'ಮೆಲಿಸಾ' ಪಾತ್ರದಲ್ಲಿ 'ಕಾಂತಾರ' ಬೆಡಗಿ ರುಕ್ಮಿಣಿ ವಸಂತ್: ನಟ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಪೋಸ್ಟರ್ ವೈರಲ್
ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಇದು ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲಿದ್ದು, ಈ ನಡುವೆಯೇ ಇದೀಗ ಯಶ್ ಅವರು ರುಕ್ಮಿಣಿ ವಸಂತ್ ಅವರ ಪಾತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ 'ಕಾಂತಾರ' ಬೆಡಗಿ ರುಕ್ಮಿಣಿ ವಸಂತ್ ನಟಿಸಿರುವ ಕುರಿತು ಈಗಾಗಲೇ ಚಿತ್ರತಂಡ ಘೋಷಣೆ ಮಾಡಿತ್ತು. ಇದೀಗ ಸಿನಿಮಾದಲ್ಲಿ 'ಮೆಲಿಸಾ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪರಿಚಯಿಸಲಾಗಿದೆ. ರುಕ್ಮಿಣಿ ವಸಂತ್ ಅವರು ಯಶ್ ಅವರ 'ಟಾಕ್ಸಿಕ್' ಸಿನಿಮಾದಲ್ಲಿ 'ಮೆಲಿಸಾ' ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಯಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಯನತಾರಾ ಪಾತ್ರದ ಪೋಸ್ಟರ್ ಹೊರಬಂದಿತ್ತು. ಅದಕ್ಕೂ ಮುಂಚೆ ಹುಮಾ ಖುರೇಷಿ ಪಾತ್ರ ಏನೆಂದು ಹೊರಬಿದ್ದಿತ್ತು. ಅವರು ಎಲಿಜಬೆತ್ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಪಾತ್ರ, ರುಕ್ಮಿಣಿ ವಸಂತ 'ಮೆಲಿಸಾ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ರುಕ್ಮಿಣಿ ವಸಂತ ಅವರ ಪಾತ್ರದ ಬಗ್ಗೆ ನಟ ಯಶ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಇವರ ಪಾತ್ರದ ಯಾವುದು ಎನ್ನುವ ಕುತೂಹಲ ಬಹುದಿನಗಳಿಂದ ಇತ್ತು. ಇದೀಗ ಕೊನೆಗೂ ಅವರ ಪಾತ್ರದ ಬಗ್ಗೆ ಪೋಸ್ಟರ್ ರಿಲೀಸ್ ಮಾಡಲಾಗಿದೆ.
Introducing Rukmini Vasanth @rukminitweets as MELLISA in - A Toxic Fairy Tale For Grown-Ups#TOXIC #TOXICTheMovie #Nayanthara @humasqureshi @advani_kiara #TaraSutaria #GeetuMohandas @RaviBasrur #RajeevRavi #UjwalKulkarni #TPAbid #MohanBKere #SandeepSadashiva… pic.twitter.com/jv83SVLzYu
— Yash (@TheNameIsYash) January 6, 2026
ವಿಭಿನ್ನ ಲುಕ್‌ನಲ್ಲಿ ರುಕ್ಮಿಣಿ ವಸಂತ: ಯಶ್ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ರುಕ್ಮಿಣಿ ವಸಂತ್ ಅವರು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದಲ್ಲಿ 'ಮೆಲಿಸಾ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪರಿಚಯಿಸಲಾಗಿದೆ. ಇನ್ನೂ ಇದೀಗ ಯಾವ ರೀತಿಯಾಗಿ, ತೆರೆ ಮೇಲೆ ಕಾಣಿಸಲಿದ್ದಾರೆ ಎಂಬುದು ಕುತೂಹಲ ಹುಟ್ಟುಹಾಕಿದೆ. ಕಾಂತಾರದಲ್ಲೇ ಅಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಇವರು ಈ ವಿಭಿನ್ನ ಲುಕ್‌ನಲ್ಲಿ ಟಾಕ್ಸಿಕ್‌ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬದೇ ಇದೀಗ ಕುತೂಹಲವಾಗಿದೆ. ಅಲ್ಲದೆ, ಒಟ್ಟಾರೆ, ಟಾಕ್ಸಿಕ್ ಚಿತ್ರ ಬಹುನಿರೀಕ್ಷೆ ಹುಟ್ಟುಹಾಕಿದೆ.












Click it and Unblock the Notifications