಗೆ, ಸಾಲು ಸಾಲು ಹಿಟ್ ಸಿನಿಮಾಗಳು ಉದಾಹರಣೆ ಆಗುತ್ತಿವೆ. ಸಲಾರ್‌ಗು ಇದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉತ್ತರ ಭಾರತದಲ್ಲಿ ಕೂಡ ಜನರು 'ಸಲಾರ್' ನೋಡಿ ಖುಷಿಯಾಗಿದ್ದಾರೆ. ಹೀಗಾಗಿ ಇನ್ನೇನು ಹೊಸ ವರ್ಷದ ರಜೆ ಸಮಯದಲ್ಲಿ ಮತ್ತೆ, ತನ್ನ ಬಾಕ್ಸ್ ಆಫಿಸ್ ಗಳಿಕೆಯನ್ನು 'ಸಲಾರ್' ಸಿನಿಮಾ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+