ಅಮೆರಿಕದಲ್ಲಿ ‘ಸಲಾರ್’ ಡೈನೋಸಾರ್, ಬಾಕ್ಸ್ ಆಫಿಸ್‌ನಲ್ಲಿ ಬಾಚಿದ್ದು ಎಷ್ಟು ಕೋಟಿ?

ಭಾರತೀಯ ಸಿನಿಮಾ ರಂಗವು ಜಗತ್ತಿನಾದ್ಯಂತ ದೊಡ್ಡ ಹೆಸರು ಗಳಿಸಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಭಾರತೀಯ ಸಿನಿಮಾಗಳಿಗೆ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕದಲ್ಲಿ ಭಾರತೀಯ ಸಿನಿಮಾಗಳಿಗೆ ಬೇಡಿಕೆ ಜಾಸ್ತಿ. ಯಾಕಂದ್ರೆ ಅಮೆರಿಕದಲ್ಲಿ ಭಾರತ ಮೂಲದ ಕೋಟ್ಯಂತರ ಜನ ವಾಸಿಸುತ್ತಿದ್ದಾರೆ. ಹೀಗಿದ್ದಾಗ 'ಸಲಾರ್' ಸಿನಿಮಾ ಕೂಡ ಅಮೆರಿಕದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

ಅಂದಹಾಗೆ 'ಸಲಾರ್' ಸಿನಿಮಾ ಮೂಲಕ ಪ್ರಭಾಸ್ ಅವರಿಗೆ ಬಿಗ್ ಬ್ರೇಕ್ ಸಿಕ್ಕಿದೆ. ತಮ್ಮ ಸಿನಿಮಾ ಕರಿಯರ್ ಇನ್ನೇನು ಸಂಕಷ್ಟಕ್ಕೆ ಸಿಲುಕಿದೆ ಎನ್ನುವಷ್ಟರಲ್ಲಿ ಪ್ರಭಾಸ್ ಮತ್ತೊಮ್ಮೆ ಖದರ್ ತೋರಿಸಿದ್ದಾರೆ. ಬಾಹುಬಲಿ-1 & ಬಾಹುಬಲಿ-2 ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ನಂತರ, 'ರಾಧೆ ಶ್ಯಾಮ್' & 'ಆದಿಪುರುಷ್' ಸಿನಿಮಾ ಸೋಲು ಪ್ರಭಾಸ್‌ರನ್ನ ಕಂಗೆಡಿಸಿತ್ತು. ಆದ್ರೆ ಈಗ ಬರೀ ಅಮೆರಿಕದಲ್ಲಿ ಅರ್ಧ ಶತಕದಷ್ಟು ಹಣವನ್ನ ದುಡಿದಿದೆ 'ಸಲಾರ್' ಚಿತ್ರ ಹಾಗಾದ್ರೆ ಅಮೆರಿಕದಲ್ಲಿ ಸಲಾರ್ ಗಳಿಸಿದ್ದು ಎಷ್ಟು? ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.

Salaar Star Prabhas Movie Collected 6.5 Million Dollar In US

'ಸಲಾರ್' ಎಂತಹ ಐಡಿಯಾ ಗುರೂ!

ಹೌದು, ಸಲಾರ್ ರಿಲೀಸ್ ಮಾಡುವ ವಿಚಾರದಲ್ಲಿ ಸಖತ್ ಐಡಿಯಾ ಮಾಡಿತ್ತು ಸಿನಿಮಾ ಟೀಂ. ಅಮೆರಿಕದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ತುಂಬಾ ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಅದ್ರಲ್ಲೂ ಅಮೆರಿಕದಲ್ಲಿ ಸಾಲು ಸಾಲು ರಜೆ ಕ್ರಿಸ್‌ಮಸ್ ಸಮಯದಲ್ಲಿ ಸಿಗುತ್ತವೆ. ಇದೀಗ ಎಲ್ಲಾ ಲೆಕ್ಕಾಚಾರ ಹಾಕಿಕೊಂಡೇ ಸಲಾರ್ ರಿಲೀಸ್ ಆಗಿದ್ದು ವರ್ಕೌಟ್ ಆಗಿದೆ. ಅಮೆರಿಕದಲ್ಲಿ ಸಲಾರ್ ಕೇವಲ 5 ದಿನಕ್ಕೆ ಬರೋಬ್ಬರಿ 6.5 ಮಿಲಿಯನ್ ಡಾಲರ್ ಅಂದ್ರೆ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆಯಂತೆ.

