Sadhu Kokila: ದರ್ಶನ್ ಭೇಟಿ ಮಾಡಲು ಆಗಮಿಸಿ ಕ್ಯಾಮರಾ ಕಂಡು ಕಾಮಿಡಿ ಮಾಡಿದ ಸಾಧು ಕೋಕಿಲ!
ಬೆಂಗಳೂರು ಜುಲೈ 23: ನಟಿ ದರ್ಶನ್ ತೂಗುದೀಪ್ ಅವರನ್ನು ಭೇಟಿ ಮಾಡಲು ಸ್ಯಾಂಡಲ್‌ವುಡ್ ತಾರೆಯರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಈವರೆಗೆ ಅನೇಕ ಸಿನಿ ತಾರೆಯರು ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಇಂದು ಹಾಸ್ಯನಟ ಸಾಧು ಕೋಕಿಲ ಕೂಡ ಜೈಲಿಗೆ ಭೇಟಿ ನೀಡಿದರು.
ಹೌದು.. ಸಾಧು ಕೋಕಿಲ ದರ್ಶನ್ ಅವರನ್ನು ಭೇಟಿ ಮಾಡಲೆಂದು ಇಂದು ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದರು. ಈ ವೇಳೆ ಕ್ಯಾಮರಾ ಕಂಡು ಸಾಧು ಕೋಕಿಲ ಅವರು ಕಾಮಿಡಿ ಮಾಡಿದ್ದಾರೆ. ಕಾರಿನಲ್ಲಿ ಬಂದ ಸಾಧು ಕೋಕಿಲ ಅವರು ವಿಂಡೋ ಗ್ಲಾಸ್ ಇಳಿಸುತ್ತಿದ್ದಂತೆ ಅವರನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲೆಂದು ಪ್ರತಿನಿಧಿಗಳು ಮುಂದಾದಾಗ, 'ಬನ್ನಿ ಕ್ಯಾಮರಾ ನನ್ನ ಮುಖಕ್ಕೇ ಹಿಡಿದು ಬಿಡಿ, ಬನ್ನಿ ಇನ್ನೂ ಹತ್ತಿರ ಬನ್ನಿ. ನಾನೇನೋ ದೊಡ್ಡದಾಗಿ ಕೊಲೆ ಮಾಡಿಬಿಟ್ಟಿದಿನಿ ಅನ್ಣೋ ರೀತಿ ಕಷ್ಟಪಟ್ಟು ಕ್ಯಾಮರಾದಲ್ಲಿ ನನ್ನನ್ನು ಸೆರೆಹಿಡಿಯುತ್ತಿದ್ದಿರಾ? ಬನ್ನಿ ಅರಾಮಾಗಿ ತೆಗೆದುಕೊಳ್ಳಿ ಅಂತಾ ವಿಂಡೋ ಗ್ಲಾಸ್ ಅನ್ನು ಮತ್ತಷ್ಟು ಇಳಿಸಿ ಕಾಮಿಡಿ ಮಾಡುತ್ತಾರೆ ಕಾಮಿಡಿಕಿಂಗ್. ನಂತರ ಕ್ಯಾಮರಾ ಎತ್ತಿಕೊಂಡು ನೀವು ಸಹ ಒಳಗೆ ಬಂದು ಬಿಡು ಅಂತ ಮತ್ತೊಂದು ಹಾಸ್ಯಪಟಾಕಿ ಹಾರಿಸುತ್ತಾರೆ' ಇದರಿಂದ ಅಲ್ಲಿದ್ದವರ ಮುಖದಲ್ಲಿ ಮಂದಹಾಸ ಮೂಡುತ್ತದೆ.

ಜೈಲಿನ ಒಳಗೆ ಹೋದ ಸಾಧು ಕೋಕಿಲಾ ಅವರಿಗೆ ದರ್ಶನ್ ಅವರನ್ನು ನೋಡಲು ಸಾಧ್ಯವಾಗಲಿಲ್ಲ. ಇವತ್ತು ಪೊಲೀಸರು ಸಾಧು ಕೋಕಿಲ ಅವರಿಗೆ ದರ್ಶನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ. ಈ ಬಗ್ಗೆ ಸಾಧು ಕೋಕಿಲ ಅವರು ಸುದ್ದಿಗಾರರ ಮುಂದೆ ಪ್ರಸ್ತಾಪಿಸಿದರು.
