ಸೋಷಿಯಲ್ ಮೀಡಿಯಾದಲ್ಲಿ ಉಪೇಂದ್ರ ಹಾಡಿನ ಹಬ್ಬ ಫುಲ್ ಜೋರು!
ರಿಯಲ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿದ್ಧಾರೆ. 'ಯುಐ' ಸಿನಿಮಾ ಮೊದಲ ಹಾಡಿನ ಝಲಕ್ ರಿಲೀಸ್ ಆಗಿದೆ. ಸೋಷಿಯಲ್ ಮೀಡಿಯಾ ಪೂರ್ತಿ ಈಗ ಇದೇ ಹಾಡು ಸಂಚಲನ ಸೃಷ್ಟಿ ಮಾಡಿದೆ. ಹಾಗೇ ಅಭಿಮಾನಿಗಳು ಕೂಡ ಈ ಹಾಡನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲದೆ 'ಯುಐ' ಸಿನಿಮಾ ಮೊದಲ ಹಾಡಿನ ಝಲಕ್ ಇದೀಗ ಪ್ರೇಮಿಗಳ ದಿನಾಚರಣೆ ದಿನವೇ ಹೊಸ ದಾಖಲೆ ಸೃಷ್ಟಿ ಮಾಡಿದೆ.
ಹಿಂದೆ ತಮ್ಮ ಸಿನಿಮಾದಲ್ಲಿ 'ಪ್ರೀತಿ ಪ್ರೇಮ ಪುಸ್ತಕದ ಬದ್ನೆಕಾಯಿ' ಅಂತ ಹೇಳ್ತಾ ಸದ್ದು ಮಾಡಿ ಗಮನ ಸೆಳೆದಿದ್ದ ಉಪೇಂದ್ರ ಅವರು. ಇದೀಗ ಪ್ರೇಮಿಗಳ ದಿನವೆ 'UI' ಸಿನಿಮಾ ಕುರಿತು ಭರ್ಜರಿ ಸುದ್ದಿ ನೀಡಿದ್ದಾರೆ. ನಿರ್ದೇಶಕ ಉಪೇಂದ್ರ ಹೆಜ್ಜೆ ಕಂಡು ಹಿಡಿಯೋಕೆ ಆಗಲ್ಲ ಅನ್ನೋದು ಈಗ ಮತ್ತೆ ಪ್ರೂವ್ ಆಗಿದೆ. ತಮ್ಮ ಮೊದಲ ಸಿನಿಮಾದಿಂದ ಹಿಡಿದು, ಇತ್ತೀಚಿನ ಸಿನಿಮಾಗಳ ತನಕ ಉಪೇಂದ್ರ ಅವರು ಹಲವು ಅದ್ಭುತ ನೀಡಿದ್ದಾರೆ. ಕನ್ನಡಿಗರನ್ನ ಮಾತ್ರವಲ್ಲ ಇಡೀ ದೇಶವನ್ನೇ ರಂಜಿಸಿದ್ದಾರೆ. ಹೀಗಿದ್ದಾಗಲೇ ಇಂದು ಕೂಡ ಡಬಲ್ ಸರ್ಪ್ರೈಸ್ ಸಿಕ್ಕಿದೆ.

ಸೋಷಿಯಲ್ ಮೀಡಿಯಾದಲ್ಲಿ ಉಪೇಂದ್ರ ಟ್ರೆಂಡ್!
'ಯುಐ' ಸಿನಿಮಾ ಮೊದಲ ಹಾಡಿನ ಝಲಕ್ 'ಚೀಪ್ ಸಾಂಗ್' ರಿಲೀಸ್ ಆಗಿ ಅಬ್ಬರಿಸುತ್ತಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಉಪ್ಪಿ ಫುಲ್ ಟ್ರೆಂಡ್ ಕ್ರಿಯೇಟ್ ಮಾಡಿ, ಧೂಳೆಬ್ಬಿಸಿದ್ದಾರೆ. ಹಾಗೇ ಯುಐ ಸಿನಿಮಾ ಮೇಲಿನ ಕುತೂಹಲ ಕೂಡ ಡಬಲ್ ಆಗುತ್ತಿದೆ. ಇನ್ನು ಈ ಹಿಂದೆ ಕೂಡ ಇದೇ ರೀತಿ ಯುಐ ಸಿನಿಮಾ ಹಲವು ಹಂತದಲ್ಲಿ ಸದ್ದು ಮಾಡಿ, ಗಮನ ಸೆಳೆದಿತ್ತು. ಈಗ ಬೇರೆಯದ್ದೇ ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಉಪೇಂದ್ರ ಅವರ ಸಿನಿಮಾದ ಈ ಹಾಡು ಹಲ್‌ಚಲ್ ಎಬ್ಬಿಸಿದೆ. ಮಿಲಿಯನ್ ಮಿಲಿಯನ್ ವೀವ್ಸ್ ಪಡೆಯುತ್ತಾ ಗಮನ ಸೆಳೆಯುತ್ತಿದೆ.
