‘ಸಲಾರ್’ ಸಿನಿಮಾ ರಿಲೀಸ್‌ಗೆ ಮೊದಲೇ ಹೊತ್ತಿದ ‘ಕ್ರೇಜ್’ ಕಿಚ್ಚು!
ಕನ್ನಡ ನೆಲದ ನಿರ್ದೇಶಕ ಹಾಗೂ ಕನ್ನಡ ನೆಲದ ನಿರ್ಮಾಪಕರು ಈಗ ಪ್ರಭಾಸ್ ಅವರಿಗೆ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾ ಇನ್ನೇನು ಕೆಲವೇ ದಿನದಲ್ಲಿ ರಿಲೀಸ್ ಆಗಲಿದೆ. ಈ ಮೂಲಕ ಬಾಕ್ಸ್ ಆಫಿಸ್ ದಾಖಲೆಗಳನ್ನ ಧೂಳ್ ಮಾಡಲು ಮತ್ತೊಮ್ಮೆ ಬಾಹುಬಲಿ ನಟ ಪ್ರಭಾಸ್ ಮುನ್ನುಗ್ಗುತ್ತಿದ್ದಾರೆ. ಹೀಗಿದ್ದಾಗಲೇ ಸಲಾರ್ ಸಿನಿಮಾದ, 2ನೇ ಟ್ರೇಲರ್ ರಿಲೀಸ್ ಆಗಿದ್ದು ಎಲ್ಲೆಲ್ಲೂ ಸಂಚಲನ ಸೃಷ್ಟಿಸಿದೆ.
ಹೌದು, 'ಸಲಾರ್' ರಿಲೀಸ್ ಆಗುವ ಮೊದಲೆ ಕೋಟಿ ಕೋಟಿ ಬಾಚಿದೆ ಎನ್ನುವ ಸುದ್ದಿಗಳೆಲ್ಲಾ ಇಷ್ಟುದಿನ ಓಡಾಡಿದ್ದವು. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿದಂತೆ ಶ್ರುತಿ ಹಾಸನ್, ಪ್ರಮೋದ್ & ಮಧು ಗುರುಸ್ವಾಮಿ ನಟಿಸಿದ್ದು. ಸಖತ್ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿ ಮಿಂಚಿದೆ. ಈ ಕಾರಣಗಳಿಂದ ಇಡೀ ಜಗತ್ತಿನಾದ್ಯಂತ ಸಲಾರ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿದ್ದಾಗ ಇಂದು ರಿಲೀಸ್ ಆಗಿರುವ ಟ್ರೇಲರ್ ಅಬ್ಬರಿಸಿ ಹೊಸ ಹೊಸ ದಾಖಲೆ ಸೃಷ್ಟಿ ಮಾಡುತ್ತಿದೆ.

