Rashmika Mandanna: ವಿಜಯ್ ದೇವರಕೊಂಡ ಬಗ್ಗೆ ಕೇಳುತ್ತಿದ್ದಂತೆ ನಾಚಿ ನೀರಾದ ನಟಿ ರಶ್ಮಿಕಾ, ಹೇಳಿದ್ದೇನು?
Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಅವರ ನಟನೆಯ ತಮಿಳು ಹಾಗೂ ತೆಲುಗುನಲ್ಲಿ ಏಕ ಕಾಲಕ್ಕೆ ನಿರ್ಮಿಸಿರುವ 'ಕುಬೇರ' ಸಿನಿಮಾ ರಿಲಿಸ್‌ಗೆ ರೆಡಿಯಾಗಿದೆ. ಇದರ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇವೆಂಟ್‌ನಲ್ಲಿ ನಟಿ ರಶ್ಮಿಕಾಗೆ ನಟ ವಿಜಯ್ ದೇವರಕೊಂಡ (Vijay Devarkonda) ಅವರ ಕುರಿತು ಕೇಳಿದ ಪ್ರಶ್ನೆಗೆ ನಗುಮೊಗದಿಂದ, ನಾಚಿ ನೀರಾಗಿ ಉತ್ತರಿಸಿದ್ದ ವಿಡಿಯೋವನ್ನು ಅವರ ಫ್ಯಾನ್ಸ್ ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯಿಂದ ಇಬ್ಬರ ಮಧ್ಯ ಲವ್ ಸಾಬೀತಾಗಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಇಬ್ಬರು ಸ್ವಾರ್ ಜೋಡಿಯಾಗಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಇಬ್ಬರು ಪೇರ್ ಫ್ಯಾನ್ಸ್ ಗೆ ಸಖತ್ ಇಷ್ಟವಾಗಿದೆ. 'ಗೀತ ಗೋವಿಂದ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ನಟಿಸುವಾಗಲೇ ಇವರಿಬ್ಬರಿಗೆ ಲವ್ ಆಗಿದೆ. ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಆಗಾಗ ಇಬ್ಬರು ಹೋಟೆಲ್, ಬೀಚ್‌ಗಳಲ್ಲಿ ಸುತ್ತಾಡುತ್ತಾರೆ. ಇಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಂತಲೂ ಹೇಳಲಾಗುತ್ತಿದೆ.

ವಿಜಯ್ ವಿಚಾರಗಳಲ್ಲಿ ನಿಮಗೆ ಯಾವುದಿಷ್ಟ?
'ಕುಬೇರ' ಸಿನಿಮಾ ಪ್ರಚಾರ ವೇಳೆ ನಿರೂಪಕರು ವಿವಿಧ ಸ್ಟಾರ್‌ಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಬಳಿ ಕೇಳಿದ್ದಾರೆ. ಅವರ ವಿಚಾರಗಳಲ್ಲಿ ನಿಮಗೆ ಯಾವುದು ಇಷ್ಟ ಎಂಬುದನ್ನು ತಿಳಿಸಬೇಕಿತ್ತು. ಈ ವೇಳೆ ನಟ ಅಲ್ಲು ಅರ್ಜುನ್ ಅವರಲ್ಲಿ ಯಾವ ವಿಚಾರ ನಿಮಗಿಷ್ಟ? ಎಂದರೆ ನನಗೆ ಅವರ ಸ್ವ್ಯಾಗ್ ಇಷ್ಟ ಎಂದು ರಶ್ಮಿಕಾ ಮಂದಣ್ಣ ಹೇಳುತ್ತಾರೆ.
ಬಳಿಕ ವಿಜಯ್ ದೇವರಕೊಂಡ ಅವರ ಬಗ್ಗೆ ಕೇಳಿದಾಗ, 'ವಿಜಯ್ ಎಲ್ಲ ವಿಚಾರಗಳು ನನಗೆ ಇಷ್ಟ' ಎಂದು ನಗುಮೊಗದಿಂದಲೇ ಹೇಳಿದ್ದಾರೆ. ಹೀಗೆ ಹೇಳುತ್ತಿದ್ದಂತೆ ಫ್ಯಾನ್ಸ್ ಫುಲ್ ಕೇಕೆ ಹೊಡೆಯುತ್ತಿದ್ದಂತೆ ರಶ್ಮಿಕಾ ಮತ್ತಷ್ಟು ನಾಚೀ ನೀರಾಗುತ್ತಾರೆ. ಈ ಹಿಂದೆಯು ಇಂತಹ ಕೆಲವು ಪ್ರಶ್ನೆಗಳು ಎದುರಾದಾಗ ವೇದಿಕೆ ಮೇಲೆಯೇ ನಾಚುತ್ತಲೇ ವಿಜಯ್ ದೇವರಕೊಂಡ ಬಗ್ಗೆ ಉತ್ತರಿಸಿದ್ದರು ರಶ್ಮಿಕಾ.
ಆಗಾಗ ಟೀಕೆಗೆ ಗುರಿಯಾಗುವ ನಟಿ ರಶ್ಮಿಕಾ
'ಅನಿಮಲ್' ಸಿನಿಮಾ ಹಿಂದಿಯಲ್ಲಿ ಹಿಟ್ ಆಗುತ್ತಿದ್ದಂತೆ ಬಾಲಿವುಡ್‌ನಲ್ಲಿ ನೆಲೆಯೂರಿರುವ ನಟಿ ರಶ್ಮಿಕಾ ಮಂದಣ್ಣ ತಮಿಳು, ತೆಲುಗು ಸಿನಿಮಾಗಳಲ್ಲೂ ಬ್ಯೂಸಿ ಇದ್ದಾರೆ. ಇತ್ತೀಚೆಗೆ ತೆಲುಗಿನ ನಟ ನಾಗಾರ್ಜುನ ಅವರಿಗೆ ಕನ್ನಡದಲ್ಲಿ 'ಎಲ್ಲರಿಗೂ ನಮಸ್ಕಾರ' ಎಂದು ಹೇಳಿ ಸುದ್ದಿಯಾಗಿದ್ದ ರಶ್ಮಿಕಾ, ನಾನು ಮೊದಲು ಕಲಿತದ್ದು ತಮಿಳು ಎಂದು ಚೆನ್ನೈನಲ್ಲಿ ಹೇಳಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮೊದಲು ತಾನು ಹೈದರಾಬಾದ್ ನವಳು ಎಂದು ಹೇಳಿಕೊಂಡು ಸುದ್ದಿಯಾಗಿದ್ದರು.
ನಟಿ ರಶ್ಮಿಕಾ ಕನ್ನಡ ವಿಚಾರವಾಗಿ ಆಗಾಗ ಟ್ರೋಲ್ ಆಗುವುದು ಹೊಸದೇನಲ್ಲ. ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದರೂ ಸಹಿತ ಪ್ರೀತಿ ವಿಚಾರದಲ್ಲಿ ನಟ ವಿಜಯ್ ದೇವರಕೊಂಡ ಜೊತೆಗೆ ಅನ್ಯೂನ್ಯ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ತಾರಾ ಜೋಡಿ ವಿವಾಹ ಘೋಷಣೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications