Rashmika Mandanna: 1800ರ ದಶಕದ ಕಥೆಯ ಸಿನಿಮಾಗಾಗಿ ಮತ್ತೆ ಒಂದಾದ ವಿಜಯ್-ರಶ್ಮಿಕಾ! ಏನಿದು ಅಪ್ಡೇಟ್

ಬೆಂಗಳೂರು, ಸೆಪ್ಟಂಬರ್ 04: ನ್ಯೂಯಾರ್ಕ್ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡು ವದಂತಿಗಳಿಗೆ ಪುಷ್ಠಿ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ಮತ್ತೆ ಒಂದಾಗಲಿದ್ದಾರೆ. ಈವರೆಗೆ ತಮ್ಮ ಪ್ರೀತಿಯ ಬಗ್ಗೆ ಗುಟ್ಟು ಬಿಟ್ಟು ಕೊಡದ ಇವರಿಬ್ಬರು ತಾವು ಸ್ನೇಹಿತರು ಎಂದಷ್ಟೇ ಹೇಳಿಕೊಂಡಿದ್ದಾರೆ. ಈ ಜೋಡಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಮೂರನೇ ಸಿನಿಮಾ ಮಾಡುವುದು ಖಚಿತವಾಗಿದೆ. ಈ ವಿಚಾರದ ಕೇಳಿದ ಫ್ಯಾನ್ಸ್ ಕ್ರೇಜ್ ಹೆಚ್ಚಾಗಿದೆ.

2018ರಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 'ಗೀತ ಗೋವಿಂದಂ' ಚಿತ್ರದಲ್ಲಿ ನಟಿಸಿದ್ದರು. ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು. 2019 ರಲ್ಲಿ ಅವರ ಎರಡನೇ ಚಿತ್ರ 'ಡಿಯರ್ ಕಾಮ್ರೇಡ್' ಶೂಟಿಂಗ್ ವೇಳೆ ಇವರಿಬ್ಬ ಮಧ್ಯ ಪ್ರೀತಿ ಅರಳಿತು ಎಂದು ಹೇಳಲಾಗುತ್ತಿದೆ. ಅದಾದ ಬಳಿಕ ಇವರಿಬ್ಬರು ಮತ್ತೆ ಸಿನಿಮಾ ಮಾಡಿಲ್ಲ.

Rashmika Mandanna and Vijay Deverakonda Reunite for 1800s Period Drama

ಅಲ್ಲಿಂದ ಸುಮಾರು ಆರು ವರ್ಷಗಳವರಗೆ ರಶ್ಮಿಕಾ, ವಿಜಯ್ ಮಧ್ಯ ಲವ್ ಇದೆ. ಇಬ್ಬರು ಗುಟ್ಟಾಗಿ ಡೇಟಿಂಗ್ ಮಾಡುತ್ತಾರೆ. ಹೋಟೆಲ್, ಬೀಚ್‌, ವಿದೇಶಗಳಲ್ಲಿ ಭೇಟಿ ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಲವ್ ನಲ್ಲಿ ಬಿದ್ದಿದ್ದು, ಶೀಘ್ರವೇ ಮದುವೆ ಮುಹೂರ್ತ ಫೀಕ್ಸ್ ಆಗಲಿದೆ ಎಂದು ಫ್ಯಾನ್ಸ್ ಮಾಡನಾಡಿಕೊಳ್ಳುತ್ತಲೇ ಇದ್ದಾರೆ. ಇವರಿಬ್ಬರು ಒಟ್ಟಿಗೆ ಇರುವ, ಒಂದೇ ಸ್ಥಳದಲ್ಲಿ ಇವರಿಬ್ಬು ತೆಗೆಸಿಕೊಂಡ ಫೋಟೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಲೇ ಇರುತ್ತವೆ. ಆಗ ಇವರಿಬ್ಬ ಮಧ್ಯದ ಪ್ರೀತಿ ವದಂತಿಗೆ ಜೀವ ಬಂದು ಬಿಡುತ್ತದೆ.

ಐತಿಹಾಸಿಕ ಕಥೆಯಲ್ಲಿ ರಶ್ಮಿಕಾ, ವಿಜಯ್ ಮತ್ತೆ ಜೋಡಿ

ಇದೆಲ್ಲದರ ಮಧ್ಯ ಈ ಜೋಡಿಯು ಮತ್ತೆ ಒಂದಾಗಲಿದ್ದಾರೆ. ಅದು ಮೂರನೇ ಸಿನಿಮಾ ಮೂಲಕ ಎಂದು ಮೂಲಗಳು ಮಾಹಿತಿ ನೀಡಿವೆ. ಈ ಸಿನಿಮಾವನ್ನು ರಾಹುಲ್ ಸಂಕೃತ್ಯಾನ್ ನಿರ್ದೇಶಿಸಲಿದ್ದಾರೆ. ಚಿತ್ರದ ಶಿರ್ಷಿಕೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ 1800ರ ದಶಕದ ಸಿನಿಮಾ ಇದು ಎನ್ನಲಾಗುತ್ತಿದೆ. ಇದರಲ್ಲಿ ಆಕ್ಷನ್, ಲವ್, ಭಾವನಾತ್ಮಕ ಎಳೆಯ ಕಥೆ ಇರಲಿದೆ ಎಂದು ಹೇಳಲಾಗುತ್ತಿದೆ.

ವಿಜಯ್ ದೇವರಕೊಂಡ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಒಂದೇ ಒಂದು ಸಿನಿಮಾ ಬ್ರೇಕ್ ನೀಡಿಲ್ಲ. ಜುಲೈ 31 ರಂದು ಬಿಡುಗಡೆಯಾದ 'ಕಿಂಗ್ಡಮ್' ಸದ್ದು ಮಾಡಲಿಲ್ಲ. ಕಳಪೆ ಪ್ರದರ್ಶನ ನೀಡಿತು. ರಶ್ಮಿಕಾರ ಒಂದೆರಡು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಅಲ್ಲದೇ ಥಾಮಾ, ಮೈಸಾ ಸೇರಿದಂತೆ ಒಂದಷ್ಟು ಹೊಸ ಪ್ರಾಜೆಕ್ಟ್‌ಗಳಲ್ಲಿ ಅವರು ಬ್ಯೂಸಿಯಾಗಲಿದ್ದಾರೆ. ಇದರ ಮಧ್ಯ ವಿಜಯ್‌ ಜೊತೆಯೂ ಸಿನಿಮಾ ಮಾಡಲಿದ್ದಾರೆ ಎಂದು ವರದಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+