Rishab Shetty: ವಿಭಿನ್ನ ಪಾತ್ರದಲ್ಲಿ ರಿಷಬ್‌ ಶೆಟ್ಟಿ; ಹೊಸ ಸಿನಿಮಾ ಬಗ್ಗೆ ಬಿಗ್‌ ಅಪ್ಡೇಟ್‌

ಕಾಂತಾರ ಸಿನಿಮಾ ಬಳಿಕ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಅವರ ಲಕ್‌ ಬದಲಾಗಿದೆ. ನಿರ್ದೇಶಕನಾಗಿ ನಟನಾಗಿ ಮಿಂಚುತ್ತಿರುವ ರಿಷಬ್‌ ಈಗ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಕಾಂತಾರ ಸಿನಿಮಾ ಬಳಿಕ ಅವರಿಗೆ ಡಿಮ್ಯಾಂಡ್‌ ಹೆಚ್ಚಾಗಿದ್ದು, ತೆಲುಗು ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತ ಕಾಂತಾರ ಚಾಪ್ಟರ್-‌1 ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗುತ್ತಿದೆ. ತೆಲುಗಿನ ಜೈ ಹನುಮಾನ್‌ ಹಾಗೂ ಬಾಲಿವುಡ್‌ನ ಛತ್ರಪತಿ ಶಿವಾಜಿ ಕಥೆಯಾಧಾರಿತ ಸಿನಿಮಾಗಳಲ್ಲೂ ಅವರು ಅಬ್ಬರಿಸಲಿದ್ದಾರೆ. ಇದೀಗ ತಮ್ಮ ಮತ್ತೊಂದು ಹೊಸ ಸಿನಿಮಾದ ಬಗ್ಗೆ ರಿಷಬ್‌ ಬಿಗ್‌ ಅಪ್ಡೇಟ್‌ ಕೊಟ್ಟಿದ್ದಾರೆ.

ರಿಷಬ್‌ ತಮ್ಮ ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ಇದರಲ್ಲಿ ರಿಷಬ್‌ ಅವರು ದಂಡನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುದ್ಧಭೂಮಿಯಲ್ಲಿ ನಾಯಕನಂತೆ ನಿಂತಿರುವ ಲುಕ್‌ ರಿವೀಲ್‌ ಆಗಿದ್ದು, ಇದು ಕೂಡ ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾ ಎನ್ನಲಾಗಿದೆ. ಪೋಸ್ಟರ್‌ನಲ್ಲಿ ಬ್ರಿಟಿಷರು ಬಳಸುತ್ತಿದ್ದ ಬಂದೂಕು, ಫಿರಂಗಿ ಕೂಡ ಇದ್ದು, ಬ್ರಿಟಿಷರೊಂದಿಗೆ ಸೆಣಸಾಡುವ ಸುಳಿವು ನೀಡಿದೆ. ರಿಷಬ್‌ ಅವರು ವೀರನ ಪಾತ್ರದಲ್ಲಿದ್ದು, ಮುಖ ರಿವೀಲ್‌ ಮಾಡಿಲ್ಲ.

Rishab Shetty In Rebel Role Big Update On His Upcoming Movie

ನನ್ನ ಮುಂದಿನ ಚಿತ್ರ, ನಿಮ್ಮ ಆಶೀರ್ವಾದ ಎಂದಿನಂತೆ ಸದಾ ಇರಲಿ ಎಂದು ರಿಷಬ್‌ ಶೆಟ್ಟಿ ಬರೆದುಕೊಂಡಿದ್ದಾರೆ. ಎಲ್ಲ ಬಂಡುಕೋರರು ಯುದ್ಧದಲ್ಲಿ ಹುಟ್ಟಿಕೊಳ್ಳಲ್ಲ. ಕೆಲವನ್ನು ತಲುಪುವ ಸ್ಥಳ ಆಯ್ಕೆ ಮಾಡುತ್ತದೆ ಮತ್ತು ಇದು ಬಂಡಾಯಗಾರನ ಕಥೆ ಎಂದು ರಿಷಬ್‌ ಕುತೂಹಲ ಮೂಡಿಸಿದ್ದಾರೆ. ಅಶ್ವಿನ್ ಗಂಗರಾಜು ಅವರು ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದ್ದಾರೆ ಎಂದು ರಿಷಬ್‌ ಬರೆದುಕೊಂಡಿದ್ದಾರೆ.

ರಿಷಬ್‌ ಮುಂದಿನಿ ಸಿನಿಮಾಗಳು

ಕಾಂತಾರದ ಬಹು ನಿರೀಕ್ಷಿತ ಪ್ರೀಕ್ವೆಲ್ ಸಿನಿಮಾ Kantara: Chapter 1 ಇದೇ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ. ಇದನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದಾರೆ. ಸದ್ಯ ಇತ್ತೀಚೆಗಷ್ಟೇ ಇದರ ಮೇಕಿಂಗ್‌ ವಿಡಿಯೋ ಹಂಚಿಕೊಂಡು ರಿಷಬ್‌ ಅಪ್‌ಡೇಟ್‌ ನೀಡಿದ್ದರು. ಹಾಗಾಗಿ ಈ ಸಿನಿಮಾ ಕೂಡ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಲಿದ್ದು, ನಿರೀಕ್ಷೆ ಹೆಚ್ಚಾಗಿದೆ. ಇನ್ನು ಟಾಲಿವುಡ್‌ನಲ್ಲಿ ಜೈ ಹನುಮಾನ್‌ ಸ ಪ್ಯಾನ್ ಇಂಡಿಯಾ ಕ್ಯಾರೆಕ್ಟರ್ ಹನುಮಂತನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

Rishab Shetty In Rebel Role Big Update On His Upcoming Movie

ರಿಲೀಸ್‌ಗೂ ಮುನ್ನವೇ ಭಾರಿ ವಿವಾದಕ್ಕೆ ಕಾರಣವಾಗಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಸಿನಿಮಾದಲ್ಲೂ ರಿಷಬ್‌ ಶಿವಾಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಬಾಲಿವುಡ್‌ ಅಂಗಳಕ್ಕೆ ರಿಷಬ್‌ ಕಾಲಿಡುತ್ತಿದ್ದಾರೆ. ಈ ಸಿನಿಮಾ 2027ಕ್ಕೆ ರಿಲೀಸ್‌ ಆಗುವ ಸಾಧ್ಯತೆ ಇದೆ. ಸದ್ಯ ಈಗ ರಿಲೀಸ್‌ ಆಗಿರುವ ಸಿನಿಮಾ ಚಿತ್ರವು ರಿಷಬ್ ಅವರ ತೆಲುಗು ಡೆಬ್ಯೂ ಆಗಿದೆ. ಅದರ ಕಥೆ 18ನೇ ಶತಮಾನದಲ್ಲಿನ ಬಂಗಾಳದಲ್ಲಿ ನಡೆದಿದ್ದು ಎನ್ನಲಾಗಿದೆ. ಇದರ ನಿರ್ದೇಶಕರು ಅಶ್ವಿನ್ ಗಂಗರಾಜು. ಚಿತ್ರೀಕರಣ ತೆಲುಗು ಹಾಗೂ ಕನ್ನಡದಲ್ಲಿ ನಡೆಯಲಿದೆ. ಇದರ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+