Cinema Lovers Day: ₹99 ಕೊಟ್ಟು ಸಿನಿಮಾ ನೋಡಿ; ಈ ಅವಕಾಶ ಕಳೆದುಕೊಳ್ಳಬೇಡಿ

ಫೆಬ್ರವರಿ 23ರಂದು ದೇಶಾದ್ಯಂತ 'ಸಿನಿಮಾ ಪ್ರೇಮಿಗಳ ದಿನ' ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಪಿವಿಆರ್ ಐನಾಕ್ಸ್‌ ಸಿನಿಮಾ ಸೇರಿದಂತೆ ಹಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಸಿನಿಪ್ರಿಯರಿಗೆ ಭರ್ಜರಿ ಘೋಷಣೆ ಮಾಡಿದೆ. ನೀವು ಕೇವಲ 99 ರೂಗಳಲ್ಲಿ ನಿಮ್ಮ ನೆಚ್ಚಿನ ಚಲನಚಿತ್ರವನ್ನು ವೀಕ್ಷಿಸಬಹುದು.

'ಸಿನಿಮಾ ಪ್ರೇಮಿಗಳ ದಿನ'ದಂದು ಪಿವಿಆರ್ ಐನಾಕ್ಸ್ ಸಿನಿಮಾ ಸರಪಳಿಗಳಲ್ಲಿ ಈ ಶುಕ್ರವಾರ ಈ ಭರ್ಜರಿ ಆಫರ್ ಇರುತ್ತದೆ. ಒಂದು ಸರಳ ಪ್ರೇಮಕಥೆ, ಶಾಖಾಹಾರಿ, ಉಪಾಧ್ಯಕ್ಷ, ಮತ್ಸ್ಯಗಂಧ ಸೇರಿದಂತೆ ಅನೇಕ ಉತ್ತಮ ಕನ್ನಡ ಸಿನಿಮಾಗಳನ್ನು ನೀವು ದೊಡ್ಡ ಪರದೆಯಲ್ಲಿ ನೋಡಿ ಆನಂದಿಸಬಹುದು.

 PVR, INOX: Rs 99 Movie Tickets for Cinema Lovers Day, Feb 23

ಸಾಮಾನ್ಯ ಸೀಟ್‌ಗಳಿಗೆ 99 ರೂಪಾಯಿಗಳ ರಿಯಾಯಿತಿ ದರದ ಹೊರತಾಗಿ, ಪಿವಿಆರ್ ಮತ್ತು ಐನಾಕ್ಸ್‌ ಪ್ರೀಮಿಯಂ ಫಾರ್ಮ್ಯಾಟ್‌ಗಳಿಗೆ ಆಕರ್ಷಕ ಬೆಲೆಯನ್ನು ಪರಿಚಯಿಸಿದೆ. ರಿಕ್ಲೈನರ್ ಸೀಟ್‌ಗಳು ರೂ 199 ಕ್ಕೆ ಲಭ್ಯವಿರುತ್ತವೆ, ಐಮ್ಯಾಕ್ಸ್, 4DX, MX4D ಮತ್ತು ಗೋಲ್ಡನ್‌ ಕ್ಲಾಸ್‌ ಚಲನಚಿತ್ರಗಳನ್ನು ನೋಡಲು ಬಯಸುವವರು ಕೂಡ ರಿಯಾಯಿತಿ ಟಿಕೆಟ್ ದರ ಸಿಗಲಿದೆ.

ಸಿನಿಮಾ ಪ್ರೇಮಿಗಳಿಗೆ ಅರ್ಪಣೆ

ಪಿವಿಆರ್ ಐನಾಕ್ಸ್‌ ಲಿ. ನ ಸಹ-ಸಿಒಒ ಗೌತಮ್ ದತ್ತಾ ಮಾತನಾಡಿ, "ಚಲನಚಿತ್ರಗಳು ಭಾರತೀಯ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ, ಅಪ್ರತಿಮ ಉತ್ಸಾಹದಿಂದ ಆಚರಿಸಲಾಗುತ್ತದೆ. ನಾವು ಚಲನಚಿತ್ರ ಪ್ರೇಮಿಗಳ ದಿನವನ್ನು ನೆನಪಿಸಿಕೊಳ್ಳುವ ಮೂಲಕ ಈ 'ರಾಷ್ಟ್ರೀಯ ಸಿನಿಮಾ ದಿನ'ದ ಆಚರಣೆಯನ್ನು ಇನ್ನಷ್ಟು ವರ್ಧಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಕೈಗೆಟುಕುವ ಬೆಲೆಯಲ್ಲಿ ದೊಡ್ಡ ಪರದೆಯ ಮೇಲೆ ನೆಚ್ಚಿನ ಸಿನಿಮಾವನ್ನು ಆನಂದಿಸಲು ಈ ಅದ್ಭುತ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ!

ಸಿಂಪಲ್ ಸುನಿ ಟ್ವೀಟ್

ಫೆಬ್ರವರಿ 8 ರಂದು ಬಿಡುಗಡೆಯಾದ ವಿನಯ್ ರಾಜ್‌ಕುಮಾರ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಒಂದು ಸರಳ ಪ್ರೇಮಕಥೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಶುಕ್ರವಾರ ಸಿನಿಮಾ ಪ್ರೇಮಿಗಳು 99 ರೂಪಾಯಿ ನೀಡಿ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಸಿನಿಮಾ ಪ್ರೇಮಿಗಳ ದಿನದ ಪ್ರಯುಕ್ತ ಶುಕ್ರವಾರದ ಎಲ್ಲಾ ಶೋಗಳ ಟಿಕೆಟ್ ದರ ₹99 ವಿಧಿಸಲಾಇದೆ. ಎಲ್ಲರೂ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಿ ಹಾರೈಸಿ ಎಂದು ಮನವಿ ಮಾಡಿದ್ದಾರೆ.

ಪಿವಿಆರ್ ಐನಾಕ್ಸ್ ಮಾತ್ರವಲ್ಲದೆ ಗೋಪಾಲನ್ ಸಿನಿಮಾಸ್, ಸಿನಿಪೊಲಿಸ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕೂಡ ಟಿಕೆಟ್ ದರವನ್ನು 99 ರೂಪಾಯಿಗೆ ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+