ಕಾಮಶಕ್ತಿ ವೃದ್ಧಿಗೆ ಸಲಹೆ ನೀಡಿದ ದೀಪಿಕಾ ಪಡುಕೋಣೆ ಗಂಡ ರಣವೀರ್ ಟ್ರೋಲ್ ಸುಳಿಯಲ್ಲಿ ವಿಲವಿಲ!

ಕಾಮ ಅನ್ನೋದು ಊಟ ಇದ್ದಂತೆ ಅಂತಾ ಕೆಲವರು ಹೇಳುತ್ತಾರೆ, ಹಾಗೇ ಕಾಮ ಅನ್ನೋದೆ ಮಹಾನ್ ರೋಗ ಅಂತಾನೂ ಕೆಲವರು ಹೇಳುತ್ತಾರೆ. ಹೀಗೆ ಬೇಕು & ಬೇಡಗಳ ನಡುವೆಯೂ ಕಾಮ ಅನ್ನೋದು ಅನಿವಾರ್ಯ. ಮನುಷ್ಯನ ಸಂತತಿ ಬೆಳೆಯಲು ಕಾಮ ಬೇಕೆ ಬೇಕಾಗಿದೆ. ಆದರೆ ಹೀಗೆ ಕಾಮ ಶಕ್ತಿ ವೃದ್ಧಿ ಬಗ್ಗೆ ಜಾಹೀರಾತು ಮಾಡಿ, ಸಲಹೆ ಕೊಟ್ಟಿದ್ದ ನಟಿ ದೀಪಿಕಾ ಪಡುಕೋಣೆ ಗಂಡ ರಣವೀರ್ ಸಿಂಗ್ ಇದೀಗ ಟ್ರೋಲ್ ಸುಳಿಯಲ್ಲಿ ವಿಲವಿಲ ಒದ್ದಾಡಿದ್ದಾರೆ.

ಹೌದು, ನೀಲಿ ಚಿತ್ರ ಲೋಕದ ತಾರೆ ಅಂತಾನೆ ಗುರುತಿಸಿಕೊಂಡಿರುವ ಜಾನಿ ಸಿನ್ಸ್ (Johnny Sins) ಇಂದಿಗೂ ತಮ್ಮ ಖದರ್ ತೋರಿಸುತ್ತಾರೆ. ಅಮೆರಿಕ ಮೂಲದ ನೀಲಿ ಚಿತ್ರಗಳ ತಾರೆ, ಜಾನಿ ಸಿನ್ಸ್ ಇದೇ ಮೊದಲ ಬಾರಿಗೆ ಭಾರತೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೀಪಿಕಾ ಪಡುಕೋಣೆ ಗಂಡ ರಣವೀರ್ ಸಿಂಗ್ ಕೂಡ ಜಾನಿ ಸಿನ್ಸ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಆದರೆ ಇದೇ ವಿಡಿಯೋ ಈಗ ರಣವೀರ್ ಸಿಂಗ್ ವಿರುದ್ಧ ಭಾರಿ ಆಕ್ರೋಶ ಸ್ಫೋಟವಾಗುವ ರೀತಿ ಮಾಡಿದೆ. ಆ ಬಗ್ಗೆ ಕಂಪ್ಲೀಟ್ ಕಹಾನಿ ಇಲ್ಲಿದೆ ಮುಂದೆ ಓದಿ.

Ranveer Singh Teams Up with Johnny Sins for Ad Shoot, Sparks Huge Troll Social Media

ರಣವೀರ್ + ಜಾನಿ ಸಿನ್ಸ್ ಹವಾ!