ಟೀಸರ್ ಕೂಡ ದಾಖಲೆ ಬರೆದಿತ್ತು
ಹಿಂದೆ ಯುಐ (UI) ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಕೆಲವೆ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆಯ ಪಡೆದುಕೊಂಡಿತ್ತು. ಇದೀಗ ಯುಐ (UI) ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋ ರಿಲೀಸ್ ಆಗಿದ್ದು. ಬರೋಬ್ಬರಿ 10 ವರ್ಷ ನಂತರ ಉಪೇಂದ್ರ ಅವರು ಡೈರೆಕ್ಷನ್‌ಗೆ ಮರಳಿದ್ದಾರೆ. ತಮ್ಮ ಸಿನಿಮಾದಲ್ಲಿ ಅದ್ಭುತ ತೋರಿಸುತ್ತಿರುವ ಮುನ್ಸೂಚನೆ ಕೊಟ್ಟಿದ್ದಾರೆ.
ಹಾಡು ಹಾಡಿರುವುದು ಯಾರು?
ಉಪ್ಪಿ ಅವರು ರಿಲೀಸ್ ಮಾಡಿರುವ 'ಯುಐ' ಸಿನಿಮಾ ಮೊದಲ ಹಾಡಿನ ಝಲಕ್ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದೆ. ಹಾಡಿನ ಸಾಹಿತ್ಯ ಕೇಳಿದ ಎಲ್ಲರಿಗೂ ಅಚ್ಚರಿ ಆಗಿದೆ. 'ಲಹರಿ ಫಿಲ್ಮ್ಸ್' ಚಾನೆಲ್ ಮೂಲಕ, ಈ ಹಾಡಿನ ಪ್ರೋಮೋ ಬಿಡುಗಡೆ ಆಗಿದೆ. ಅಜನೀಶ್ ಬಿ. ಲೋಕನಾಥ್ ಈ ಸಿನಿಮಾಗೆ ಸಂಗೀತ ನೀಡಿದ್ದು ಅಭಿಮಾನಿಗಳು ಹಾಡು ಕೇಳಿ ಫಿದಾ ಆಗಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ವಿಜಯ್ ಪ್ರಕಾಶ್ ಸೇರಿ ನಕಾಶ್ ಅಜೀಜ್, ದೀಪಕ್ ಬ್ಲ್ಯೂ ಹಾಡಿಗೆ ಧ್ವನಿನ ನೀಡಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಹಾಡಿನ ಸಾಹಿತ್ಯ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದೆ.
#CHEAP song promo is on a fiery streak 🔥
— Upendra (@nimmaupendra) February 14, 2024
Crossed 1️⃣.5️⃣ Million+ Views across all languages in no time ❤️🔥
- https://t.co/koGP7xz85p#UITheMovie #Upendra #UppiDirects @nimmaupendra #GManoharan @Laharifilm @enterrtainers @kp_sreekanth #NaveenManoharan @AJANEESHB @shivakumarart… pic.twitter.com/b8BvoB2O6q
ಒಟ್ನಲ್ಲಿ ಉಪೇಂದ್ರ ಅವರು ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ಮೇಲೆ ಕಮಾಲ್ ಮಾಡೋದಕ್ಕೆ ಹೆಜ್ಜೆ ಇಟ್ಟಿದ್ದಾರೆ. ಉಪೇಂದ್ರ ಅವರ ಸಿನಿಮಾ ಅಬ್ಬರಿಸಲು ಕೌಂಟ್‌ಡೌನ್ ಶುರುವಾಗಿದ್ದು, ಇನ್ನೇನು ಕೆಲವೇ ದಿನದಲ್ಲಿ ಅಭಿಮಾನಿಗಳ ಆಸೆ ಕೂಡ ಪೂರೈಸಲಿದ್ದಾರೆ ನಟ ಉಪೇಂದ್ರ ಅವರು. ಹೀಗಾಗಿ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ತಂಗಾಳಿ + ಬಿರುಗಾಳಿ ಎದ್ದಿದೆ! ಉಪೇಂದ್ರ ಅವರ ಫ್ಯಾನ್ಸ್ ಈ ಝಲಕ್ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.












Click it and Unblock the Notifications