ನಂದು ತುಂಬಾ ದೊಡ್ಡದು ಎಂದ ಉಪೇಂದ್ರ: ಅವನಿಗಿಂತ ನಿಂದು ಚಿಕ್ಕದು ಅಂದಿದ್ದು ಏಕೆ ರಿಯಲ್ ಸ್ಟಾರ್?
ಉಪ್ಪಿ ಅಲಿಯಾಸ್ ಉಪೇಂದ್ರ ಅಲಿಯಾಸ್ ರಿಯಲ್ ಸ್ಟಾರ್ ಹೀಗೆ ಕರ್ನಾಟಕದ ಪ್ರತಿಭೆ ನಮ್ಮ ಉಪೇಂದ್ರ ಅವರು ಇಡೀ ದೇಶಾದ್ಯಂತ ಹವಾ ಇಟ್ಟಿದ್ದಾರೆ. ಹೀಗಾಗಿಯೇ ಉಪ್ಪಿ ಏನನ್ನೇ ಮಾಡಿದರೂ ಅದು ಫುಲ್ ವೈರಲ್ ಆಗುತ್ತೆ. ಅದರಲ್ಲೂ ಉಪೇಂದ್ರ ಅವರ ಕ್ರೇಜ್ ದೇಶದ ಮೂಲೆ ಮೂಲೆಯಲ್ಲೂ ಹಬ್ಬಿ ಹೋಗಿದೆ. ಇದೇ ಸಮಯದಲ್ಲಿ ನಟ ಉಪೇಂದ್ರ ಅವರು, ತಮ್ಮ ಯುಐ (UI) ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋ ರಿಲೀಸ್ ಮಾಡಿದ್ದಾರೆ.
ಹಿಂದೆ ಯುಐ (UI) ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಟೀಸರ್‌ಗೆ ಅದ್ಭುತ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಕೆಲವೆ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆಯ ಪಡೆದುಕೊಂಡಿತ್ತು. ಇದೀಗ ಯುಐ (UI) ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋ ರಿಲೀಸ್ ಆಗಿದ್ದು. ಈ ಮೂಲಕ ಬರೋಬ್ಬರಿ 10 ವರ್ಷಗಳ ನಂತರ ಉಪೇಂದ್ರ ಅವರು ಡೈರೆಕ್ಷನ್‌ಗೆ ಮರಳಿದ್ದು, ಹಾಗೇ ತಮ್ಮ ಸಿನಿಮಾದಲ್ಲಿ ಅದ್ಭುತವನ್ನೇ ತೋರಿಸುತ್ತಿರುವ ಮುನ್ಸೂಚನೆ ಕೊಟ್ಟಿದ್ದಾರೆ. ಹಾಗಾದರೇ, ಕೋಟಿ ಕೋಟಿ ಫ್ಯಾನ್ಸ್ ಕಾಯುತ್ತಿರುವ ಯುಐ ಸಿನಿಮಾದ ಝಲಕ್ ಹೇಗಿದೆ ಗೊತ್ತಾ? ಮುಂದೆ ಓದಿ.

