ರಾಖಿ ಸಾವಂತ್‌ಗೆ ಬೇಕಂತೆ ಶಾರುಖ್ ವೀರ್ಯ: ನಟಿಯ ಮಹದಾಸೆ ಏನು ಗೊತ್ತೆ?
ರಾಖಿ ಸಾವಂತ್ ಅಂದ್ರೆ ಒಂದಲ್ಲ ಒಂದು ರೀತಿಯ ಕಿರಿಕ್ ಗ್ಯಾರಂಟಿ, ಕಿರಿಕ್ ಇಲ್ಲ ಅಂದರೆ ಕಾಂಟ್ರವರ್ಸಿ ಮಾಡಿಕೊಳ್ಳೋದ್ರಲ್ಲಿ ರಾಖಿ ಸಾವಂತ್ ಫುಲ್ ಫೇಮಸ್. ಹೀಗೆ ಎಲ್ಲೆಲ್ಲೂ ಕಿರಿ ಕಿರಿ ಕಿರಿಕ್ ಮಾಡಿಕೊಳ್ಳುವ ರಾಖಿ ಸಾವಂತ್ ಕಣ್ಣು ಈಗ ಶಾರುಖ್ ಮೇಲೆ ಬಿದ್ದಿದೆ. ಅರೆರೆ ಯಾಕಪ್ಪಾ ರಾಖಿಗೆ ಶಾರುಖ್ ಸಹವಾಸ? ಅಂತಾ ಡೌಟ್ ಕಾಡ್ತಾ ಇತ್ತಾ, ಹಾಗಾದರೆ ನೀವು ಈ ಸ್ಟೋರಿ ಓದಲೇಬೇಕು.
ರಾಖಿ ಸಾವಂತ್ ತೆರೆ ಮೇಲೆ ಬಣ್ಣ ಹಚ್ಚಿಕೊಂಡು ಎಷ್ಟು ಮಿಂಚಿದ್ದರೋ, ಅಷ್ಟೇ ವಿವಾದ ಅವರ ವೈಯಕ್ತಿಕ ಬದುಕಿಗೆ ಅಂಟಿಕೊಂಡಿದೆ. ಅದ್ರಲ್ಲೂ ರಾಖಿ ವಿವಾಹ ಸಂಬಂಧ, ಇಡೀ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಹೀಗಿದ್ದಾಗ ಇದೀಗ ಮತ್ತೊಮ್ಮೆ ತಮ್ಮ ಮನದಾಳದ ಆಸೆ ಹೇಳಿಕೊಂಡಿದ್ದಾರೆ. ರಾಖಿಗೆ ಈಗ ಶಾರುಖ್ ವೀರ್ಯ ಬೇಕಂತೆ, ಅದು ಯಾಕೆ ಅಂದರೆ ಆ ವಿವರಣೆಯನ್ನ ಖುದ್ದು ರಾಖಿ ಸಾವಂತ್ ಅವರೇ ವಿವರಿಸಿದ್ದಾರೆ ನೀವೆ ಓದಿ.