ಅಂದಹಾಗೆ ಮುಂಬೈ ಮೂಲದ Bold care ಎಂಬ ಲೈಂಗಿಕ & ವಯಸ್ಕರ ಸಂಬಂಧಿ ಉತ್ಪನ್ನ ತಯಾರಿಕಾ ಕಂಪನಿ ಒಂದು ಜಾಹೀರಾತು ಮಾಡಿತ್ತು. ಹೀಗೆ ಬೋಲ್ಡ್ ಕೇರ್ ಕಂಪನಿಯಿಂದ ನೀಡಿರುವ ಜಾಹೀರಾತಿನಲ್ಲಿ, ರಣವೀರ್ ಸಿಂಗ್ ಅವರು ಜಾನಿ ಸಿನ್ಸ್ ಅವರಿಗೆ ಕಾಮಶಕ್ತಿಯ ವೃದ್ಧಿ ಬಗ್ಗೆ ಸಲಹೆ ನೀಡುತ್ತಾರೆ. ಈಗ ಆ ಜಾಹೀರಾತು ವಿಡಿಯೋ ಫುಲ್ ವೈರಲ್ ಆಗಿದೆ ಮತ್ತು ಈ ಬಗ್ಗೆ ಟ್ರೋಲ್ ಕೂಡ ಶುರುವಾಗಿದೆ. ನೀಲಿ ಚಿತ್ರ ತಾರೆ ಜಾನಿ ಸಿನ್ಸ್ ಸಮೇತರಾಗಿ ಇದೀಗ ದೀಪಿಕಾ ಪಡುಕೋಣೆ ಗಂಡನನ್ನು ಕೂಡ ಟ್ರೋಲಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ಮಧ್ಯೆ ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಡಿಸೈನ್ ಡಿಸೈನ್ ಕಮೆಂಟ್‌ನ ಹಾಕುತ್ತಿದ್ದಾರೆ.

ವಿಡಿಯೋ ಶೇರ್ ಮಾಡಿದ್ದ ರಣವೀರ್

ಅಷ್ಟಕ್ಕೂ ಒಟ್ಟು 1.49 ನಿಮಿಷದ ಜಾಹೀರಾತು ಇಂಟರ್‌ನೆಟ್‌ನಲ್ಲಿ ಸಖತ್ ಸೌಂಡ್ ಮಾಡಿದ್ದು ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ರಣವೀರ್ ಸಿಂಗ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. Bold care ಸಂಸ್ಥೆ ಕೂಡ ಈ ಜಾಹೀರಾತು ವಿಡಿಯೋ ಹಂಚಿಕೊಂಡಿದೆ. ಹಿಂದಿ ಭಾಷೆಯಲ್ಲಿ ಈ ಜಾಹಿರಾತು ಚಿತ್ರೀಕರಣ ಮಾಡಲಾಗಿದೆ. ಒಂದು ಕಡೆ ಈ ಜಾಹೀರಾತಿನ ಕ್ರಿಯೆಟಿವಿಟಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದರೂ, ಮತ್ತೊಂದು ಕಡೆ ಜಾನಿ ಸಿನ್ಸ್ ಹಾಗೂ ರಣವೀರ್ ವಿರುದ್ಧ ಆಕ್ರೋಶವು ಮೊಳಗಿದೆ. ಅಲ್ಲದೆ ಈ ಜಾಹೀರಾತು ಮೂಲಕ 'ಕಿರುತೆರೆಗೆ ಮಾಡಿದ ಅವಮಾನ' ಎನ್ನುವ ಆರೋಪ ಕೇಳಿಬಂದಿದೆ.

ಹೀಗಿದೆ ನೋಡಿ ರಿಯಲ್ ಜಾಹೀರಾತು!

ಸಂಪ್ರದಾಯಸ್ಥ ಕುಟುಂಬದಲ್ಲಿ ವಿವಾಹಿತ ಮಹಿಳೆ ಒಬ್ಬರು ಅಂದರೆ ಆ ಕುಟುಂಬದ ಸೊಸೆ, ಕೋಣೆಯಿಂದ ಹೊರಗೆ ಬಂದು ತಾನು ಮನೆ ಬಿಟ್ಟು ಹೋಗುವುದಾಗಿ ಹೇಳುತ್ತಾರೆ. ಆ ವೇಳೆ ಕುಟುಂಬದ ಸದಸ್ಯರು, ಹಿರಿಯರು ಅಲ್ಲೇ ಇರುತ್ತಾರೆ. ಆಗ ನೀನು ಮನೆ ಬಿಟ್ಟು ಹೋಗಲು ಕಾರಣ ಏನು ಎಂಬ ಪ್ರಶ್ನೆ ಬಂದಾಗ, ತನ್ನ ಗಂಡನಿಗೆ ಅಂದ್ರೆ ಜಾನಿ ಸಿನ್ಸ್‌ಗೆ ಲೈಂಗಿಕ ದೌರ್ಬಲ್ಯ ಇದೆ ಎಂದು ಸೊಸೆ ಹೇಳುತ್ತಾರೆ. ಆ ಸಮಯದಲ್ಲಿ ಆ ಮಹಿಳೆಯ ಅತ್ತೆ & ಮಾವ ಅಲ್ಲಿಯೇ ಇರುತ್ತಾರೆ.

