Rithvik Krupakar: 'ಕಲಾವಿದರಿಗೆ ಮದುವೆಯಾಗಲು ಹೆಣ್ಣು ಕೊಡಲ್ಲ': ರಾಮಾಚಾರಿ ಬೇಸರ
ರಿತ್ವಿಕ್ ಕೃಪಾಕರ್ ಎನ್ನುವ ಹೆಸರು ಎಷ್ಟು ಜನರಿಗೆ ಗೊತ್ತೋ? ಗೊತ್ತಿಲ್ಲವೋ ಗೊತ್ತಿಲ್ಲ. ಅದರೆ ರಾಮಚಾರಿ ಅಂದರೆ ಸಾಕು ನಮ್ಮ ರಾಮಾಚಾರಿ ಅನ್ನೋರಂತೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೌದು ರಾಮಾಚಾರಿ ಧಾರಾವಾಹಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಸದ್ಯ ಕನ್ನಡ ಕಿರುತೆರೆಯ ಯಶಸ್ವಿ ನಟ. ರಾಮಾಚಾರಿ ಅಂತಾನೇ ಜನಪ್ರಿಯತೆ ಪಡೆದಿರುವ ರಿತ್ವಿಕ್ ಸದ್ಯ ಕಿಟ್ಟಿ ಪಾತ್ರವನ್ನೂ ಕೂಡ ನಿರ್ವಹಿಸುತ್ತಿದ್ದು, ಎಂತಹ ಪಾತ್ರಕ್ಕಾದರೂ ಈ ಕಲಾವಿದ ಸೈ ಎನ್ನುವ ಮಟ್ಟಿಗೆ ತಮ್ಮನ್ನು ತಾವು ನಿರೂಪಿಸಿಕೊಂಡಿದ್ದಾರೆ.
ಸದ್ಯ ಕನ್ನಡ ಕಿರುತೆರೆಯಲ್ಲಿ ಯಶಸ್ವಿನ ಮಾರ್ಗದಲ್ಲಿ ಸಾಗುತ್ತಿರುವ ರಿತ್ವಿಕ್ ಕೃಪಾಕರ್ ಇದೀಗ ಕಲಾವಿದನ ಬದುಕು ಹೇಗಿರುತ್ತದೆ ಎನ್ನುವುದರ ಬಗ್ಗೆ ಮಾತನಾಡುತ್ತಾ ಕಲಾವಿದರಿಗೆ ಹೆಣ್ಣು ಸಿಗುವುದಿಲ್ಲ ಎನ್ನುವ ಬೇಸರ ಹೊರಹಾಕಿದ್ದಾರೆ.

ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ಅದೊಂದು ಶಾಪ ಅಂತೆ. ದೇವರು ಕಲಾವಿದರಿಗೆ ನೀಡಿರುವ ಶಾಪ ಅಂತೆ ಅದು. ನೀನು ಎಲ್ಲರಿಗೂ ಕಾಣಿಸುತ್ತೀಯಾ, ನೀನು ಗ್ಲ್ಯಾಮರ್ ಆಗಿ ಬದುಕುತ್ತೀಯಾ. ಆದರೆ ನಿಜವಾದ ಜೀವದಲ್ಲಿ ಅದಿರುವುದಿಲ್ಲ ನಿನಗೆ. ಅದಕ್ಕೆ ಕಲಾವಿದರಿಗೆ ಹೆಣ್ಣು ಸಿಗುವುದಿಲ್ಲ. ಅದೊಂದು ಅನಿಶ್ಚಿತ ಜೀವನ ಇರುತ್ತದೆ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಅವರು, ಒಬ್ಬ ಕಲಾವಿದನ ಕೆಲಸ ನಿಶ್ಚಿತವಾಗಿ ಇರುವುದಿಲ್ಲ. ಹೀಗಾಗಿ ಅವನು ನಮ್ಮ ಮಗಳನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದು ಅವರ ಪೋಷಕರಲ್ಲಿ ಇರುತ್ತದೆ. ಇನ್ನು ಹುಡುಗಿಗೆ ಕೂಡ ಅವನು ನನ್ನನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದು ಇರುತ್ತದೆ. ಜೊತೆಗೆ ಧಾರಾವಾಹಿಯಲ್ಲಿ ಮದುವೆಯಾಗಿರುವುದನ್ನು ಗಂಭೀರವಾಗಿ ತೆಗೆದುಕೊಂಡು ನಿಮ್ಮ ಹೆಂಡತಿಯನ್ನು ಕರೆದುಕೊಂಡು ಬನ್ನಿ ಎನ್ನುತ್ತಾರೆ ಎನ್ನುವುದರ ಮೂಲಕ ಕಲಾವಿದರಿಗೆ ಯಾಕೆ ಹೆಣ್ಣು ಸಿಗುವುದಿಲ್ಲ ಎನ್ನುವುದನ್ನು ವಿವರಿಸಿದರು.

ಕೆಲವೊಂದು ಸ್ಟಾರ್ ನಟರು ಜನರಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾತನಾಡಿದ ಅವರು, ಅವರು ಜಾಸ್ತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೂ ಬಾರದು. ಯಾಕೆಂದರೆ ಪ್ರೇಕ್ಷಕರಿಗೆ ಈ ವ್ಯಕ್ತಿ ಎಂದರೆ ಹೀಗಿರುತ್ತಾರೆ ಎನ್ನುವ ಒಂದು ಕಲ್ಪನೆ ಇರುತ್ತದೆ. ನಾವು ನಮ್ಮ ಪಾತ್ರದ ಮೂಲಕವೇ ಆ ಕನಸನ್ನು ಸೃಷ್ಟಿ ಮಾಡಿರುತ್ತೇವೆ. ಹೀಗಾಗಿ ಆಚೆ ನಾವು ಬೇರೆ ರೀತಿ ಕಂಡಾಗ ಅವರಿಗೂ ಕೂಡ ಒಂದು ನಿರಾಸೆಯಾಗುತ್ತದೆ ಎನ್ನುವ ಕಾರಣಕ್ಕೆ ಜಾಸ್ತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎನ್ನುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಆದರೆ ಈಗ ಹೇಗೆ ಆಗಿದೆ ಅಂದರೆ ಸಾಮಾಜಿಕ ಜಾಲತಾಣ ಎಲ್ಲಾ ಬಂದು ನೋಡುವ ರೀತಿಯೇ ಬೇರೆಯಾಗಿದೆ. ನನ್ನ ಪ್ರಕಾರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಒಳ್ಳೆಯದು. ತಪ್ಪಲ್ಲಾ ಅದು. ಅಲ್ಲಿ ಹೀರೋ ಆದವನು ನಮ್ಮ ಮನೆಯ ಮುಂದೆ ತರಕಾರಿ ತೆಗೆದುಕೊಳ್ಳಲು ಬರುತ್ತಾನೆ ಎಷ್ಟು ಸಿಂಪಲ್ ಎಂದು ಜನ ಹೇಳುವುದು ಕಲಾವಿದನಿಗೆ ಪ್ಲಸ್ ಪಾಯಿಂಟ್. ಕೆಲವೊಂದು ಕಲಾವಿದರು ಹಾಗೆ ಬರಲು ಆಗುವುದಿಲ್ಲ. ಆ ಮಟ್ಟಕ್ಕೆ ಹೋದ ಮೇಲೆ ಹಾಗೆ ಇರಬೇಕಾಗುತ್ತದೆ ಆದರೆ ಈಗ ಜನರ ಜೊತೆ ಬೆರೆಯಬೇಕು ಎಂದು ಹೇಳಿದರು.












Click it and Unblock the Notifications