ಜೈಲಿನ ಒಳಗೆ ಹೋಗಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾಧು ಕೋಕಿಲ ಅವರು, ' ಇವತ್ತು ನಾ ಭೇಟಿ ಮಾಡಲು ಆಗಲಿಲ್ಲ. ಗುರುವಾರ ಮತ್ತೆ ಬರುತ್ತೇನೆ. ಒಬ್ಬೊಬ್ಬರಿಗೆ ಹೋಗಲು ಒಳಗೆ ಬಿಡಲ್ಲ. ಜೈಲಿನಲ್ಲಿ ವಾರಕ್ಕೆ ಒಂದೋ ಅಥವಾ ಎರಡು ದಿನ ಅಷ್ಟೇ ಭೇಟಿ ಮಾಡಲು ಅವಕಾಶವಿದೆ. ಹೀಗಾಗಿ ನನ್ನನ್ನು ಜೈಲಿನಲ್ಲಿ ಬಿಡಲಿಲ್ಲ. ನಾನು ಮತ್ತೆ ಇದೇ ಗುರುವಾರ ಅವರ ಕುಟುಂಬಸ್ಥರೊಂದಿಗೆ ಭೇಟಿ ಮಾಡುತ್ತೇನೆ. ಅಲ್ಲಿ ಕೂತಿದ್ದರೂ ನನ್ನನ್ನು ಎಬ್ಬಿಸಿ ಕಳುಹಿಸಿಬಿಟ್ಟರು' ಎಂದು ಸಾಧು ಕೋಕಿಲ ಹೇಳಿದ್ದಾರೆ.
ಸಾಧು ಕೋಕಿಲ ಅವರಿಗೆ ದರ್ಶನ್ ಅವರನ್ನು ಭೇಟಿ ಮಾಡಲು ಅವಕಾಶ ಸಿಗದೇ ಇದ್ದದ್ದಕ್ಕೆ ಬೇಸರ ಪಡದೆ ಮತ್ತೆ ಮುಂದಿನ ಗುರುವಾರ ಇದೇ ಸಮಯಕ್ಕೆ ದರ್ಶನ್ ಕುಟುಂಬಸ್ಥರೊಂದಿಗೆ ಜೈಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ಜೈಲಿನಲ್ಲಿ ದರ್ಶನ್‌ಗೆ ಜ್ವರ
ದರ್ಶನ್ ಅವರಿಗೆ ಜೈಲುವಾಸ ಬಿಸಿ ತುಪ್ಪವಾಗಿ ಹೋಗಿದೆ. ಹೊರಬರಲು ಆಗದೆ ಒಳಗಡೆ ಇರಲು ಆಗದೆ ದಾಸ ರೋಸಿ ಹೋಗಿದ್ದಾರೆ. ಸರಿಯಾಗಿ ಊಟ ನಿದ್ದೆ ಇಲ್ಲದೆ ಜೈಲಿನಲ್ಲಿ ಸಂಕಷ್ಟ ಅನುಭವಿಸುವಂತಾಗಿದೆ. ಮಾನಸಿಕವಾಗಿ ಸಾರಥಿ ಕುಗ್ಗಿ ಹೋಗಿದ್ದಾರೆ. ಚಿಂತೆಯಲ್ಲಿ ಮುಳಗಿದೆ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಮಾಹಿತಿ ಲಭ್ಯವಾಗಿದೆ. ದರ್ಶನ್ ಅವರಿಗೆ ಜ್ವರ ಬಂದಿದೆ ಎಂದು ಹೇಳಲಾಗುತ್ತಿದೆ.
ದರ್ಶನ್‌ನ ಈ ಸ್ಥಿತಿ ಕಂಡು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಪುತ್ರ ಹಾಗೂ ಪತ್ನಿ ವಾರಕ್ಕೊಂದು ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಾರೆ. ಕುಟುಂಬಸ್ಥರನ್ನು ಕಂಡು ದರ್ಶನ್ ಕೂಡ ಹೊರಬರುವ ಆಕಾಂಕ್ಷೆಯಲ್ಲಿ ದಿನ ದೂಡುತ್ತಿದ್ದಾರೆ.












Click it and Unblock the Notifications