ಶಾರುಖ್ ಖಾನ್ ವೀರ್ಯಕ್ಕೆ ಡಿಮ್ಯಾಂಡ್
ಅಷ್ಟಕ್ಕೂ ಕೆಲ ತಿಂಗಳ ಹಿಂದಷ್ಟೇ ಮೆಕ್ಕಾ ಮದೀನಾಕ್ಕೆ ತೆರಳಿ, ನಾನು ಇದೀಗ ಫಾತೀಮಾ ಆಗಿ ಬದಲಾಗಿದ್ದೀನಿ ಅಂತಾ ಹೇಳಿ ರಾಖಿ ಸಖತ್ ಸುದ್ದಿಯಲ್ಲಿದ್ರು. ಈ ಮಧ್ಯೆ ತಾವು ಮಕ್ಕಳನ್ನ ಮಾಡಿಕೊಳ್ಳುವ ಯೋಜನೆಯಲ್ಲಿರುವ ವಿಚಾರ ತಿಳಿಸಿದ್ದಾರೆ. ಇಷ್ಟೇ ಆಗಿದ್ದರೆ ನಾವು ಕೂಡ ಈಗ ರಾಖಿ ಸಾವಂತ್ (Rakhi Sawant) ಬಗ್ಗೆ ಮಾತನಾಡದೆ ಇರ್ತಿದ್ವೋ ಏನೋ. ಆದರೆ ಆಗಿದ್ದೇ ಬೇರೆ, ತಾನು ಮಕ್ಕಳನ್ನ ಮಾಡಿಕೊಳ್ಳಲು ಯಾರ ವೀರ್ಯ ಬೇಕು ಅನ್ನೋದನ್ನೂ ಹೇಳಿದ್ದಾರೆ. ಅದೂ ಶಾರುಖ್ ಖಾನ್ ವೀರ್ಯಕ್ಕೆ ಡಿಮ್ಯಾಂಡ್ ಇಟ್ಟಿದ್ದಾಳೆ ರಾಖಿ!
ಬಾಡಿಗೆ ತಾಯ್ತನ ಬೇಕಂತೆ
ಯೆಸ್, ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಕೊಳ್ಳುವ ಆಸೆ ಹೊರಹಾಕಿರುವ ರಾಖಿ ಈಗ ಸಂಚಲನ ಸೃಷ್ಟಿಸಿದ್ದಾರೆ. ಬಾಲಿವುಡ್‌ನಲ್ಲೀಗ ಬಾಡಿಗೆ ತಾಯ್ತನದಿಂದ ಮಕ್ಕಳ ಪಡೆದು ಸಾಕುವುದು ಟ್ರೆಂಡ್ ಆಗಿದೆ. ಈಗಾಗಲೇ ಬಿ-ಟೌನ್‌ನ ಸ್ಟಾರ್ ದಂಪತಿಗಳು ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆದ ಉದಾಹರಣೆ ಇದೆ. ಇದೇ ರೀತಿ ರಾಖಿ ಕೂಡ ತನ್ನ ಮನದಾಳ ಮತ್ತು ಭವಿಷ್ಯದ ಯೋಜನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನನಗೂ ಮಕ್ಕಳು ಅಂದ್ರೆ ಇಷ್ಟ ನಾನೂ ಮಕ್ಕಳು ಮಾಡಿಕೊಳ್ಳಬೇಕಿದೆ ಎಂದಿದ್ದಾಳೆ. ಇಷ್ಟಕ್ಕೆ ಮಾತು ಮುಗಿಸಿದ್ರೆ ಅದು ಎಷ್ಟೋ ಚೆನ್ನಾಗಿ ಇರ್ತಿತ್ತು. ಆದರೆ ತನಗೆ ಶಾರುಖ್ ವೀರ್ಯ ಬೇಕು ಎಂದಿರುವುದು ಈಗ ಹಲ್‌ಚಲ್ ಎಬ್ಬಿಸಿದೆ.

ಸಂದರ್ಶನದ ವೇಳೆ ರಾಖಿ ಉತ್ತರ!
ಖಾಸಗಿ ಸಂದರ್ಶನ ಒಂದರಲ್ಲಿ ರಾಖಿಗೆ ಪ್ರಶ್ನೆ ಎದುರಾಗಿತ್ತು ಆಗ ರಾಖಿಗೆ ಸಂದರ್ಶಕನಿಂದ ಮಕ್ಕಳ ವಿಚಾರವಾಗಿ ಪಶ್ನೆ ಕೇಳಿಬಂದಿತ್ತು. ಈ ಕುರಿತು ಉತ್ತರ ನೀಡುವ ಭರದಲ್ಲಿ, ರಾಖಿ ಹೀಗೆ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ರಾಖಿಯ ಉತ್ತರವು ವೈರಲ್ ಆಗುತ್ತಿದೆ ಜೊತೆಗೆ ವೆರೈಟಿ ಕಮೆಂಟ್ ಹೊಡಿತಾ ಇದ್ದಾರೆ ಶಾರುಖ್ ಖಾನ್ ಫ್ಯಾನ್ಸ್. ನಿಮ್ಮ ಮಗುವಿನ ತಂದೆಯ ಸ್ಥಾನಕ್ಕೆ ಯಾವ ಬಾಲಿವುಡ್ ಸ್ಟಾರ್ ಆಯ್ಕೆ ಮಾಡ್ತೀರಿ? ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರಂತೆ ರಾಖಿ.
ಪ್ರಶ್ನೆಗೆ ರಾಖಿ ಎಡವಟ್ಟು ಉತ್ತರ ನೀಡಿದ್ದಾರೆ. ಒಟ್ನಲ್ಲಿ ರಾಖಿ ಸಾವಂತ್ ಈ ಮಾತು ಬೇಕು ಅಂತ ಹೇಳಿದ್ರೋ ಅಥವಾ ಬೇಡ ಅಂತಾ ಹೇಳಿದ್ರೋ ಗೊತ್ತಿಲ್ಲ. ಆದರೆ ಇದೀಗ ಎಲ್ಲೆಲ್ಲೂ ಈ ಡೈಲಾಗ್ ವೈರಲ್ ಆಗ್ತಾ ಇರೋದು ಮಾತ್ರ ಸತ್ಯ, ಸೋಷಿಯಲ್ ಮೀಡಿಯಾ ಮಂದಿ ಕೂಡ ವೆರೈಟಿ ವೆರೈಟಿ ಕಮೆಂಟ್ ಹಾಕುತ್ತಿದ್ದಾರೆ. ಕೆಲವರು ರಾಖಿಯ ಪರ ನಿಂತ್ರೆ, ಇನ್ನೂ ಕೆಲ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಮಾತಿಗೆ ಬೇಸರ ಹೊರಹಾಕಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್












Click it and Unblock the Notifications