ದಾಖಲೆಗಳು ಧೂಳ್.. ಧೂಳ್..!
ಸಲಾರ್ ಟ್ರೇಲರ್ 1 ರೀತಿಯೇ, ಈಗ ಸಲಾರ್ ಟ್ರೇಲರ್ 2 ಕೂಡ ಅಬ್ಬರಿಸಲು ಶುರು ಮಾಡಿದೆ. ಪ್ರಭಾಸ್ ಅಭಿಮಾನಿಗಳು ಇದೇ ಸಮಯಕ್ಕೆ ಅಂತಾ ಬೆಳಗ್ಗೆಯಿಂದ ಕಾದು ಕುಳಿತಿದ್ದರು. ಆದರೆ ಸಾಕಷ್ಟು ತಡವಾಗಿ ಟ್ರೇಲರ್ ರಿಲೀಸ್ ಆದರೂ ಎಲ್ಲೆಲ್ಲೂ ಸಲಾರ್ ಟ್ರೇಲರ್ 2 ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 2 ನಿಮಿಷ 54 ಸೆಕೆಂಡ್ ಇರುವ ಸಲಾರ್ 2ನೇ ಟ್ರೇಲರ್, ಪ್ರೀತಿ & ಸ್ನೇಹದ ನಡುವೆ ಹಿಂಸೆ ಯಾಕೆ ಶುರುವಾಯ್ತು ಅನ್ನೋದನ್ನು ಹೇಳಿದೆ. ಹಾಗೇ ಟ್ರೇಲರ್‌ನ ಕೊನೆಯಲ್ಲಿ ಸ್ನೇಹಿತರು ಹೇಗೆ ದೊಡ್ಡ ಶತ್ರುಗಳಾಗಿ ಬೆಳೆಯುತ್ತಾರೆ? ಅನ್ನೋ ಹಿಂಟ್ ಕೊಟ್ಟಿದೆ. ಹಾಗಾದರೆ ಈವರೆಗೂ ಸಲಾರ್ ಟ್ರೇಲರ್ ಎಷ್ಟು ವೀವ್ಸ್ ಪಡೆದಿದೆ ಗೊತ್ತಾ?
ಎಷ್ಟು ವೀವ್ಸ್ ಪಡೆದಿದೆ ಟ್ರೇಲರ್?
ಸಲಾರ್ ಟ್ರೇಲರ್ 2 ರಿಲೀಸ್ ಆಗಿ ಸುಮಾರು 7 ಗಂಟೆ ಕಳೆದಿದ್ದು ಇಷ್ಟು ಕಡಿಮೆ ಸಮಯದಲ್ಲಿ ಒಟ್ಟಾರೆ 5 ಭಾಷೆಗಳಲ್ಲಿ ಸೇರಿ ಹತ್ತಿರ ಹತ್ತಿರ 40 ಮಿಲಿಯನ್ ವೀವ್ಸ್ ಪಡೆದಿದೆ. ಜೊತೆಗೆ, ಎಲ್ಲಾ ದಾಖಲೆಗಳನ್ನ ಧೂಳ್ ಧೂಳ್ ಮಾಡುವ ಹಿಂಟ್ ಕೂಡ ಕೊಟ್ಟಿದೆ. ಕನ್ನಡಿಗರಿಗೆ ಫೇವರಿಟ್ ಆಗಿರುವ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್ ಸಿಕ್ಕಾಪಟ್ಟೆ ಸಕ್ಸಸ್ ಕಾಣುವುದು ಗ್ಯಾರಂಟಿ ಅಂತಿದ್ದಾರೆ ಅಭಿಮಾನಿಗಳು.

ಸಲಾರ್ ರಿಲೀಸ್ ಆಗುವುದು ಯಾವಾಗ?
ಹೀಗೆ ಕರ್ನಾಟಕ ಮೂಲದ ನಿರ್ದೇಶಕ ಮತ್ತು ನಿರ್ಮಾಪಕ ನಿರ್ಮಿಸಿರುವ ಸಿನಿಮಾ ಈಗ ದಾಖಲೆ ಮೇಲೆ ದಾಖಲೆ ಬರೆಯಲು ಸಿದ್ಧವಾಗಿದೆ. ಬಾಹುಬಲಿ ಮೂಲಕ ಕನ್ನಡಿಗರು ಸೇರಿ ಇಡೀ ಜಗತ್ತಿಗೆ ಹತ್ತಿರವಾಗಿದ್ದ ಪ್ರಭಾಸ್ ಅವರಿಗೆ, ಸಲಾರ್ ಸಿನಿಮಾ ಮೂಲಕ ದೊಡ್ಡದಾದ ಬ್ರೇಕ್ ಸಿಗುವ ನಿರೀಕ್ಷೆ ಇದೆ. ಹೀಗಾಗಿ ಏನಾಗುತ್ತೆ ಅನ್ನೋದನ್ನೂ ಕಾದು ನೋಡಬೇಕಿದೆ. ಡಿಸೆಂಬರ್ 22ಕ್ಕೆ ಜಗತ್ತಿನಾದ್ಯಂತ ಸಾವಿರ, ಸಾವಿರ ಥಿಯೇಟರ್‌ಗಳಲ್ಲಿ ಸಲಾರ್ ಸಿನಿಮಾ, ಅಬ್ಬರದಿಂದ ಗ್ರ್ಯಾಂಡ್ ರಿಲೀಸ್ ಆಗಲಿದೆ.












Click it and Unblock the Notifications