Get Updates
Get notified of breaking news, exclusive insights, and must-see stories!

UI Movie: ಉಪ್ಪಿಯ ಯುಐ ಸಿನಿಮಾ ವೀಕ್ಷಿಸಿ ರಾಕಿಂಗ್‌ ಸ್ಟಾರ್‌ ಯಶ್‌ ಹೇಳಿದ್ದೇನು?

ರಿಯಲ್‌ ಸ್ಟಾರ್‌ ಉಪೇಂದ್ರ ಅವರು ನಿರ್ದೇಶಿಸಿ ನಟಿಸಿರುವ ಯುಐ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರರಂಗದ ಹಲವು ಈ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನಟ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಮುಂಬೈ ಶೂಟಿಂಗ್‌ ನಡುವೆ ಬಿಡುವು ಮಾಡಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಪತ್ನಿ ರಾಧಿಕಾ ಅವರೊಂದಿಗೆ ತೆರಳಿ ಯುಐ ಸಿನಿಮಾ ವೀಕ್ಷಿಸಿದ್ದಾರೆ.

ಯಶ್ಅವರು ಮೊದಲಿನಿಂದಲೂ ಉಪೇಂದ್ರ ಅವರ ಅಭಿಮಾನಿ ಎಂದು ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ ಅವರ ಎಲ್ಲ ಸಿನಿಮಾಗಳನ್ನು ಯಶ್‌ ನೋಡುತ್ತಾ ಬೆಳೆದವರು. ಈಗ ಯಶ್‌ ಕೂಡ ದೊಡ್ಡ ನಟರಾದರೂ ಉಪ್ಪಿ ಅವರ ಸಿನಿಮಾಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಈ ಹಿನ್ನೆಲೆ ಯುಐ ಸಿನಿಮಾ ವೀಕ್ಷಿಸಿ ಯಶ್‌ ಖುಷ್‌ ಆಗಿದ್ದಾರೆ.

Real Star Upendra UI Movie Earns Praise Rocking Star Yash Watches with Wife Radhika Pandith

ಸಿನಿಮಾ ವೀಕ್ಷಿಸಿ ಮಾತನಾಡಿರುವ ನಟ ಯಶ್‌, ನಾನು ಉಪ್ಪಿ ಸರ್‌ ಅವರ ದೊಡ್ಡ ಅಭಿಮಾನಿ. ನನ್ನಂತ ಹಲವರಿಗೆ ಉಪೇಂದ್ರ ಅವರು ದೊಡ್ಡ ಇನ್ಸ್‌ಪಿರೇಷನ್‌. ಇನ್ನು ಈ ಯುಐ ಸಿನಿಮಾ ಮೂಲಕ ಉಪ್ಪಿ ಸರ್‌ ಮತ್ತೆ ತಮ್ಮ ಶೈಲಿಯನ್ನು ಪ್ರದರ್ಶಿಸಿದ್ದಾರೆ. ಅವರು ಸುಮ್ಮನೆ ಮನರಂಜನೆಗಾಗಿ ಸಿನಿಮಾ ಮಾಡೋರಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಪ್ಪಿ ಸರ್‌ ಅವರ ಸಿನಿಮಾಗಳಲ್ಲಿ ಹಲವು ವಿಚಾರಗಳು ಒಳಗೊಂಡಿರುತ್ತವೆ. ಒಳಾರ್ಥಗಳು ಅಡಗಿಕೊಂಡಿರುತ್ತದೆ. ಈ ಸಿನಿಮಾದಲ್ಲೂ ಉಪ್ಪಿ ಸರ್‌ ಅದೇ ರೀತಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೋಡಿ ನನಗೆ ಬಹಳ ಖುಷಿಯಾಯಿತು. ಈ ಸಿನಿಮಾವನ್ನು ಜನ ತುಂಬಾ ಎಂಜಾಯ್‌ ಮಾಡ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Real Star Upendra UI Movie Earns Praise Rocking Star Yash Watches with Wife Radhika Pandith

ನಾನು ಚಿಕ್ಕ ಹುಡುಗನಿದ್ದಾಗಿನಿಂದಲೂ ಉಪ್ಪಿ ಸರ್‌ ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದವನು. ಅವರಿಂದ ಪ್ರಭಾವಿತರಾಗಿ ಸಿನಿಮಾರಂಗಕ್ಕೆ ಬರಬೇಕು ಎಂದು ಕನಸು ಕಟ್ಟಿಕೊಂಡವನು. ಹಾಗಾಗಿ ಇಂದು ಅವರ ಜೊತೆಯಲ್ಲೇ ಕುಳಿತು ಅವರ ಸಿನಿಮಾ ವೀಕ್ಷಿಸಿದ್ದು ತುಂಬಾ ಖುಷಿ ನೀಡಿದೆ. ಇದು ನನ್ನ ಪಾಲಿನ ಅದೃಷ್ಟ ಎಂದು ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಉಪ್ಪಿ ಸರ್‌ ಅವರ ಮನಸ್ಸಿನಲ್ಲಿರುವ ವಿಚಾರಗಳನ್ನು ಈ ಸಿನಿಮಾ ಮೂಲಕ ಜನರ ಮುಂದಿಟ್ಟಿದ್ದಾರೆ. ಅಲ್ಲದೆ ಉಪ್ಪಿ ಸರ್‌ ಸಿನಿಮಾ ಅಂದ್ರೆ ಅದು ಸಾಮಾನ್ಯವಾಗಿರಲ್ಲ, ಸಮಾಜದಲ್ಲಿ ನಡೆಯುತ್ತಿರುವ ವಿಚಾರಗಳನ್ನು ತಂದಿದ್ದಾರೆ. ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಉಪ್ಪಿ ಸರ್‌ ತನ್ನ ಅಭಿಮಾನಿಗಳಿಗೆ ದೊಡ್ಡ ಕೆಲಸವನ್ನೇ ನೀಡಿದ್ದಾರೆ. ಚಿತ್ರದಲ್ಲಿ ಉಳಿದವರು ಕೂಡ ಚೆನ್ನಾಗಿ ನಟಿಸಿ ಗಮನ ಸೆಳೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಇನ್ನೇನು ಕೆಲವೇ ದಿನಗಳಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟುಹಬ್ಬವಿದ್ದು, ಅಂದು ಏನಾದರೂ ಸಿಹಿಸುದ್ದಿ ಇದೆಯಾ? ಟಾಕ್ಸಿಕ್‌ ಸಿನಿಮಾ ಬಗ್ಗೆ ಏನಾದ್ರೂ ಅಪ್‌ಡೇಟ್‌ ಕೊಡಿ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಯಶ್‌ ಅವರು ಹೆಚ್ಚಿನ ಗುಟ್ಟು ಬಿಟ್ಟುಕೊಡಲಿಲ್ಲ. ಬದಲಾಗಿ ಕೆಲಸಗಳು ನಡೆಯುತ್ತಿವೆ, ಶೀಘ್ರದಲ್ಲೇ ಅಪ್‌ಡೇಟ್‌ ಕೊಡೋಣ ಎಂದು ಹೇಳಿ ಹೊರಟಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+