Upendra: ಆ ವ್ಯಕ್ತಿ ಊಟ ಇಲ್ಲ ಹೋಗು ಎಂದು ತಳ್ಳಿದಾಗ ನಟ ಉಪೇಂದ್ರ ಏನ್ ಮಾಡಿದ್ರು? ಮುಂದೆ ಆಗಿದ್ದೇನು?
ರಿಯಲ್ ಸ್ಟಾರ್ ಉಪೇಂದ್ರ ಅಂದ್ರೆ ಹಲವು ಸಿನಿಮಾಗಳು ಕಣ್ಮುಂದೆ ಬರುತ್ತವೆ. ಚಿತ್ರರಂಗಕ್ಕೆ ಮೊದಲ ಬಾರಿಗೆ ಕಾಲಿಟ್ಟ ಸಂದರ್ಭದಲ್ಲಿ ಹೀರೋ ಆಗಬೇಕು, ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಕಂಡವರಲ್ಲಿ ನಟ-ನಿರ್ದೇಶಕ ಉಪೇಂದ್ರ ಕೂಡ ಒಬ್ಬರು.
ಸಿನಿಮಾರಂಗದಲ್ಲಿ ತಾವು ಹೀರೋ ಆಗಬೇಕು, ದೊಡ್ಡ ಸ್ಟಾರ್ ಆಗ್ಬೇಕು ಅಂತ ಕನಸು ಕಂಡ ಉಪೇಂದ್ರ ಅವರು, ಬಹಳಷ್ಟು ಜನರಂತೆ ಇಲ್ಲಿ ಹೀಯಾಳಿಕೆ, ಕಿಂಡಲ್, ಟೀಕೆ ಹಾಗೂ ಅವಮಾನ, ಹಾಗೂ ಒಂದು ಹೊತ್ತಿನ ಊಟಕ್ಕಾಗಿಯೂ ಅವಮಾನವನ್ನ ಎದುರಿಸಿದ್ದಾರೆ.

ಈ ಕುರಿತು ನಟ-ನಿರ್ದೇಶಕ ಉಪೇಂದ್ರ ಅವರು ಮಾತನಾಡಿ, ಹಲವರಂತೆ ನಾನು ಕೂಡ ಸಿನಿಮಾ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಸಾಕಷ್ಟು ನೋವುಗಳನ್ನ ಅನುಭವಿಸಿದ್ದಾರೆ. 'ನಾನು ಸಹಾಯಕ ನಿರ್ದೇಶಕನಾಗಿದ್ದ ಸಮಯದಲ್ಲಿ ಬಹಳಷ್ಟು ಬಾರಿ ಅವಮಾನಗಳನ್ನು ಅನುಭವಿಸಿದ್ದೇನೆ. ಶೂಟಿಂಗ್ ಬ್ರೇಕ್ ಮಧ್ಯೆ ಊಟಕ್ಕೆ ಅಂತ ತಟ್ಟೆ ಹಿಡಿದು ನಿಂತಾಗ, ಪ್ರೊಡಕ್ಷನ್ ಪರ್ಸನ್ ಊಟ ಇಲ್ಲ ಹೋಗು ಅಂತ ಪಕ್ಕಕ್ಕೆ ತಳ್ಳಿದ್ದರು ಎಂದು ನೋವುನ ಸಂಗತಿಯನ್ನ ತಿಳಿಸಿದ್ದಾರೆ.
ಆಗ ನನಗೆ ಊಟವೇ ಇರಲಿಲ್ಲ. ಆದರೆ, ನಾನು ಮುಂದೆ ಬೆಳೆದು ನಟ-ನಿರ್ದೇಶಕ ಆದಾಗ ಅದೇ ವ್ಯಕ್ತಿ ನನ್ನ ಮುಂದೆ ಬಂದು ನಿಂತಿದ್ದ. ಆದರೆ ನಾನು ದ್ವೇಷ ಸಾಧಿಸಲಿಲ್ಲ ಎಂದು ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿಕೊಂಡಿದ್ದಾರೆ. ಸಿನಿಮಾ ರಂಗದ ಆರಂಭದಲ್ಲಿ ಬಹಳಷ್ಟು ಜನರಂತೆ ರಿಯಲ್ ಸ್ಟಾರ್ ಉಪೇಂದ್ರ ಅವರು ಹೀಯಾಳಿಕೆ, ಕಿಂಡಲ್, ಟೀಕೆ ಹಾಗೂ ಅವಮಾನ ಎಲ್ಲದರಿಂದಲೂ ಭಾದೆ ಪಟ್ಟಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಉಪೇಂದ್ರ ಅವರು ಸಾಧನೆಯ ಹಾದಿಗಾಗಿ ಶ್ರಮವಹಿಸಿದ್ದಾರೆ.
ನಟ ಉಪೇಂದ್ರ ಅವರು ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಿರ್ದೇಶನದ ಗೀಳನ್ನು ಅಂಟಿಸಿಕೊಂಡಿದ್ದರು. ಕನ್ನಡದ ಹೆಸರಾಂತ ನಿರ್ದೇಶಕ 'ಕಾಶಿನಾಥ' ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇನ್ನೂ 1992ರಲ್ಲಿ ತೆರೆಗೆ ಬಂದ 'ತರ್ಲೆನನ್ಮಗ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ 'ಶ್' ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. ನಂತರ 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ 'ಓಂ' ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರ ಇದೀಗೂ ಸಹ ಎಲ್ಲಾರ ಮೆಚ್ಚುಗೆಯನ್ನ ಗಳಿಸಿದೆ. ಓಂ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷವಾಗಿದೆ.
ನಂತರ ಉಪೇಂದ್ರ ಅವರು, ಆಪರೇಷನ್ ಅಂತ', 'ಸ್ವಸ್ತಿಕ್' ಚಿತ್ರಗಳನ್ನು ನಿರ್ದೇಶಿಸಿದರು. 1998ರಲ್ಲಿ ತೆರೆಗೆ ಬಂದ 'ಎ' ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ 'ಉಪೇಂದ್ರ' ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಉಪೇಂದ್ರ ಅವರು ನಿರ್ದೇಶಕರಾಗಿ ಮಾಡಿದ ಓಂ ಸಿನಿಮಾ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರಿದೆ. ಅವರ ನಟನೆ ಹಾಗು ನಿರ್ದೇಶನದ ಎ, ಉಪೇಂದ್ರ ಸೇರಿದಂತೆ ಹಲವು ಚಿತ್ರಗಳು ಹೊಸ ದಾಖಲೆ ಬರೆದಿವೆ.
10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪೇಂದ್ರ ಅವರು, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ 'ಸೂಪರ್' ಮತ್ತು 2015ರಲ್ಲಿ ನಿರ್ದೇಶಿಸಿದ 'ಉಪ್ಪಿ 2' ಚಿತ್ರಗಳು ಭರ್ಜರಿ ಪ್ರದರ್ಶನವನ್ನ ಕಂಡಿವೆ. ಮುಂದೆ ಬರಲಿರುವ ಉಪೆಂದ್ರ ನಟನೆ ಹಾಗೂ ನಿರ್ದೇಶನದ 'ಯು/ಐ' ಚಿತ್ರವು ಭಾರೀ ನಿರೀಕ್ಷೆ ಹುಟ್ಟಿಸಿದ್ದು, 20 ಡಿಸೆಂಬರ್ 2024 ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ.












Click it and Unblock the Notifications