Kantara Chapter 1: ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಕಾಲು ಊದಿಕೊಂಡಿತ್ತು: ಕಾಂತಾರದ ಕಷ್ಟ ತೋಡಿಕೊಂಡ ರಿಷಬ್
Kantara Chapter 1: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್-1 ಸಿನಿಮಾಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಷಬ್ ಅಭಿನಯ ಹಾಗೂ ನಿರ್ದೇಶನಕ್ಕೆ ಪ್ರೇಕ್ಷಕರು ಮತ್ತೊಮ್ಮೆ ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಬಾಲಿವುಡ್ ಮಂದಿಯೂ ಕಾಂತಾರ ಮೆಚ್ಚಿಕೊಂಡಿದ್ದಾರೆ. ರಿಷಬ್ ಹೇಳಿಕೊಂಡಂತೆ ಈ ಸಿನಿಮಾ ತನ್ನ ಕನಸು. ಇದಕ್ಕಾಗಿ ಹಗಲಿರುಳೆನ್ನದೆ ಶ್ರಮ ಹಾಕಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಆ ಶ್ರಮಕ್ಕೆ ತಕ್ಕ ಪ್ರತಿಫಲ ಎಂದಿದ್ದಾರೆ. ಇನ್ನು ಶೂಟಿಂಗ್ ವೇಳೆ ರಿಷಬ್ ಕಾಲು ಊದಿಕೊಂಡಿತ್ತು ಎನ್ನಲಾಗಿದೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಅವರು ಚಿತ್ರೀಕರಣದ ಕಷ್ಟವನ್ನು ಬಿಚ್ಚಿಟ್ಟಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ರಿಷಬ್ ನಾನಾ ಕಷ್ಟಗಳನ್ನು ಎದುರಿಸಿದ್ದಾಗಿ ರಿಲೀಸ್‌ಗೂ ಮುನ್ನ ಬಹಿರಂಗಪಡಿಸಿದ್ದರು. ಅಂತಹ ಅಪಾಯಗಳನ್ನು ಎದುರಿಸಿ, ಹಗಲಿರುಳು ಶ್ರಮಿಸಿದ ಫಲವೇ ಕಾಂತಾರ ಎಂದಿದ್ದರು. ಶೂಟಿಂಗ್ ನಡೆಯುವಾಗ ನಾನೇ ನಾಲ್ಕೈದು ಬಾರಿ ಹೋಗೇಬಿಡಬೇಕಿತ್ತು ಎಂದು ರಿಷಬ್ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು. ಇನ್ನು ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ರಿಷಬ್ ಶೆಟ್ಟಿ ಸ್ಥಿತಿ ಹೇಗಿತ್ತು ಎಂಬ ಫೋಟೋಗಳು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಾಲು ಊದಿಕೊಂಡಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ ರಿಷಬ್. ಕಾಂತಾರ ಚಾಪ್ಟರ್-1 ಕ್ಲೈಮ್ಯಾಕ್ಸ್ ಶೂಟಿಂಗ್‌ನ ಸಮಯ, ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ. ಇವತ್ತು ಕೋಟ್ಯಂತರ ಜನ ನೋಡಿ ಮೆಚ್ಚುವ ಹಾಗೆ ಆಗಿದೆ. ಇದು ನಾವು ನಂಬಿರುವ ಶಕ್ತಿಗಳ ಆಶೀರ್ವಾದದಿಂದ ಮಾತ್ರ ಸಾಧ್ಯ. ಸಿನಿಮಾ ನೋಡಿ ಅಭಿಪ್ರಾಯ ವ್ಯಕ್ತ್ಯಪಡಿಸಿದ ತಮ್ಮೆಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಬಾಹುಬಲಿ ದಾಖಲೆ ಉಡೀಸ್
ಕಾಂತಾರ ಸಿನಿಮಾ ಶನಿವಾರವೇ ರಜನಿಕಾಂತ್ ಅವರ ಜೈಲರ್ ಮತ್ತು ರಣಬೀರ್ ಕಪೂರ್ ಅವರ ಸಂಜು ಚಿತ್ರಗಳನ್ನು ಹಿಂದಿಕ್ಕಿ ಭಾರತೀಯ ಚಿತ್ರರಂಗದ 18ನೇ ಅತಿದೊಡ್ಡ ಹಿಟ್ ಆಗಿದೆ. ಸೋಮವಾರ ಬೆಳಿಗ್ಗೆ ವೇಳೆಗೆ ಈ ಸಿನಿಮಾ ಪ್ರಭಾಸ್ ಮತ್ತು ಎಸ್.ಎಸ್.ರಾಜಮೌಳಿ ಅವರ ಬಾಹುಬಲಿ-ದಿ ಬಿಗಿನಿಂಗ್ ಅನ್ನು ಹಿಂದಿಕ್ಕಿ ಭಾರತೀಯ ಚಿತ್ರರಂಗದ 1 ನೇ ಅತಿದೊಡ್ಡ ಹಿಟ್ ಸಿನಿಮಾ ಆಗಿ ಸ್ಥಾನವನ್ನು ಪಡೆದುಕೊಂಡಿದೆ.
ಕಾಂತಾರ ತನ್ನ ಮೊದಲ ವಾರಾಂತ್ಯದಲ್ಲೇ 337.4 ಕೋಟಿ ರೂಪಾಯಿಗಳನ್ನು ಗಳಿಸಿತು. ಇದರೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್ 438.65 ಕೋಟಿ ರೂ.ಗಳನ್ನು ತಲುಪಿತು. ಇದು ಬಾಹುಬಲಿ-1ರ ಕಲೆಕ್ಷನ್ 421 ಕೋಟಿ ರೂ.ಗಳನ್ನೂ ಹಿಂದಿಕ್ಕಿದೆ. ಎರಡನೇ ವಾರಾಂತ್ಯದ ಗಳಿಕೆಯೊಂದಿಗೆ ಕಾಂತಾರ ರಜನಿಕಾಂತ್ ಅವರ ರೋಬೊ 2.0, ಸಲಾರ್: ಭಾಗ 1, ಅವತಾರ್: ದಿ ವೇ ಆಫ್ ವಾಟರ್, ಆಮಿರ್ ಖಾನ್ ಅವರ ದಂಗಲ್, ಅವೆಂಜರ್ಸ್: ಎಂಡ್‌ಗೇಮ್ ಗಳಿಕೆಯನ್ನು ಕೂಡ ಹಿಂದಿಕ್ಕಿದೆ. ದೀಪಾವಳಿ ವೇಳೆಗೆ ಮತ್ತಷ್ಟು ದಾಖಲೆಗಳನ್ನು ಮುರಿಯುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications