ಬಂದ್ರು.. ಬಂದ್ರು.. ಬಂದ್ರು.. ಕನ್ನಡಿಗರ ಎದುರು ಹೊಸ ಲೋಕ ಸೃಷ್ಟಿಸಿದ ರಿಯಲ್ ಸ್ಟಾರ್ ಉಪೇಂದ್ರ!
ಕನ್ನಡಿಗರ ನಿರೀಕ್ಷೆಗಳನ್ನು ಕೆರಳಿಸಿದ್ದ 'UI' ಸಿನಿಮಾ ಇದೀಗ ಟೀಸರ್ ಮೂಲಕ ಅದನ್ನೆಲ್ಲಾ ನಿಜ ಮಾಡುವ ನಿರೀಕ್ಷೆ ಮೂಡಿಸಿದೆ. ನಟ ಉಪೇಂದ್ರ ಅವರು ಈಗ, ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ. ಉಪ್ಪಿ ಡೈರೆಕ್ಷನ್ ಮಾಡಿ, ನಟನೆ ಮಾಡಿ ಕನ್ನಡಿಗರ ಎದುರು ಹೊಸ ಲೋಕವನ್ನೇ ತೆರೆದಿಡಲು ಸಜ್ಜಾಗಿದ್ದಾರೆ. ಹಾಗಾದರೆ 'ಯುಐ' ಟೀಸರ್ ಬಗ್ಗೆ ಫ್ಯಾನ್ಸ್ ಹೇಳಿದ್ದೇನು?
ಉಪೇಂದ್ರ ಅವರು ರಿಯಲ್ ಸ್ಟಾರ್ ಅಂತಾನೆ ಫೇಮಸ್. ಹೊರ ರಾಜ್ಯದಲ್ಲೂ ಸ್ಯಾಂಡಲ್‌ವುಡ್ ನಟನಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇಡೀ ಚಿತ್ರರಂಗ, ಉಪೇಂದ್ರ ಅವರ 'UI' ಎಂಟ್ರಿಗೆ ಕಾಯುತ್ತಿದೆ. ಹೀಗಿದ್ದಾಗ ಇಂದು ಬಹುನಿರೀಕ್ಷಿತ, 'UI' ಸಿನಿಮಾದ ಟೀಸರ್ ರಿಲೀಸ್ ಆಗೇ ಹೋಗಿದೆ. ತಾವು ಕೊಟ್ಟ ಮಾತಿನಂತೆ ನಟ ಉಪೇಂದ್ರ ಯುಐ ಟೀಸರ್ ರಿಲೀಸ್ ಮಾಡಿದ್ದು ಎಲ್ಲೆಲ್ಲೂ ಟ್ರೆಂಡ್ ಆಗುತ್ತಿದೆ. ಅಲ್ಲದೆ ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೀಸರ್ ಆರಂಭದಿಂದ ಹಿಡಿದು ಅಂತ್ಯದ ತನಕ ಬರೀ ಸರ್ಪ್ರೈಸ್.. ಸರ್ಪ್ರೈಸ್.. ಸರ್ಪ್ರೈಸ್..

ಬಂದ್ರು.. ಬಂದ್ರು.. ಬಂದ್ರು..!
ಇತ್ತೀಚೆಗೆ UI ಟೀಸರ್ ಬಿಡುಗಡೆ ಬಗ್ಗೆ ವಿಶೇಷ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆ, ಭಾರಿ ಕುತೂಹಲ ಕೆರಳಿಸಿತ್ತು ಉಪೇಂದ್ರ ಅವರ 'UI' ಸಿನಿಮಾ ಟೀಸರ್ ಬಿಡುಗಡೆ ದಿನಾಂಕ. ಇದೀಗ ಅದ್ಧೂರಿಯಾಗಿ ಟೀಸರ್ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆದ 'UI' ಟೀಸರ್ ಅನ್ನ ಕನ್ನಡದ ಪ್ರೇಕ್ಷಕರ ಸಮೇತ ಇಡೀ ದೇಶವೇ ಮೆಚ್ಚಿಕೊಂಡಿದೆ. ಹಾಗೇ ಉಪೇಂದ್ರ ಅವರ ಕಾಲ್ಪನಿಕ & ಹೊಸ ಲೋಕಕ್ಕೆ ಸಿನಿಮಾ ಅಭಿಮಾನಿಗಳು ಫಿದಾ ಆಗಿದ್ದಾರೆ. ರಿಲೀಸ್ ಆದ ಕೆಲವೇ ಕ್ಷಣಕ್ಕೆ ಯುಐ ಟೀಸರ್ ಬಿರುಗಾಳಿಯ ರೀತಿ ಮುನ್ನುಗ್ಗುತ್ತಿದೆ.
'ಉಪ್ಪಿ' ಅಭಿಮಾನಿಗಳ ಸಂಭ್ರಮ
ಇನ್ನು ಹೀಗೆ ಉಪೇಂದ್ರ ಅವರ ಯುಐ ಟೀಸರ್ ರಿಲೀಸ್‌ಗೆ ಮೊದಲೇ ರಿಯಲ್ ಸ್ಟಾರ್ ಫ್ಯಾನ್ಸ್ ಸಂಭ್ರಮ ಜೋರಾಗಿತ್ತು. ಹಾಗೇ ಟೀಸರ್ ರಿಲೀಸ್ ಆದ ನಂತರ ಆ ಸಂಭ್ರಮ ಮತ್ತಷ್ಟು & ಮೊಗದಷ್ಟು ಹೆಚ್ಚಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಫೋಟೋ & ವಿಡಿಯೋ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಹಾಗೇ ಎಲ್ಲೆಲ್ಲೂ ಯುಐ ಸಿನಿಮಾ ಈಗ ಫುಲ್ ವೈರಲ್ ಕೂಡ ಆಗುತ್ತಿದೆ. ಅಭಿಮಾನಿಗಳು ಉಪೇಂದ್ರ ಅವರ ಈ ಟ್ಯಾಲೆಂಟ್‌ಗೆ, ಫುಲ್ ಫಿದಾ ಆಗಿದ್ದಾರೆ.
Visuals Looks Stunning 🔥🔥
— Adheera (@adheeraeditz) January 8, 2024
#UITheMovie #Upendra pic.twitter.com/tKF614Z10K
ಒಟ್ನಲ್ಲಿ ನಟ ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ 'UI' ಸಂಚಲನ ಸೃಷ್ಟಿ ಮಾಡಿದ್ದು. ಈಗ ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಷ್ಟು ದಿನ ಕಾಲ 'UI' ಸಿನಿಮಾಗೆ ಕಾಯುತ್ತಿದ್ದ ಉಪೇಂದ್ರ ಅವರ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ಸಿಕ್ಕಿದ್ದು, ಇನ್ನೇನು ಕೆಲವೇ ದಿನದಲ್ಲಿ ಯುಐ ಬೆಳ್ಳಿತೆರೆ ಮೇಲೆ ಭರ್ಜರಿ ಆರ್ಭಟ ತೋರಿಸುವ ಮುನ್ಸೂಚನೆ ಕೂಡ ಸಿಗುತ್ತಿದೆ.












Click it and Unblock the Notifications