Thama ಟೀಸರ್ ಔಟ್: ರಶ್ಮಿಕಾ ಹಾಟ್ ಅವತಾರ ನೋಡಿದ ಫ್ಯಾನ್ಸ್ ಥ್ರಿಲ್! ಇದಿನ್ನು ಆರಂಭ ಎಂದ ನ್ಯಾಷನಲ್ ಕ್ರಷ್
Rashmika Mandanna: ನಟ ಆಯುಷ್ಮಾನ್ ಖುರಾನಾ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ನಟಿಸಿರುವ 'ಥಾಮ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಇದೊಂದು ಅಸಾಮಾನ್ಯ ಪ್ರಣಯ ಮತ್ತು ಹಾರರ್ ಕಥಾ ವಸ್ತು ಒಳಗೊಂಡ ಸಿನಿಮಾ ಎನ್ನಲಾಗಿದೆ. ಹಾಸ್ಯವು ಸಿನಿಮಾದಲ್ಲಿರಲಿದೆ. 'ಥಾಮ' ದಲ್ಲಿ ಪರೇಶ್ ರಾವಲ್ ಮತ್ತು ನವಾಜುದ್ದೀನ್ ಸಿದ್ದಿಕಿ ಸಹ ನಟಿಸಿದ್ದಾರೆ. ಅವರ ಪಾತ್ರಗಳ ಪರಿಚಯದ ಪೋಸ್ಟರ್ಸ್ ಸೋಮವಾರ ಬಿಡುಗಡೆ ಮಾಡಲಾಗಿತ್ತು. ಇಂದು ಟೀಸರ್ ಬಿಡುಗಡೆ ಮಾಡಲಾಗಿದ್ದು, ರಶ್ಮಿಕಾ ಅವತಾರ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
'ಥಾಮ'ದ ಟೀಸರ್ 1.49 ನಿಮಿಷ ಇದ್ದು, ಆರಂಭದಲ್ಲೇ ನಟಿ ರಶ್ಮಿಕಾ ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಟ್ ಅವತಾರ್‌ದಲ್ಲಿ ಫ್ಯಾನ್ಸ್‌ಗೆ ಕಾಣಿಸಿಕೊಂಡು ಹುಚ್ಚೆಬ್ಬಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಟೀಸರ್, ರಶ್ಮಿಕಾ ಫೋಟೋಗಳು ಹರಿದಾಡುತ್ತಿವೆ. ಸಿನಿಮಾ ಟ್ರೆಂಡಿಂಗ್‌ನಲ್ಲಿದೆ. ಆಯುಷ್ಮಾನ್ ಅಲೋಕ್ ಪಾತ್ರವನ್ನು ನಿರ್ವಹಿಸಿದರೆ, ರಶ್ಮಿಕಾ ತಡಕಾ ಪಾತ್ರದಲ್ಲಿ ಮಿಂಚಿದ್ದಾರೆ. ನವಾಜುದ್ದೀನ್ ಯಕ್ಷಸನ್ ಪಾತ್ರದಲ್ಲಿ, ಪರೇಶ್ ರಾಮ್ ಬಜಾಜ್ ಗೋಯಲ್ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಇದಿನ್ನು ಆರಂಭ ಎಂದ ನ್ಯಾಷನಲ್ ಕ್ರಶ್
ಟೀಸರ್ ವಿಡಿಯೋ ಹಂಚಿಕೊಂಡಿ ನಟಿ ರಶ್ಮಿಕಾ ಮಂದಣ್ಣ ಅವರು, ''ಅಭಿಮಾನಿಗಳೇ ಇದು ಆರಂಭ ಮಾತ್ರ. ನೀವು ಇದನ್ನು ಆನಂದಿಸುತ್ತೀರಿ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ.. ನಿಮಗಾಗಿ ಇನ್ನೂ ಹೆಚ್ಚಿನದ್ದು ಕಾಯುತ್ತಿದೆ'' ಎಂದು ಟೀಸರ್ ಹಾಗೂ ಫ್ಯಾನ್ಸ್ ಉದ್ದೇಶಿಸಿ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿರುವ ಟ್ರೈಲರ್ ನಲ್ಲಿ ಮತ್ತಷ್ಟು ಕುತೂಹಲಕಾರಿ ಅಂಶಗಳು ಇರಲಿವೆ ಎಂಬ ಸುಳಿವು ನೀಡಿದ್ದಾರೆ. ಅದು ಸಹ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ. ಶೀಘ್ರವೇ 'ಥಾಮ' ಟ್ರೈಲರ್ ರಿಲೀಸ್ ಆಗಲಿದೆ.
ಹೇಗಿದೆ ಟೀಸರ್...?
