ತಗಡು ಟು ಬೆಳ್ಳುಳ್ಳಿ ಕಬಾಬ್: ಉಪೇಂದ್ರ ಹಾಡಿನಲ್ಲಿ ಮತ್ತೆ ಕಮಾಲ್!

ನಟ ಉಪೇಂದ್ರ ಅವರು ಈ ಬಾರಿ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡೋಕೆ ಸಜ್ಜಾಗಿದ್ದಾರೆ. ಅದರಲ್ಲೂ, ಒಂದಾದ ನಂತರ ಒಂದು ಸೂಪರ್ ಹಿಟ್ ಸಾಂಗ್‌ನ ರಿಲೀಸ್ ಮಾಡುತ್ತಾ. ಉಪ್ಪಿ ಕನ್ನಡ ನಾಡಿನ ಜನರಿಗೆ ಹೆಜ್ಜೆ ಹೆಜ್ಜೆಗೂ ಸರ್ಪ್ರೈಸ್ ಕೊಡುತ್ತಿದ್ದಾರೆ. ಹೀಗಿದ್ದಾಗ ಇಂದು 'ಟ್ರೋಲ್ ಸಾಂಗ್' ರಿಲೀಸ್ ಮಾಡಿ, ತಗಡು ಟು ಬೆಳ್ಳುಳ್ಳಿ ಕಬಾಬ್ ಸಂಪೂರ್ಣ ವಿವರಣೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ತಮ್ಮ 'ಯುಐ' ಸಿನಿಮಾದ ಮೊದಲ ಹಾಡನ್ನು ಉಪೇಂದ್ರ ಅವರು ರಿಲೀಸ್ ಮಾಡಿದ್ದರು. 'ನಂದು ತುಂಬಾ ದೊಡ್ಡದು.. ಅವನಿಗಿಂತ ನಿಂದು ಚಿಕ್ಕದು..' ಅಂತ ಹೊಸ ಟ್ರೆಂಡ್ ಹುಟ್ಟುಹಾಕಿದ್ದರು. ಇದೀಗ 'ತಗಡು ಟು ಬೆಳ್ಳುಳ್ಳಿ ಕಬಾಬ್' ಕಂಪ್ಲೀಟ್ ಟ್ರೋಲ್ ಕಹಾನಿ ಬಿಚ್ಚಿಟ್ಟಿದ್ದಾರೆ. ಹಾಗಾದರೆ ಉಪೇಂದ್ರ ಅವರ ಬಹುನಿರೀಕ್ಷಿತ 'ಯುಐ' ಸಿನಿಮಾದ 2ನೇ ಹಾಡಿನಲ್ಲಿ ಇರುವುದು ಏನು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

Real Star Upendra s New Movie Song Of UI Is Creating New Trend

ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ!

ಇದು ಸೋಷಿಯಲ್ ಮೀಡಿಯಾ ಜಮಾನ, ಇಲ್ಲಿ ಏನೇ ಆದ್ರೂ ಜನರು ಮೊದಲು ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಅಲ್ಲಿ ಅಪ್‌ಡೇಟ್ ಮಾಡ್ತಾರೆ. ಇದೇ ವಿಚಾರಗಳು ಕೆಲವು ಬಾರಿ ಟ್ರೆಂಡ್ ಕೂಡ ಆಗುತ್ತವೆ. ಇತ್ತೀಚೆಗೆ ಈ ರೀತಿ ಫುಲ್ ವೈರಲ್ ಆಗಿ, ಟ್ರೋಲ್ ಆಗಿದ್ದ ವಿಚಾರಗಳನ್ನೇ ಹಿಡಿದು ಇದೀಗ ಹೊಸ ಹಾಡನ್ನೇ ಮಾಡಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.

ಇದರ ಜೊತೆಗೆ ಕೆಲವು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದ್ದ ಟ್ರೋಲ್‌ಗಳನ್ನು ಕೂಡ, ನಟ ಉಪ್ಪಿ ತಮ್ಮ ಸಾಂಗ್‌ನಲ್ಲಿ ತೋರಿಸಿದ್ದಾರೆ. ಹಾಗಾದರೆ ರಿಯಲ್ ಸ್ಟಾರ್ ಉಪ್ಪಿ ಅವರ ಟ್ರೋಲ್ ಸಾಂಗ್‌ನಲ್ಲಿ ಬಂದಿರುವ ಟ್ರೋಲ್‌ಗಳು ಯಾವುವು? ಯಾವೆಲ್ಲಾ ಟ್ರೋಲ್ ಬಳಸಿ, ಈ ಹಾಡನ್ನು ಕಟ್ಟಿದ್ದಾರೆ ಉಪ್ಪಿ? ಬನ್ನಿ ತಿಳಿಯೋಣ ಮುಂದೆ ಓದಿ.