ತನ್ನ ಸೊಸೆಗೆ ಬಾರಿಸುತ್ತಾಳೆ ಅತ್ತೆ!

ಹೀಗೆ ಮನೆಯ ಸೊಸೆ, ಮಗನ ಮೇಲೆ ಮಾಡಿದ ಆರೋಪ ಇಡೀ ಕುಟುಂಬಕ್ಕೆ ಆಘಾತವನ್ನು ನೀಡುತ್ತದೆ. ಅಲ್ಲದೆ ನೇರವಾಗಿ ಸೊಸೆ ತನ್ನ ಮಗನ ಪುರುಷತ್ವದ ಬಗ್ಗೆ ಮಾತನಾಡಿರುವುದು ಕೂಡ ಅತ್ತೆಗೆ ಶಾಕ್ ಕೊಡುತ್ತೆ. ಈ ವೇಳೆ ಜಾಹೀರಾತಿನಲ್ಲಿ ಜಾನಿ ಸಿನ್ಸ್ ಸಹೋದರ ರಣವೀರ್ ಸಿಂಗ್ ಜಾನಿ ಸಿನ್ಸ್ ಬಳಿ ಸಮಜಾಯಿಷಿ ಕೇಳುತ್ತಾರೆ. ಅಷ್ಟರಲ್ಲಿ ಸೊಸೆ ಮಾತು ಕೇಳಿಸಿಕೊಂಡಿದ್ದ ಅತ್ತೆ, ಸೊಸೆ ಕೆನ್ನೆಗೆ ಬಾರಿಸುತ್ತಾರೆ. ಇಲ್ಲಿಂದಲೇ ನೋಡಿ ಕಥೆ ಶುರುವಾಗುತ್ತೆ.

ಜಾನಿ ಸಿನ್ಸ್ ಏನ್ ಮಾಡ್ತಾರೆ?

ಇನ್ನು ಅತ್ತೆಯಿಂದ ಏಟು ತಿಂದ ಸೊಸೆ, ಮಹಡಿಯಿಂದ ಕೆಳಗೆ ಬೀಳುವಾಗ ರಣವೀರ್ ಸಿಂಗ್ ಜಾನಿ ಸಿನ್ಸ್‌ಗೆ ಎಚ್ಚರಿಕೆ ನೀಡಿ, Bold care ಉತ್ಪನ್ನ ಎಸೆಯುತ್ತಾರೆ. ತಕ್ಷಣ ಆ ಉತ್ಪನ್ನವನ್ನ ಜಾನಿ ಸಿನ್ಸ್ ಸೇವನೆ ಮಾಡುತ್ತಾರೆ. ಕೂಡಲೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಹೆಂಡಿಯ ರಕ್ಷಣೆ ಮಾಡುತ್ತಾರೆ. ಆಗ ಅವರಿಬ್ಬರ ನಡುವೆ ಮಿಲನ ಆಗಿದೆ ಎನ್ನುವ ರೀತಿ ತೋರಿಸಿದ್ದು ನಂತರ ಅಲ್ಲಿಗೆ ಅವರ ಸಮಸ್ಯೆ 'ಸುಖಾಂತ್ಯ' ಆಗುತ್ತದೆ. ಇದೀಗ ಈ ಜಾಹೀರಾತು ವೈರಲ್ ಆಗುವ ಜೊತೆಗೆ, ಭಾರಿ ಚರ್ಚೆಗೂ ದಾರಿ ಮಾಡಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+