‘ಸಲಾರ್’ ಸ್ಟಾರ್ ಬಾಹುಬಲಿ ಪ್ರಭಾಸ್ ಮಾಡಿದ ಈ ಸಾಧನೆ ದಕ್ಷಿಣ ಭಾರತದ ಯಾವುದೇ ನಟ ಮಾಡಿಲ್ಲ!

ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ 4ನೇ ಸಿನಿಮಾ 'ಸಲಾರ್' ಡಿಸೆಂಬರ್ 22ರ ಶುಕ್ರವಾರ ಭರ್ಜರಿಯಾಗಿ ರಿಲೀಸ್ ಆಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿ ಸಲಾರ್ ಅಬ್ಬರ ಜೋರಾಗಿದೆ. ಬಾಕ್ಸ್ ಆಫಿಸ್ ಅಖಾಡದಲ್ಲಿ ಪ್ರಭಾಸ್ ಸಿನಿಮಾ ಸಂಚಲನ ಸೃಷ್ಟಿಸಿದೆ. ಹೀಗಿದ್ದಾಗ ಡಾರ್ಲಿಂಗ್ ಪ್ರಭಾಸ್ ಅವರು ಭಾರತದಲ್ಲಿ ಮಾತ್ರವಲ್ಲ, ದೂರದ ದೇಶ ಅಮೆರಿಕದಲ್ಲಿ ಕೂಡ ದಕ್ಷಿಣ ಭಾರತದ ಯಾವುದೇ ನಟ ನಿರ್ಮಿಸದ ದಾಖಲೆ ಬರೆದಿದ್ದಾರೆ.

ಎಲ್ಲವೂ ಅಂದುಕೊಂಡ ರೀತಿಯೇ ನಡೆದಿದೆ. ನಟ ಬಾಹುಬಲಿ ಪ್ರಭಾಸ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದ್ರಲ್ಲೂ ಪ್ರಶಾಂತ್ ನೀಲ್ ಡೈರೆಕ್ಷನ್ ಇತಿಹಾಸ ನಿರ್ಮಿಸಿದೆ. ಕನ್ನಡಿಗರು ಸೇರಿ ನಿರ್ಮಿಸಿರುವ 'ಸಲಾರ್' ಸಿನಿಮಾ ಬರೋಬ್ಬರಿ 400 ಕೋಟಿ ಹಣವನ್ನು ಸುಲಭವಾಗಿ ವಸೂಲಿ ಮಾಡಿದೆ ಎನ್ನಲಾಗಿದೆ. ಈ ಸಾಧನೆಯನ್ನ ಕೇವಲ 3 ದಿನಕ್ಕೆ ಸಾಧಿಸಿದೆ ಕನ್ನಡಿಗರು ನಿರ್ಮಿಸಿರುವ ತೆಲುಗು ಸಿನಿಮಾ 'ಸಲಾರ್'. ಇದರ ಜೊತೆಗೆ, ಉತ್ತರ ಅಮೆರಿಕದಲ್ಲಿ ಪ್ರಭಾಸ್ ಅವರು ಹೊಸ ಇತಿಹಾಸ ನಿರ್ಮಿಸಿ, ದಕ್ಷಿಣ ಭಾರತಕ್ಕೆ ಮತ್ತೆ ಹೆಮ್ಮೆಯನ್ನು ತಂದಿದ್ದಾರೆ.

Salaar Star Prabhas Become First South Indian Actor To Cross 5 Million Mark In North America

ಪ್ರಭಾಸ್ ಬರೆದರು ಹೊಸ ಇತಿಹಾಸ!

ಅಂದಹಾಗೆ ದಕ್ಷಿಣ ಭಾರತದ ನಟನೊಬ್ಬನ ಸಿನಿಮಾ ಉತ್ತರ ಅಮೆರಿಕದಲ್ಲಿ 5 ಮಿಲಿಯನ್ ಡಾಲರ್‌ಗೂ ಹೆಚ್ಚು ಹಣವನ್ನ ಗಳಿಸಿದ ದಾಖಲೆ ನಟ ಪ್ರಭಾಸ್ ಅವರ ಪಾಲಾಗಿದೆ. ಈ ಹಿಂದೆ ಪ್ರಭಾಸ್ ಅವರು ನಟಿಸಿದ್ದ 'ಬಾಹುಬಲಿ-1' ಮತ್ತು 'ಬಾಹುಬಲಿ-2' ಸಿನಿಮಾಗಳು ತಲಾ 3 ಮಿಲಿಯನ್ ಡಾಲರ್ ಗಳಿಸಿದ ಸಾಧನೆ ಮಾಡಿದ್ದವು. ಅಂದ್ರೆ ಭಾರತದ ರೂಪಾಯಿ ಲೆಕ್ಕಕ್ಕೆ ಸುಮಾರು 50 ಕೋಟಿ ರೂಪಾಯಿಗೂ ಹೆಚ್ಚು. ಇದೀಗ ಪ್ರಭಾಸ್ ಅವರ ಸಲಾರ್ ಸಿನಿಮಾ ಕೂಡ ಇಂತಹದ್ದೇ ಸಾಧನೆ ಮಾಡಿ, 3 ಮಿಲಿಯನ್ ಡಾಲರ್‌ಗೂ ಹೆಚ್ಚು ಹಣ ಗಳಿಸಿದೆ.