ಭಾರತದಲ್ಲೂ ದಾಖಲೆ ಬರೆದ ಸಲಾರ್

ಮೊದಲ ದಿನವೇ 'ಸಲಾರ್' ಸಿನಿಮಾ, ಜಗತ್ತಿನಾದ್ಯಂತ ಸುಮಾರು 175 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಮೂಲಕ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿ ಹೊಸ ಇತಿಹಾಸವನ್ನೂ ನಿರ್ಮಾಣ ಮಾಡಿತ್ತು ಪ್ರಭಾಸ್ ಅವರ ಸಿನಿಮಾ. ಈಗ ಭಾರತದಲ್ಲಿ ಹತ್ತಿರ ಹತ್ತಿರ 300 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. 5 ದಿನದಿಂದಲು ಸಾಲು ಸಾಲು ರಜೆ ಸಿಕ್ಕಿದ್ದ ಕಾರಣ ಪ್ರಭಾಸ್ ಅವರ ಸಲಾರ್ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

Salaar Star Prabhas Movie Collected 6.5 Million Dollar In US

ಸಲಾರ್ ದಾಖಲೆಗಳ ಪಟ್ಟಿ ಇಲ್ಲಿದೆ

ಮೊದಲ ದಿನ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪೈಕಿ RRR ಸಿನಿಮಾಗೆ ಮೊದಲ ಸ್ಥಾನ ಇದ್ದು, ಆರ್‌ಆರ್‌ಆರ್ ಸಿನಿಮಾ ಮೊದಲ ದಿನ 223 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇನ್ನು ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂಪಾಯಿಗಳ ಸಂಪಾದನೆ ಮಾಡಿತ್ತು. ಇದನ್ನ ಬಿಟ್ಟರೆ ಕನ್ನಡಿಗರ 'ಕೆಜಿಎಫ್ ಚಾಪ್ಟರ್-2' ಬರೋಬ್ಬರಿ 164 ಕೋಟಿ ರೂಪಾಯಿ ಹಣವನ್ನು ಮೊದಲನೇ ದಿನವೇ ಸಂಪಾದಿಸಿತ್ತು. ಈಗ ಪ್ರಭಾಸ್ ಅವರ ಸಲಾರ್ ಸಿನಿಮಾ ಹೊಸ ಇತಿಹಾಸ ಬರೆದಿದೆ. ಜೊತೆಗೆ ಭಾರತದಲ್ಲಿ ಗಳಿಸಿರುವ ಹಣದ ಲೆಕ್ಕ ಕೂಡ ದಾಖಲೆ ನಿರ್ಮಿಸಿದೆ.

ಒಟ್ನಲ್ಲಿ ಸಲಾರ್ ಸಿನಿಮಾ ಈ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಯಾಕಂದ್ರೆ ಈಗ ನೂರಾರು ಕೋಟಿ ಗಳಿಕೆ ಮಾಡಿರುವ ಸಲಾರ್ ಸಿನಿಮಾ ಇನ್ನೇನು 1000 ಕೋಟಿ ಕ್ಲಬ್ ಸೇರಿ ಹೊಸ ಇತಿಹಾಸ ಬರೆಯುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಭಾರಿ ಕುತೂಹಲ ಕೆರಳಿದ್ದು, ಹೊಸ ವರ್ಷದ ಸಮಯದಲ್ಲಿ ಸಲಾರ್ ಬಾಕ್ಸ್ ಆಫಿಸ್ ಗಳಿಕೆ ಮತ್ತಷ್ಟು ಹೆಚ್ಚು ನಿರೀಕ್ಷೆ ಇದೆ ಈ ಹಿನ್ನೆಲೆ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಮತ್ತೊಂದು ಕಡೆ 'ಸಲಾರ್-1' ನಂತರ 'ಸಲಾರ್-2' ಬಗ್ಗೆಯೂ ಕುತೂಹಲ ದುಪ್ಪಟ್ಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+