'ಚೀಪ್ ಸಾಂಗ್' ಹವಾ ಹೇಗಿದೆ?
ಇಂದು ಪ್ರೇಮಿಗಳ ದಿನ ಹೀಗಾಗಿ ಉಪೇಂದ್ರ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ ಕನ್ನಡಿಗರಿಗೆ. ಈ ಮೊದಲೇ ಹೇಳಿದಂತೆ 'ಯುಐ' ಸಿನಿಮಾ ಮೊದಲ ಹಾಡಿನ ಝಲಕ್ ತೋರಿಸಿದ್ದಾರೆ. ಇದು 'ಚೀಪ್ ಸಾಂಗ್' ಆದರೆ ಇದನ್ನ ನೋಡಿದವರು ಮಾತ್ರ ಇದೇ ಕಾಸ್ಟ್ಲಿ ಸಾಂಗ್ ಅಂತಿದ್ದಾರೆ. ಈ ಹಾಡಿನ ಹೆಸರನ್ನೇ 'ಚೀಪ್ ಸಾಂಗ್' ಅಂತಾ ಇಟ್ಟಿದ್ದಾರೆ ನಟ ಉಪೇಂದ್ರ ಅವರು. ಈ ಮೂಲಕ ತಾವು ಅದೆಷ್ಟು ಡಿಫರೆಂಟ್ ಅನ್ನೋದನ್ನ ಮತ್ತೆ ತೋರಿಸಿದ್ದಾರೆ ರಿಯಲ್ ಸ್ಟಾರ್ ಸೂಪರ್ ಸ್ಟಾರ್ ಉಪ್ಪಿ. ಹಾಗಾದರೆ ಯುಐ ಮೊದಲ ಹಾಡಿನ ಪ್ರೋಮೋ ನೋಡಬೇಕಾ? ಮುಂದೆ ಓದಿ.
'ಲಹರಿ ಫಿಲ್ಮ್ಸ್' ಮೂಲಕ ರಿಲೀಸ್
ಅಷ್ಟಕ್ಕೂ ಉಪ್ಪಿ ಅವರು ರಿಲೀಸ್ ಮಾಡಿಸಿರುವ 'ಯುಐ' ಸಿನಿಮಾದ ಮೊದಲನೇ ಹಾಡಿನ ಝಲಕ್ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿದೆ. ಈ ಹಾಡಿನ ಸಾಹಿತ್ಯ ಕೇಳಿದ ಎಲ್ಲರಿಗೂ ಅಚ್ಚರಿ ಆಗುತ್ತಿದೆ. 'ಲಹರಿ ಫಿಲ್ಮ್ಸ್' ಚಾನೆಲ್‌ನ ಮೂಲಕ, ಈ ಹಾಡಿನ ಪ್ರೋಮೋ ಬಿಡುಗಡೆ ಆಗಿದೆ. ಅಜನೀಶ್ ಬಿ. ಲೋಕನಾಥ್ ಈ ಸಿನಿಮಾಗೆ ಸಂಗೀತ ನೀಡಿದ್ದು, ಅಭಿಮಾನಿಗಳು ಕೂಡ ಈ ಹಾಡು ಕೇಳಿ ಫಿದಾ ಆಗಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ವಿಜಯ್ ಪ್ರಕಾಶ್ ಸೇರಿ ನಕಾಶ್ ಅಜೀಜ್, ದೀಪಕ್ ಬ್ಲ್ಯೂ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಈ ಹಾಡಿನ ಸಾಹಿತ್ಯ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದೆ.
Experience the thrill of a ~Costliest~ #Cheap Song promo 💃✨ #UITheMovie welcomes you to ……
— Upendra (@nimmaupendra) February 14, 2024
Decode the inner meaning of the Lyrics…… and comment box is yours ....#UITheMovie's #CheapSong Promo Links:
Kannada : https://t.co/5WmnYB8fn7
Telugu : https://t.co/tHsPO6Nura…
ಅಭಿಮಾನಿಗಳು ಏನ್ ಹೇಳ್ತಾ ಇದ್ದಾರೆ?
ಅಂದಹಾಗೆ 'ಯುಐ' ಸಿನಿಮಾದ 'ಚೀಪ್ ಸಾಂಗ್' ಲಿರಿಕ್ಸ್ ಕೇಳಿದ ಅಭಿಮಾನಿಗಳು ಇದೀಗ ಫಿದಾ ಆಗಿದ್ದಾರೆ. 'ಎಲ್ಲ ಚೀಪ್ ಚೀಪ್. ನಂದು ತುಂಬ ದೊಡ್ಡದು. ಅವನಿಗಿಂತಲು ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು ಇವನಿಗಿಂತ ಅವನದ್ದು ದೊಡ್ಡದು. ಎಲ್ಲಾ ಚೀಪ್ ಚೀಪ್..' ಎಂಬ ಲಿರಿಕ್ಸ್ ಯುಐ ಸಿನಿಮಾದ ಹಾಡಿನಲ್ಲಿ ಇದೆ. ಈ ಸಾಂಗ್ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲಾ ಕಡೆಯೂ ವೈರಲ್ ಆಗುತ್ತಿದೆ.

ಕನ್ನಡಿಗರ ನಿರೀಕ್ಷೆ ಕೆರಳಿಸಿದ್ದ 'UI' ಸಿನಿಮಾ ಅದನ್ನು ನಿಜ ಮಾಡಲು ಸಜ್ಜಾಗಿದೆ. ಉಪೇಂದ್ರ ಅವರು ಇದೀಗ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಮುನ್ಸೂಚನೆ ನೀಡುತ್ತಿದ್ದಾರೆ. ಉಪ್ಪಿ ಡೈರೆಕ್ಷನ್ ಮಾಡಿ ನಟನೆ ಮಾಡಿ ಕನ್ನಡಿಗರ ಎದುರು ಹೊಸ ಲೋಕ ತೆರೆದಿಡಲು ಸಜ್ಜಾಗಿದ್ದಾರೆ. ಹೀಗಿದ್ದಾಗ 'UI' ಸಿನಿಮಾ ಒಟ್ಟಾರೆಯಾಗಿ 9 ಭಾಷೆಗೆ ಡಬ್ ಮಾಡಲು ಸಿದ್ಧತೆ ನಡೆಸಲಾಗಿದ್ದು, ಈ ಮೂಲಕ ಕನ್ನಡ ಸಿನಿಮಾ ಇಡೀ ಜಗತ್ತಿನಲ್ಲಿ ತನ್ನ ಖದರ್ ತೋರಿಸಲು ಸಜ್ಜಾಗುತ್ತಿದೆ.












Click it and Unblock the Notifications