ರೀಲ್ಸ್ ರೇಷ್ಮಾ ಆಂಟಿಗೆ ಪತಿಯಿಂದ ಹಲ್ಲೆ? ತಂದೆಗೆ ಚೂರಿಯಿಂದ ಇರಿದ ಮಗ?
ರೀಲ್ಸ್ ಮಾಡಲು ಹೋಗಿ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಜೀವನ ಹಾಳು ಮಾಡಿಕೊಂಡಿದ್ದಾರೆ. ಅದೆಷ್ಟೋ ಜನ ಅದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಹೀಗೆ ರೀಲ್ಸ್‌ನಿಂದ ಲಾಭವೂ ಆಗಿದೆ ನಷ್ಟವೂ ಆಗಿದೆ. ಈಗ ರೀಲ್ಸ್ ವಿಚಾರ ಯಾಕಾಗಿ ಬಂತು ಅಂದರೆ ನಿಮಗೆಲ್ಲಾ ರೀಲ್ಸ್ ರೇಷ್ಮಾ ಆಂಟಿ ಗೊತ್ತಿರಬೇಕು. ಇವರು ರೀಲ್ಸ್ ಮಾಡಿಕೊಂಡು ಫೇಮಸ್ ಆದರವರು. ಇದೀಗ ಅವರು ಹಂಚಿಕೊಂಡ ವಿಡಿಯೋ ನೋಡಿ ಜನ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಗೊತ್ತಾ?
87 ಲಕ್ಷ ಫಾಲೋವರ್ಸ್ ಹೊಂದಿರುವ ರೀಲ್ಸ್ ರೇಷ್ಮಾ ಆಂಟಿ ಅಂತನೇ ಫೇಮಸ್ ಆಗಿರುವ ರೇಷ್ಮಾ ಗಿಚ್ಚಿಗಿಲಿಗಿಲಿ ವೇದಿಕೆಯಲ್ಲೂ ಕಾಣಿಸಿಕೊಂಡಿರುವುದಿದೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ರೇಷ್ಮಾ ಏನೇ ಮಾಡಿದರು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ತಮ್ಮ ವಿಭಿನ್ನ ಶೈಲಿಯಿಂದ ಜನಪ್ರಿಯತೆ ಪಡೆದ ರೇಷ್ಮಾ ಅವರೊಂದಿಗೆ ಜೋಡಿಯಾಗಿ ನವೀನ್ ಎಂಬುವವರು ವಿಡಿಯೋಗಳನ್ನು ಮಾಡುತ್ತಿರುತ್ತಾರೆ.

ಇದೀಗ ರೇಷ್ಮಾ ಆಂಟಿ ಶಾಕಿಂಗ್ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಪತಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ತಮ್ಮ ಕಣ್ಣಿಗೆ ಗಾಯ ಆಗಿದೆ ಎಂದು ತಮ್ಮ ಕಣ್ಣುಗಳನ್ನು ತೋರಿಸಿದ್ದಾರೆ. ಅಲ್ಲದೆ ತಮ್ಮ ತಂದೆ ಮೇಲೂ ತಮ್ಮ ಪತಿ ಹಲ್ಲೆ ಮಾಡಿದ್ದಾರೆ, ಚಾಕುವಿನಿಂದ ಇರಿದಿದ್ದಾರೆ, ರಕ್ತ ಬರುತ್ತಿದೆ ಎಂದು ರೇಷ್ಮಾ ಆಂಟಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಪತಿ ಹಾಗೂ ಮಗನಿಂದ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ವಿಡಿಯೋ ಮಾಡಿ ರೇಷ್ಮಾ ಆಂಟಿ ಹರಿಬಿಟ್ಟಿದ್ದಾರೆ. ಆದರೆ ರೇಷ್ಮಾ ತಂದೆ ಮಾತ್ರ ಇಲ್ಲ ಏನು ಆಗಿಲ್ಲ ಅಂತ ಹೇಳುತ್ತಿರುವುದನ್ನು ಕೇಳಬಹುದು. ಆದರೆ ಈ ವಿಡಿಯೋದಲ್ಲಿ ಆಕೆಯ ಪತಿ ಹಾಗೂ ಮಗ ಗಂಭೀರವಾಗಿ ನಿಂತುಕೊಂಡಿರುವುದನ್ನು ನೋಡಿದರೆ ಇದು ನಿಜನಾ? ಸುಳ್ಳಾ? ಅನ್ನೋದು ಗೊತ್ತಾಗುವುದಿಲ್ಲ.
ಇದನ್ನು ತಮಾಷೆಗಾಗಿ ಮಾಡಿದ್ದಾರಾ ಅಥವಾ ನಿಜನಾ ಅನ್ನೋದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸುನಾಮಿ 2780 ಎಂಬ ಖಾತೆಯಿಂದ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋಕ್ಕೆ ಸಾಕಷ್ಟು ಜನ ಕಾಮೆಂಟ್ ಕೂಡ ಮಾಡಿದ್ದಾರೆ.
ಈ ವಿಡಿಯೋ ಶೀರ್ಷಿಕೆಯಲ್ಲಿ 'ರೇಷ್ಮಾ ಆಂಟಿ ತನ್ನ ಗಂಡ ಮಗ ಮತ್ತು ಅಪ್ಪನನ್ನು ಹೆದರಿಸುವ ವಿಡಿಯೋಗಳನ್ನು ದಯವಿಟ್ಟು ನೋಡಬೇಕು ವೀಕ್ಷಕರೆ' ಎಂದು ಬರೆಯಲಾಗಿದೆ. ಈ ವಿಡಿಯೋಕ್ಕೆ ಕಾಮೆಂಟ್ ಬಾಕ್ಸ್‌ನಲ್ಲಿ ನಿಂಗೆ ಮಾಡಿದ್ದು ಸರಿಯಾಗಿದೆ ಎಂದು ಹೇಳಲಾಗಿದೆ.












Click it and Unblock the Notifications