Puttakkana Makkalu: ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಈಗ ಆತ್ಮದ ಕಾಟ!
Puttakkana Makkalu: ಕನ್ನಡದ ಪ್ರಮುಖ ಧಾರಾವಾಹಿಗಳಲ್ಲಿ ಒಂದಾಗಿರುವ ಪುಟ್ಟಕ್ಕನ ಮಕ್ಕಳು ಹೊಸ ತಿರುವು ಪಡೆದುಕೊಂಡಿದೆ. ಕೆಲವು ತಿಂಗಳುಗಳಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಹೊಸ ತಿರುವು ಪಡೆದುಕೊಂಡಿತ್ತು. ಹೊಸ ಪ್ರೇಮಕಥೆಯನ್ನು ಜನ ಮೆಚ್ಚಿಕೊಂಡಿದ್ದರು. ಆದರೆ, ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಹೊಸ ಟ್ವೀಸ್ಟ್ ಶುರುವಾಗಿದ್ದು ಈ ಸೀರಿಯಲ್‌ನಲ್ಲಿ ಈಗ ಆತ್ಮದ ಕಾಟ ಶುರುವಾಗಿದೆ.! ಹೌದು ಈ ಧಾರಾವಾಹಿಯು ಹೊಸ ತಿರುವು ಪಡೆದುಕೊಂಡು ಒಳ್ಳೊಳ್ಳೆ ಎಪಿಸೋಡ್‌ಗಳು ಪ್ರಸಾರವಾಗುತ್ತಿವೆ. ಈ ರೀತಿ ಇರುವಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀರಿಯಲ್‌ನಲ್ಲಿ...
ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಹ ಒಂದು. ಈ ಸೀರಿಯಲ್ ಈಗಾಗಲೇ ಸಾವಿರ ಎಸಿಸೋಡ್‌ಗಳ ಸಮೀಪಕ್ಕೆ ಬಂದಿದೆ. ಕೆಲವೊಂದು ಟ್ವಿಸ್ಟ್‌ಗಳನ್ನು ಜನ ಒಪ್ಪಿಕೊಂಡಿಲ್ಲ. ಈ ಧಾರಾವಾಹಿಯ ಮುಖ್ಯಪಾತ್ರಧಾರಿ ಸ್ನೇಹ ಬದಲಾದ ಮೇಲೆ ಇನ್ನಿಬ್ಬರು ಹೊಸ ನಟಿಯರು ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಸೀರಿಯಲ್‌ನಲ್ಲಿ ಸ್ನೇಹ ಪಾತ್ರವನ್ನು ಮಾಡುತ್ತಿದ್ದ ಸಂಜನಾ ಬುರ್ಲಿ ಅವರು ಬ್ರೇಕ್ ತೆಗೆದುಕೊಂಡ ಮೇಲೆ ಆ ಪಾತ್ರಕ್ಕೆ ಅಪೂರ್ವ ನಾಗರಾಜ್ ಅವರು ಆಯ್ಕೆಯಾಗಿದ್ದರು. ಆದರೆ ಅವರ ಪಾತ್ರಕ್ಕೆ ನಿರೀಕ್ಷಿತ ರೆಸ್ಪಾನ್ಸ್ ಜನರಿಂದ ಸಿಕ್ಕಿರಲಿಲ್ಲ.

ಇದೀಗ ಕೆಲವು ತಿಂಗಳುಗಳಿಂದ ಸ್ನೇಹ ಪಾತ್ರಕ್ಕೆ ವಿದ್ಯಾರಾಜ್ ಅವರು ಆಯ್ಕೆಯಾಗಿದ್ದು ಎಪಿಸೋಡ್‌ಗಳು ಉತ್ತಮವಾಗಿ ಮೂಡಿಬರುತ್ತಿವೆ. ಈ ರೀತಿ ಇರುವಾಗಲೇ ಕತೆಯಲ್ಲಿ ಟ್ವಿಸ್ಟ್ ಎದುರಾಗಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಈಗ ಆತ್ಮದ ಕಾಟ ಶುರುವಾಗಿದೆ. ಹೌದು ಇದು ಸೀರಿಯಲ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಸೀರಿಯಲ್‌ನ ಪಾತ್ರಧಾರಿ ಡಿಸಿ ಸ್ನೇಹ ಆತ್ಮ ಕಾಣಿಸಿಕೊಳ್ಳುತ್ತಿದೆ ಎನ್ನುವಂತೆ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಪ್ರೋಮೋ ಬಿಡುಗಡೆ ಮಾಡಲಾಗಿದ್ದು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೇ ದಿನಗಳ ಹಿಂದಷ್ಟೇ ಮುಕ್ತಾಯವಾದ ಸೀತಾರಾಮ ಸೀರಿಯಲ್‌ನಲ್ಲೂ ಇದೇ ರೀತಿ ಆತ್ಮದ ಕಥೆ ಬಂದಿತ್ತು. ಮೊದ ಮೊದಲು ಜನ ಇದನ್ನು ಇಷ್ಟಪಟ್ಟಿರಲಿಲ್ಲ. ಆ ಮೇಲೆ ಕೇಡಿಗಳ ಮೇಲೆ ರಿವೇಂಜ್ ತೆಗೆದುಕೊಳ್ಳುವುದಕ್ಕೆ ಮನಸೋತಿದ್ದರು. ಅದೇ ರೀತಿ ಪುಟ್ಟಕ್ಕನ ಮಕ್ಕಳು ಕಥೆಯಲ್ಲೂ ಟ್ವೀಸ್ಟ್ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಟ್ವಿಸ್ಟ್‌ಗೆ ಪ್ರೇಕ್ಷಕರಿಂದ ನಿರೀಕ್ಷಿತ ಬೆಂಬಲವೇನೂ ಸಿಕ್ಕಿಲ್ಲ!
ಪ್ರೋಮೋದಲ್ಲಿ ಏನಿದೆ: ಡಿಸಿ ಸ್ನೇಹ ಆತ್ಮ ಕಾಣಿಸಿಕೊಂಡಿರುವಂತೆ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಮುಖ್ಯ ಪಾತ್ರಧಾರಿ ನಟಿ ಸ್ನೇಹ ಅವರ ಸಮಾಧಿಗೆ ಪೂಜೆ ಮಾಡಿ ಎಲ್ಲ ಸಮಸ್ಯೆಗೂ ಪರಿಹಾರ ಕೊಡಿ ಅಕ್ಕ ಕೇಳುತ್ತಿರುವಂತೆಯೂ ಇದಾದ ಮೇಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ನೇಹ ಅವರ ಆತ್ಮ ಕಾಣಿಸಿಕೊಂಡಿರುವಂತೆಯೂ ಸೀರಿಯಲ್ ಪ್ರೋಮೋದಲ್ಲಿ ತೋರಿಸಲಾಗಿದೆ. ಆದರೆ, ಈ ಬದಲಾವಣೆಯನ್ನು ಜನ ಮೆಚ್ಚಿಕೊಂಡಂತೆ ಕಾಣಿಸುತ್ತಿಲ್ಲ.












Click it and Unblock the Notifications