'ಟ್ರೋಲ್ ಸಾಂಗ್' ಹಾಡಿನ ಲಿರಿಕ್ಸ್

ಇತ್ತೀಚೆಗೆ ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗಿದ್ದ ಸ್ವತಃ ಉಪೇಂದ್ರ ಅವರೇ, ನಿರ್ದೇಶನ & ನಟನೆ ಮಾಡಿದ್ದ ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್‌, ಒನ್ ಮೋರ್ ಒನ್ ಮೋರ್ ಅನ್ನಬೇಕು... ಹೆಂಗ್ ಪುಂಗ್ಲಿ... ಆಲ್‌ ರೈಟ್ ಮುಂದಕ್ಕೋಗೋಣ... ಸೇರಿದಂತೆ ಜೋಡೆತ್ತು... ಇದು ರಾಜ್ಯವೇ ಖುಷಿಪಡುವ ಸುದ್ದಿ... ನಾ ಡ್ರೈವರಾ, ನನ್ನ ಲವರಾ.. ಹೇ ತಗಡು, ಗುಮ್ಮಿಸಿಕೊಳ್ತೀಯಾ... ಕಂಜಾಜುಲೆಷನ್ಸ್ ಬ್ರದರ್.. ನಾನು ನಂದಿನಿ ಪಿಜಿಯಲ್ಲಿ ಇರ್ತಿನಿ... ಡೋಲೋ 650 ಮಾತ್ರೆ ಬಿಸಿ ರಾಗಿಹಿಟ್ಟು... ಈ ಎಲ್ಲಾ ಟ್ರೋಲ್‌ಗಳು ಇದೀಗ ಉಪ್ಪಿ ಅವರ ಬಹು ನಿರೀಕ್ಷಿತ ಯುಐ (UI) ಸಿನಿಮಾ ಹಾಡಿನಲ್ಲಿ ಫುಲ್ ಟ್ರೋಲ್ ಆಗಿವೆ.

ಹಾಡು ಬರೆದವರು ಯಾರಪ್ಪಾ?

ಅಂದಹಾಗೆ ಉಪೇಂದ್ರ ತಮ್ಮ ಯಾವುದೇ ಸಿನಿಮಾದಲ್ಲೂ ಪಕ್ಕಾ ಒಂದೊಂದು ಸರ್ಪ್ರೈಸ್ ಇಟ್ಟೇ ಇಟ್ಟಿರುತ್ತಾರೆ. ಅದರಲ್ಲೂ ಯುಐ (UI) ಸಿನಿಮಾದ ಹಾಡುಗಳು ಈಗ ಕುತೂಹಲದ ಖಜಾನೆ ಆಗಿದೆ. ಯುಐ ಸಿನಿಮಾದ 'ಟ್ರೋಲ್ ಸಾಂಗ್' ಇದೀಗ ಎಲ್ಲೆಲ್ಲೂ ಫುಲ್ ವೈರಲ್ ಆಗುತ್ತಿದೆ. ಈ ಹಾಡನ್ನ ನರೇಶ್ ಕುಮಾರ್ ಬರೆದಿದ್ದು, ಅಜನೀಶ್ ಲೋಕನಾಥ್ ಅವರಿಂದ ಇಂಪಾದ ಸಂಗೀತ ಪಡೆಯಲಾಗಿದೆ.

ಹಾಗೇ ಐಶ್ವರ್ಯಾ ರಂಗರಾಜನ್, ಹರ್ಷಿತಾ ದೇವಂತ್ ಮತ್ತು ಅನೂಪ್ ಭಂಡಾರಿ, ಅಜನೀಶ್ ಲೋಕನಾಥ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೆ ವಿವಿಧ ಭಾಷೆಯಲ್ಲೂ ಸಾಂಗ್ ರಿಲೀಸ್ ಆಗಿದ್ದು. ಯುಟ್ಯೂಬ್‌ ಮುಖ್ಯ ಕಚೇರಿ ಇಂದು ಯುಐ ಹಾಡು ಬಿಡುಗಡೆಗೆ ಸಾಕ್ಷಿಯಾಗಿತ್ತು. ಮುಂಬೈನಲ್ಲಿ ಇರುವ, ಯುಟ್ಯೂಬ್‌ ಮುಖ್ಯ ಕಚೇರಿಯಲ್ಲಿ ಈ ಹಾಡನ್ನ ಬಿಡುಗಡೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+