ನನಗೆ ಕಾಯಲು ಆಗ್ತಿಲ್ಲ: ಬಾಯ್‌ಫ್ರೆಂಡ್ ವಿಜಯ್‌ಗೆ ರಶ್ಮಿಕಾ ಮಂದಣ್ಣ ಹೀಗಂದಿದ್ದೇಕೆ?
ಕಿರಿಕ್ ಬೆಡಗಿ ಹಾಗೂ ಸದ್ಯದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಖ್ಯಾತ ನಟನೊಂದಿಗೆ ಲವ್‌ನಲ್ಲಿದ್ದಾರೆ ಎಂಬ ಗಾಸಿಪ್ ಹೊಸದೇನಲ್ಲ. ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಸೀಕ್ರೇಟ್ ಆಗಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಕುರಿತು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ಕೂಡ ವೈರಲ್ ಆಗುತ್ತಿವೆ. ವಿಜಯ್ ಹಾಗೂ ರಶ್ಮಿಕಾ ಒಳ್ಳೆಯ ಜೋಡಿ ಎಂದು ಅವರ ಅಭಿಮಾನಿಗಳು ಕೂಡ ಇಚ್ಛಿಸುತ್ತಿದ್ದಾರೆ. ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಏನೂ ಹೇಳದಿದ್ದರೂ ಈ ಸುದ್ದಿಯಂತೂ ಜೀವಂತವಾಗಿದೆ. ಈಗ ಹೊಸ ಸುದ್ದಿ ಅಂದ್ರೆ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರಿಗೆ ನೇರವಾಗಿ "ನನಗೆ ಕಾಯಲು ಆಗ್ತಿಲ್ಲ" ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
2018ರಲ್ಲಿ ತೆರೆಕಂಡ ಗೀತಾ ಗೋವಿಂದಂ ಮತ್ತು 2019ರ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಇದಾದ ನಂತರ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಡೇಟಿಂಗ್ ವದಂತಿ ಮುಂದುವರಿದಿವೆ. ರಶ್ಮಿಕಾ ವಿಜಯ್ ಮನೆಗೆ ಭೇಟಿ ನೀಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಅಲ್ಲದೆ, ವಿಜಯ್ ಕುಟುಂಬದ ಜೊತೆಗೆ ಸ್ನೇಹ ಉಳಿಸಿಕೊಂಡಿದ್ದಾರೆ. ಆದರೆ ಇವರಿಬ್ಬರೂ ಈ ವದಂತಿಗಳಿಗೆ ಸ್ಪಷ್ಟ ಉತ್ತರ ಕೊಟ್ಟಿಲ್ಲ. ಆದರೆ ಇಬ್ಬರೂ ತಮ್ಮ ವೃತ್ತಿಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

"ಗೆಳತಿ ಜೊತೆ ಹೆಚ್ಚು ಸಮಯ ಕಳೆಯಬೇಕು"
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ವದಂತಿಗಳ ನಡುವೆ, ವಿಜಯ್ ಇತ್ತೀಚೆಗೆ ತನ್ನ ಗೆಳತಿಯೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂದು ಆಶಿಸಿದ್ದಾನೆ ಎಂದು ಒಪ್ಪಿಕೊಂಡಿದ್ದರು. ಕಳೆದ 2-3 ವರ್ಷಗಳಲ್ಲಿ ಮಹತ್ವದ ವಿಷಯಗಳನ್ನು ಅರಿತಿದ್ದೇನೆ. ತಮ್ಮ ತಾಯಿ, ತಂದೆ, ಗೆಳತಿ ಮತ್ತು ಸ್ನೇಹಿತರು ಮುಂತಾದ ಇಷ್ಟ ಜನರ ಜೊತೆ ಇಷ್ಟು ಸಮಯ ಕಳೆಯುತ್ತಿಲ್ಲ ಅನಿಸುತ್ತಿದೆ. ಇದನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ. ಅಲ್ಲದೆ ಇತ್ತೀಚಿನ ಸಂದರ್ಶನದಲ್ಲಿ ವಿಜಯ್ ತಾನು ಸಿಂಗಲ್ ಅಲ್ಲ ಎಂದಿದ್ದಾರೆ. ಪ್ರೀತಿ ಮತ್ತು ನಮಗಿಷ್ಟದ ವ್ಯಕ್ತಿಯಿಂದ ಪ್ರೀತಿಯನ್ನು ಪಡೆಯುವುದು ಎಷ್ಟು ಮುಖ್ಯವೋ ಅದನ್ನು ತಿಳಿದಿರುವೆ. ಪ್ರೀತಿಯಲ್ಲಿ ನಿರೀಕ್ಷೆಗಳಿರುತ್ತವೆ ಎಂದಿದ್ದಾರೆ.
ರಶ್ಮಿಕಾ ಅವರು ಸದ್ಯ ತಮಿಳು, ತೆಲುಗು, ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇತ್ತ ವಿಜಯ್ ದೇವರಕೊಂಡ ಅವರ ಕಿಂಗ್‌ಡಮ್ ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ. ಜುಲೈ 31ರಂದು ಕಿಂಗ್‌ಡಮ್ ರಿಲೀಸ್ ಆಗಲಿದ್ದು, ತಿರುಪತಿಯಲ್ಲಿ ಇತ್ತೀಚೆಗಷ್ಟೇ ಟ್ರೇಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಇದೇ ಹೊತ್ತಿನಲ್ಲಿ ರಶ್ಮಿಕಾ ಅವರು ಸೋಷಿಯಲ್ ಮೀಡಿಯಾದಲ್ಲಿ ನನಗೆ ಕಾಯಲು ಆಗುತ್ತಿಲ್ಲ ವಿಜಯ್ ಎಂದು ಪೋಸ್ಟ್ ಮಾಡಿದ್ದಾರೆ.
31ನೇ ತಾರೀಖಿಗಾಗಿ ನನಗೆ ಈಗ ಕಾಯಲು ಆಗುತ್ತಿಲ್ಲ. ನಾವು ಫೈರ್ ಅನ್ನು ನೋಡಬಹುದು ಎಂದು ವಿಜಯ್ ದೇವರಕೊಂಡಗೆ ಟ್ಯಾಗ್ ಮಾಡಿದ್ದಾರೆ. ವಿಜಯ್, ಗೌತಮ್, ಅನಿರುದ್ಧ್ ನೀವು ಮೂವರು ಪ್ರತಿಭೆಗಳು, ನೀವು ಒಟ್ಟಿಗೆ ಏನು ಮಾಡಿದ್ದೀರಿ ಎಂದು ನೋಡಲು ನನಗೆ ತುಂಬಾ ಕುತೂಹಲವಿದೆ. ನನಗೆ ನಿಜಕ್ಕೂ ಕಾಯಲು ಸಾಧ್ಯವಿಲ್ಲ. ಜುಲೈ 31ಕ್ಕೆ ಕಿಂಗ್‌ಡಮ್ ನೋಡೋಣ ಬನ್ನಿ ಎಂದು ಆಲ್ ದಿ ಬೆಸ್ಟ್ ಹೇಳಿದ್ದಾರೆ ರಶ್ಮಿಕಾ.












Click it and Unblock the Notifications