Valentine’s day 2024: ಪ್ರೇಮಿಗಳ ದಿನವನ್ನು ರೊಮ್ಯಾಂಟಿಕ್ ಮಾಡಲಿದೆ ಪಿವಿಆರ್ ಫಿಲ್ಮ್ ಫೆಸ್ಟಿವಲ್
ನವದೆಹಲಿ, ಫೆಬ್ರವರಿ.11: ಪ್ರೇಮಿಗಳ ವಾರ ಆರಂಭವಾಗಿದೆ. ಕೆಲವರಿಗೆ ಹೊರಗಡೆ ಹೋಗಿ ಸುತ್ತಾಡುವುದು ಇಷ್ಟವಾದರೆ, ಮತ್ತೆ ಕೆಲವರಿಗೆ ಮನೆಯಲ್ಲಿಯೇ ಕುಳಿತು ಒಟ್ಟಿಗೆ ಸಮಯ ಕಳೆಯುವುದು ಇಷ್ಟ. ಹೀಗೆ ಮನೆಯಲ್ಲಿಯೇ ಸಮಯ ಕಳೆಯಲು ಬಯಸುವ ಜೋಡಿಗಾಗಿಯೇ ಪಿವಿಆರ್ ಐನಾಕ್ಸ ಹೊಸ ಕೊಡುಗೆ ನೀಡಿದೆ.
ನೀವು ಮನೆಯಲ್ಲಿ ಕುಳಿತು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುತ್ತಾ ಕ್ಯಾಲಿಟಿ ಟೈಮ್ ಸ್ಪೆಂಡ್ ಮಾಡುವವರಿಗಾಗಿಯೇ ಪಿವಿಆರ್ ಐನಾಕ್ಸ ವ್ಯಾಲೆಂಟೈನ್ಸ್ ಫಿಲ್ಮ್ ಫೆಸ್ಟಿವಲ್ ಆಯೋಜಿಸಿದೆ. ಇದು ಸಿನಿಮಾ ಪ್ರಿಯ ಜೋಡಿಗಳಿಗೆ ತಮ್ಮ ವ್ಯಾಲೆಂಟೈನ್ಸ್ ಡೇ ಸೆಲ್ಬರೆಷನ್ ಅನ್ನು ಮತ್ತಷ್ಟು ಉತ್ತಮಗೊಳಿಸಲಿದೆ.

ಟೈಟಾನಿಕ್, ಜಬ್ ವಿ ಮೆಟ್, ಡಿಡಿಎಲ್‌ಜೆ, ಸ್ವಾತಿ ಮುತ್ತಿನ ಮಳೆ ಹನಿಯೇ, ಮತ್ತು ಪ್ಯಾರ್ ಕಾ ಪಂಚ್ನನಾಮಾದಂತಹ ಕ್ಲಾಸಿಕ್‌ಗಳನ್ನು ಒಳಗೊಂಡಂತೆ ಬ್ಲಾಕ್‌ಬಸ್ಟರ್ ರೊಮ್ಯಾಂಟಿಕ್ ಚಲನಚಿತ್ರಗಳನ್ನು ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿಸಲಿದೆ. ಈ ಫಿಲ್ಮ್ ಫೆಸ್ಟಿವಲ್ ಫೆಬ್ರವರಿ 9 ರಿಂದ 15, 2024 ರವರೆಗೆ ನಡೆಯಲಿದೆ.
Get ready to swoon all over again with the #ValentinesFilmFestival! PVR INOX is turning up the romance with a lineup of timeless love stories like DDLJ, Titanic, Jab We Met, and more, all on the big screen from February 9th to 15th.
— P V R C i n e m a s (@_PVRCinemas) February 8, 2024
So grab your popcorn, bring your sweetheart,… pic.twitter.com/12UcQ87lls
ಮುಂಬೈ, ದೆಹಲಿ, ಬೆಂಗಳೂರು ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ 194 ಚಿತ್ರಮಂದಿರಗಳಲ್ಲಿ ಮತ್ತು ಭಾರತದಾದ್ಯಂತ ಇತರ 62 ನಗರಗಳಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ. ಚಿತ್ರಮಂದಿಗಳಿಗೆ ಪ್ರೇಮಿಗಳನ್ನು ಸೆಳೆಯುವುದು, ಅವರಿಗೆ ಈ ರೋಮ್ಯಾಂಟಿಕ್ ಸಿನಿಮಾಗಳನ್ನು ತೋರಿಸುವುದು ಈ ಫಿಲ್ಮ್ ಫೆಸ್ಟಿವಲ್ ಉದ್ದೇಶವಾಗಿದೆ.

ಇನ್ನು, ಭರ್ಜರಿಯಾಗಿ ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ಟಿಕೆಟ್ ಬೆಲೆಯು ಕಡಿಮೆ. ಟಿಕೆಟ್‌ಗಳಿಗೆ ಕೇವಲ 112 ರೂಪಾಯಿಗಳಿದ್ದು, ಪ್ರೇಮಿಗಳು ತಮ್ಮ ದಿನವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸಬಹುದು. "ವ್ಯಾಲೆಂಟೈನ್ಸ್ ಫಿಲ್ಮ್ ಫೆಸ್ಟಿವಲ್ ಕೇವಲ ಚಲನಚಿತ್ರಗಳಲ್ಲ; ಇದು ಪ್ರೀತಿ ಮತ್ತು ಸಂತೋಷದ ಮರೆಯಲಾಗದ ಕ್ಷಣಗಳನ್ನು ಮತ್ತೆ ತೆರೆಯ ಮೇಲೆ ತರುವುದು" ಎಂದು ಪಿವಿಆರ್ ಐನಾಕ್ಸ್ ಸಹ ಸಿಇಒ ಗೌತಮ್ ದತ್ತಾ ಹೇಳಿದ್ದಾರೆ.
ಹಿಂದಿ, ಇಂಗ್ಲೀಷ್, ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳನ್ನು ಈ ಫಿಲ್ಮ್ ಫೆಸ್ಟಿವಲ್‌ನಲ್ಲಿ ನೋಡಬಹದು. PVR INOX ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮತ್ತು ಅಗ್ರಿಗೇಟರ್ ಅಪ್ಲಿಕೇಶನ್‌ಗಳ ಮೂಲಕ ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಪಿವಿಆರ್ ಐನಾಕ್ಸ್ ಲಿಮಿಟೆಡ್, ಭಾರತ ಮತ್ತು ಶ್ರೀಲಂಕಾದ 113 ನಗರಗಳಲ್ಲಿ 360 ಚಿತ್ರಮಂದಿರಗಳಲ್ಲಿ 1712 ಪರದೆಗಳನ್ನು ಹೊಂದಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications