ವಿದೇಶದಲ್ಲಿ ಕೈ ಕೈ ಹಿಡಿದು ಓಡಾಡಿ ಸಿಕ್ಕಿಬಿದ್ದ ರಶ್ಮಿಕಾ-ವಿಜಯ್ ದೇವರಕೊಂಡ
ಬಹುಭಾಷೆಗಳಲ್ಲಿ ಮಿಂಚುತ್ತಿರುವ ಕನ್ನಡದ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಇನ್ನೂ ಯಾಕೆ ಮದುವೆ ಆಗಿಲ್ಲ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ. ಮತ್ತೊಂದೆಡೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರೊಂದಿಗೆ ರಶ್ಮಿಕಾ ಡೇಟಿಂಗ್‌ನಲ್ಲಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಯೂ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಆಗಾಗ ಕದ್ದುಮುಚ್ಚಿ ರಶ್ಮಿಕಾ-ಮಂದಣ್ಣ ಪ್ರವಾಸ ಹೋಗುತ್ತಿರುತ್ತಾರೆ. ಆದರೆ ಮದುವೆ ಅಥವಾ ತಮ್ಮಿಬ್ಬರ ನಡುವೆ ಇದೆ ಎನ್ನಲಾದ ಲವ್ ಗಾಸಿಪ್ ಬಗ್ಗೆ ಕ್ಲಾರಿಟಿ ಕೊಡಲೇ ಇಲ್ಲ. ಇದೀಗ ವಿದೇಶಕ್ಕೆ ಹಾರಿರುವ ರಶ್ಮಿಕಾ-ದೇವರಕೊಂಡ ಕೈಕೈ ಹಿಡಿದು ನಡೆದಾಡುತ್ತಾ ಸಿಕ್ಕಿಬಿದ್ದಿದ್ದಾರೆ.
ವಿಜಯ್ ದೇವರಕೊಂಡ ಅವರ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದರು. ಅಂದಿನಿಂದಲೂ ಇಬ್ಬರ ನಡುವೆ ಲವ್ ಇದೆ ಎಂಬ ಗಾಸಿಪ್ ಹುಟ್ಟಿಕೊಂಡಿದೆ. ಇವರನ್ನು ಟಾಲಿವುಡ್‌ನ ಲವ್‌ಬರ್ಡ್ಸ್ ಎಂದೇ ಅವರ ಅಭಿಮಾನಿಗಳು ಕರೆಯುತ್ತಾರೆ. ಈ ಸಿನಿಮಾಗಳ ನಂತರ ಹಲವು ವೇದಿಕೆಗಳಲ್ಲಿ ಇಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ಪುಷ್ಟಿ ನೀಡಿದ್ದರು. ತಮ್ಮ ಸಿನಿಮಾಗಳಿಗೆ ಸಪೋರ್ಟ್ ನೀಡುತ್ತಾ ಗಮನ ಸೆಳೆದಿದ್ದರು.

ಆದರೆ ಈ ಜೋಡಿ ತಮ್ಮ ಲವ್ ಹಾಗೂ ಡೇಟಿಂಗ್ ವಿಚಾರವನ್ನು ಗುಟ್ಟಾಗಿಯೇ ಉಳಿಸಿಕೊಂಡಿದೆ ಎಂದು ಹೇಳಲಾಗಿತ್ತು. ಕೆಲ ದಿನಗಳ ಹಿಂದೆ ಒಂದೇ ಸಲ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ಒಂದೇ ಜಾಗದಲ್ಲಿ ಪ್ರತ್ಯೇಕವಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನ ಶೇರ್ ಮಾಡಿಯೂ ಕುತೂಹಲ ಮೂಡಿಸಿದ್ದರು. ಆದರೆ ಎಲ್ಲಿಯೂ ಅವರು ನಾವಿಬ್ಬರೂ ಡೇಟಿಂಗ್‌ನಲ್ಲಿರುವುದು ನಿಜ ಎಂದು ಹೇಳಲಿಲ್ಲ. ಇದೀಗ ನ್ಯೂಯಾರ್ಕ್‌ನಲ್ಲಿ ಅವರು ಒಟ್ಟಿಗೆ ಕೈ ಕೈ ಹಿಡಿದು ಓಡಾಡಿದ್ದಾರೆ. ಹಾಗಾಗಿ ಇವರ ಡೇಟಿಂಗ್ ವದಂತಿಯಲ್ಲ, ಸತ್ಯ ಎನ್ನುತ್ತಿದ್ದಾರೆ ಫ್ಯಾನ್ಸ್.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ನಡುವೆ ನ್ಯೂಯಾರ್ಕ್ ನಗರದ ಇಂಡಿಯಾ ಡೇ ಪೆರೇಡ್‌ನಲ್ಲಿ ಇಬ್ಬರೂ ಭಾಗವಹಿಸಿದ್ದಾರೆ. ಇಬ್ಬರನ್ನೂ ಅದ್ಧೂರಿಯಾಗಿ ಸ್ವಾಗತ ಕೋರಲಾಗಿದ್ದು, ಈ ವೇಳೆ ವಿಜಯ್ ರಶ್ಮಿಕಾರ ಕೈಹಿಡಿದು ನಡೆದಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಶೇರ್ವಾನಿ ಧರಿಸಿದ್ದರೆ, ರಶ್ಮಿಕಾ ಕೆಂಪು ಸೀರೆ ಧರಿಸಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಅಭಿಮಾನಿಗಳತ್ತ ಕೈಬೀಸಿ ನಡೆದಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ಅಕ್ಕಪಕ್ಕದಲ್ಲಿ ನಡೆಯುತ್ತಿದ್ದಾಗ ಕೈಗಳನ್ನು ಹಿಡಿದುಕೊಂಡಿರುವುದು ಅಲ್ಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಾರ್ವಜನಿಕರ ಈ ಪ್ರೀತಿಯ ಅಪರೂಪದ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ಕ್ಯಾಮೆರಾಗಳನ್ನು ನೋಡಿದ ತಕ್ಷಣ ಅವರು ತಕ್ಷಣ ತಮ್ಮ ಕೈಗಳನ್ನು ಕೆಳಗೆ ಇಳಿಸಿದ್ದು, ನಂತರ ಜನಸಮೂಹದತ್ತ ಕೈ ಬೀಸಿದ್ದಾರೆ. ಇದು ಅವರ ನಡುವಿನ ಸಂಬಂಧದ ಬಗ್ಗೆ ಹೊಸ ಊಹಾಪೋಹಗಳಿಗೆ ನಾಂದಿ ಹಾಡಿದೆ.












Click it and Unblock the Notifications