20 ಕೋಟಿ ರೂಪಾಯಿ ದುಡಿದು 1998ರಲ್ಲೇ ಹವಾ ಎಬ್ಬಿಸಿದ್ದ ಉಪೇಂದ್ರ ‘ಎ’ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್!

ಉಪೇಂದ್ರ ಅಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರ ಅಲ್ಲ, ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಅಖಾಡದಲ್ಲಿ ಒಂದು ದೊಡ್ಡ ಹೆಸರು ಇದೆ. ಉಪ್ಪಿ ಸಿನಿಮಾ ಡೈರೆಕ್ಷನ್ ಮಾಡ್ತಾರೆ ಅಂದ್ರೆ ಸ್ಯಾಂಡಲ್‌ವುಡ್ ಟು ಬಾಲಿವುಡ್ ಜನರು ಕಾಯ್ತಾರೆ. ಯಾಕಂದ್ರೆ ಉಪೇಂದ್ರ ಸಿನಿಮಾ ಆ ರೇಂಜ್‌ಗೆ ಹವಾ ಎಬ್ಬಿಸುತ್ತಿದೆ. ಹೀಗಿದ್ದಾಗಲೇ, ಇಂದು ಉಪೇಂದ್ರ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ಎ' 26 ವರ್ಷಗಳ ನಂತರ ಅದ್ಧೂರಿಯಾಗಿ ರೀ ರಿಲೀಸ್ ಆಗಿದ್ದು. ಇಂದು ಬೆಳಗ್ಗೆಯಿಂದಲೇ ಕರ್ನಾಟಕದ ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ.

1998ರಲ್ಲಿ ರಿಲೀಸ್ ಆಗಿದ್ದ 'ಎ' ಸಿನಿಮಾ ಕನ್ನಡ ಮಾತ್ರ ಅಲ್ಲ ಹಲವು ಭಾಷೆಗಳಿಗೆ ಕೂಡ ಡಬ್ಬಿಂಗ್ ಆಗಿ ರಿಲೀಸ್ ಆಗಿತ್ತು. ಹೀಗೆ 'ಎ' ಸಿನಿಮಾ ಆಗಿನ ಕಾಲದಲ್ಲೇ ದೊಡ್ಡ ಮಟ್ಟದ ಸೌಂಡ್ ಮಾಡಿತ್ತು. 20 ಕೋಟಿ ರೂಪಾಯಿ ದುಡಿದು 1998ರಲ್ಲೇ ಹವಾ ಎಬ್ಬಿಸಿದ್ದ ಉಪೇಂದ್ರ ಸಿನಿಮಾ ಈಗ ಮತ್ತೊಮ್ಮೆ ಹವಾ ಎಬ್ಬಿಸಿದೆ. ಅದರಲ್ಲೂ ಕನ್ನಡ ಸಿನಿಮಾ ಪ್ರೇಕ್ಷಕ ಪ್ರಭು ಈ ಸಿನಿಮಾ ನೋಡಿ ಫುಲ್ ಫಿದಾ ಆಗಿದ್ದರು.

Real Star Upendra s A Movie Re Released In Several States Of India From 17 May 2024

ಟಿಕೆಟ್ ಎಲ್ಲಾ ಸೋಲ್ಡ್ ಔಟ್!

ಕರ್ನಾಟಕದ ಹತ್ತಾರು ಸಿನಿಮಾ ಮಂದಿರಗಳಲ್ಲಿ ಇಂದು ಬೆಳಗ್ಗಯಿಂದಲೇ 'ಎ' ಸಿನಿಮಾ ರೀ ರಿಲೀಸ್ ಆಗಿತ್ತು. ಈಗಾಗಲೇ ಸಿನಿಮಾದ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಜನಗಳು ತುಂಬಿ ತುಳುಕುತ್ತಿದ್ದಾರೆ. ಉಪ್ಪಿ ಈ ಸಿನಿಮಾ ಮೂಲಕ ಎಬ್ಬಿಸಿದ್ದ ಹವಾ ಮತ್ತೊಮ್ಮೆ ಇಡೀ ಜಗತ್ತಿಗೆ ಗೊತ್ತಾಗುತ್ತಿದೆ. ಹಾಗಾದ್ರೆ 'ಎ' ಸಿನಿಮಾಗೆ ಉಪೇಂದ್ರ ಹೀರೋ ಆಗಿದ್ದು ಹೇಗೆ ಗೊತ್ತಾ? ಆ ರೋಚಕ ಕಥೆ ತಿಳಿಯಲು ಮುಂದೆ ಓದಿ.

ಉಪ್ಪಿ ಹೀರೋ ಆಗಿ ಎಂಟ್ರಿ!

'ಎ' ಸಿನಿಮಾದ ಬಿಡುಗಡೆ ಹಿಂದೆ ದೊಡ್ಡ ಕಥೆಯೇ ಇದೆ. ಯಾಕಂದ್ರೆ ಈ ಸಿನಿಮಾದಲ್ಲಿ, ಉಪೇಂದ್ರ ಅವರು ಹೀರೋ ಆಗಿ ಎಂಟ್ರಿ ಕೊಡುವ ಮೂಲಕ ಮೊಟ್ಟ ಮೊದಲ ಬಾರಿ ಈ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ತೆರೆ ಮೇಲೆ ಮಿಂಚಿದರು. ಮೊದಲಿಗೆ ಉಪ್ಪಿ ಈ ಸಿನಿಮಾದಲ್ಲಿ ಹೀರೋ ಆಗಬೇಕು ಅಂತಾ ನಿರ್ಧಾರ ಮಾಡಿರಲಿಲ್ಲ. ಬೇರೆ ಹೀರೋಗೆ ಅಂತಾ 'ಎ' ಸಿನಿಮಾದ ಕಥೆ ಮಾಡಿದ್ದರಂತೆ. ಆದರೆ ಆಗಿದ್ದೇ ಬೇರೆ, 'ಎ' ಸಿನಿಮಾದಲ್ಲಿ ಉಪ್ಪಿಗೆ ಹೀರೋ ಆಗಿ ತಾವೇ ಎಂಟ್ರಿ ಕೊಡಬೇಕು ಎಂಬ ದೃಢ ನಿರ್ಧಾರ ಬಂದಿತ್ತು. ಈ ಮೂಲಕ ನಿರ್ದೇಶಕ ಉಪ್ಪಿ ತಾವೇ ಹೀರೋ ಆಗಿ ಮಿಂಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+