ಟೀಸರ್ ನಿಗೂಢ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಬೆಂಕಿ, ಕತ್ತಲು ಆವರಿಸಿರುವ ಸಿನಿಮಾದಲ್ಲಿ ಪ್ರೇಮ ಕಥಾ ಹಂದರದಲ್ಲಿ ನಿಗೂಢತೆ, ಹಾರರ್, ಕಾಮಿಡಿ ಸಹ ಉಣಬಡಿಸಲಾಗಿದೆ ಎಂಬುದು ಟೀಸರ್‌ನಲ್ಲಿ ಕಾಣಿಸುತ್ತದೆ. ಕಾಲ್ಪನಿಕ ಜಗತ್ತಿನಲ್ಲಿ ನಡೆಯುವ ಈ ಟೀಸರ್, ರಕ್ತಪಿಶಾಚಿ ಯಾರೆಂದು ಹುಡುಕುವ ವೀಕ್ಷಕರಿಗೆ ಆಶ್ಚರ್ಯ ತರುತ್ತದೆ. ಸಸ್ಪೆನ್ಸ್, ಥ್ರಿಲ್ ಮತ್ತು ಪ್ರಣಯದ ಸುಳಿವು ಟಿಸರ್‌ನಲ್ಲಿ ಕಾಣಿಸುತ್ತದೆ. ಇದೊಂದು 'ರಕ್ತಸಿಕ್ತ' ಪ್ರೇಮಕಥೆ ಎನ್ನಲಾಗಿದೆ.
'ಥಾಮ' ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಹಂಚಿಕೊಂಡಿದ್ದಾರೆ. ದೀಪಾವಳಿ ಹಬ್ಬಕ್ಕೆ ಮ್ಯಾಡಾಕ್ ಹಾರರ್-ಕಾಮಿಡಿ ಯೂನಿವರ್ಸ್‌ನಲ್ಲಿ ಮೊದಲ ಪ್ರೇಮಕಥೆ ವೀಕ್ಷಿಸಲು ಸಿದ್ಧರಾಗಿ ಎಂದು ಪ್ರೇಕ್ಷಕರಿಗೆ ತಿಳಿಸಲಾಗಿದೆ. ಥಾಮಾ ಪ್ರಪಂಚದಲ್ಲಿ ನೀವು ಹೆಜ್ಜೆ ಹಾಕಿ. ನೀವು ನೋಡಿರದ ಭಿನ್ನ ಭಿನ್ನವಾದ ಸಿನಿಮೀಯ ಅನುಭವವನ್ನು ಹತ್ತಿರದ ಚಿತ್ರಮಂದಿರಗಳಲ್ಲಿ ಕಾಣಲಿದ್ದೀರಿ ಎಂದು ಚಿತ್ರತಂಡ ತಿಳಿಸಿದೆ.
This is only the beginning guys.. 🔥❤️
— Rashmika Mandanna (@iamRashmika) August 19, 2025
I really hope you guys enjoy this one.. there’s a lot more waiting for you 🫶🏻
🔗- https://t.co/A2vKN81Jgb#WorldOfThama #ThamaThisDiwali@ayushmannk @SirPareshRawal @Nawazuddin_S #DineshVijan @amarkaushik @AdityaSarpotdar @nirenbhatt… pic.twitter.com/F9472wxIyX
ಟೀಸರ್ ನೋಡಿದವರು ಏನಂದ್ರು?
'ಥಾಮ' ಚಿತ್ರದ ಟೀಸರ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಥಾಮಾ ಟೀಸರ್ ಪ್ರಭಾವಶಾಲಿಯಾಗಿದೆ. ಭಯಾನಕ ವಿಶ್ವವು ಗೂಢಚಾರ ವಿಶ್ವವು ಎಂದಿಗೂ ಸಾಧ್ಯವಾಗದಿದ್ದನ್ನು ಇಲ್ಲಿ ನೋಡಬಹುದು ಎಂದಿದ್ದಾರೆ. ಥಾಮ ಒಂದು ಮಹಾಕಾವ್ಯದಂತೆ ಭಾಸವಾಗುತ್ತದೆ. ಸಿನಿಮಾ ಬ್ಲಾಕ್‌ಬಸ್ಟರ್ ಆಗಲಿದೆ. ಆಯುಷ್ಮಾನ್ ಖುರಾನಾ ಫ್ಯಾನ್ಸ್‌ಗೆ ಸಖತ್ ಖುಷಿ ಸುದ್ದಿ ಸಿಕ್ಕಿದೆ. ದೀಪಾವಳಿ ಹಬ್ಬಕ್ಕೆ ಕೆಲವೇ ವಾರಗಳು ಬಾಕಿ ಇವೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
Thama ಚಿತ್ರಮಂದಿರಗಳಲ್ಲಿ ರೋಮಾಂಚಕ ಅನುಭವ ನೀಡಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆಯುಷ್ಮಾನ್ ಖುರಾನಾ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ನೋಡಲು ಕಾತರರಾಗಿದ್ದೇವೆ. ಟೀಸರ್ ನಲ್ಲಿ ಕಥೆಯ ಅಂಶಗಳನ್ನು ಹೆಚ್ಚಾಗಿ ಬಿಟ್ಟುಕೊಡದೇ ಸೂಕ್ಷ್ಮವಾಗಿ ಟೀಸರ್ ಬಿಡಲಾಗಿದೆ ಎಂದು ಮತ್ತೊಬ್ಬರ ನೆಟ್ಟಿಗರು ಮಾಹಿತಿ ನೀಡಿದ್ದಾರೆ.












Click it and Unblock the Notifications