ದೂರದ ದೇಶದಲ್ಲಿ ಮಹಾನ್ ಸಾಧನೆ

ಸುಮಾರು 25 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಉತ್ತರ ಅಮೆರಿಕದಲ್ಲಿ ಬಾಚಿದೆ ಪ್ರಭಾಸ್ ಅವರ ಸಲಾರ್ ಸಿನಿಮಾ ಎನ್ನಲಾಗಿದೆ. ಈ ಮೂಲಕ ದಕ್ಷಿಣ ಭಾರತದ ನಟನ, ಬಹುನಿರೀಕ್ಷಿತ ಸಿನಿಮಾ 'ಸಲಾರ್' ಹೊಸ ಇತಿಹಾಸ ನಿರ್ಮಾಣ ಮಾಡಿದೆ. ದೂರದ ದೇಶ ಅಮೆರಿಕದಲ್ಲಿ ಕೂಡ ಸಲಾರ್ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಒಂದೆರಡು ಸ್ಕ್ರೀನ್ ಮಾತ್ರವಲ್ಲ, ಇಲ್ಲೂ ನೂರಾರು ಸ್ಕ್ರೀನ್‌ಗಳಲ್ಲಿ ಸಲಾರ್ ಸಿನಿಮಾ ತೆರೆ ಕಂಡಿದೆ. ಈ ನಡುವೆ ಮತ್ತಷ್ಟು ಸ್ಕ್ರೀನ್‌ಗಳು ಬೇಕು ಎನ್ನುವ ಬೇಡಿಕೆ ಕೂಡ ಸೃಷ್ಟಿಯಾಗಿದೆ.

Salaar Star Prabhas Become First South Indian Actor To Cross 5 Million Mark In North America

10 ಪಟ್ಟು ದೊಡ್ಡದಾಗಿದೆ ಸಲಾರ್!

ಕನ್ನಡ ಸಿನಿಮಾಗಳಿಗೆ ಹೊಸ ಗತ್ತು ತಂದುಕೊಟ್ಟ ಸಿನಿಮಾ ಕೆಜಿಎಫ್-1, ಕೆಜಿಎಫ್-2. ಇದೀಗ 'ಕೆಜಿಎಫ್‌ ಚಾಪ್ಟರ್‌ 2'ಗಿಂತ 10 ಪಟ್ಟು ದೊಡ್ಡದಾಗಿ ಸಲಾರ್‌ ಮೂಡಿಬಂದಿದೆ. ಕೆಜಿಎಫ್‌ 2ಗೆ 100 ಕೋಟಿ ಬಂಡವಾಳ ಹಾಕಿತ್ತು ಹೊಂಬಾಳೆ ಸಂಸ್ಥೆ. ಇದೀಗ ಸಲಾರ್‌ ಚಿತ್ರಕ್ಕೆ ಭರ್ಜರಿ 270 ಕೋಟಿ ಹಣ ಹೂಡಿಕೆ ಮಾಡಿ, ದುಡ್ಡಿಗೆ ತಕ್ಕಂತೆಯೇ ಮೇಕಿಂಗ್ ಕೂಡ ಮಾಡಿದೆ. ಹೀಗಾಗಿಯೆ ಸಿನಿಮಾ ನೋಡಿದ ಪ್ರೇಕ್ಷಕನಿಗೆ ಸಿಕ್ಕಾಪಟ್ಟೆ ಖುಷಿ ಆಗುತ್ತಿದೆ. ಅಭಿಮಾನಿಗಳು ಸಿನಿಮಾವನ್ನ ಎಂಜಾಯ್ ಮಾಡುತ್ತಿದ್ದಾರೆ.

ಮೊದಲ ದಿನವೇ ದೊಡ್ಡ ಸಾಧನೆ

ಭಾರತದಲ್ಲಿ ಮೊದಲನೇ ದಿನ ಹೆಚ್ಚು ಹಣ ಮಾಡಿದ ಸಿನಿಮಾ ಪೈಕಿ RRR ಸಿನಿಮಾಗೆ ಮೊದಲ ಸ್ಥಾನ ಇದ್ದು. ಆರ್‌ಆರ್‌ಆರ್ ಮೊದಲ ದಿನ 223 ಕೋಟಿ ರೂಪಾಯಿ ಗಳಿಸಿತ್ತು ಬಾಹುಬಲಿ-2 ಮೊದಲ ದಿನ 214.5 ಕೋಟಿ ರೂಪಾಯಿಗಳ ಸಂಪಾದನೆ ಮಾಡಿತ್ತು. ಇದು ಬಿಟ್ಟು ಕನ್ನಡಿಗರ 'ಕೆಜಿಎಫ್ ಚಾಪ್ಟರ್-2' 164 ಕೋಟಿ ರೂಪಾಯಿ ಹಣವನ್ನ ಮೊದಲ ದಿನ ಗಳಿಸಿತ್ತು. ಆದ್ರೆ ಈಗ ಸಲಾರ್ ಮೊದಲ ದಿನ, 175 ಕೋಟಿ ರೂಪಾಯಿ ಗಳಿಸಿ ದೊಡ್ಡ ಸಾಧನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+