Serial TRP List: ಟಿಆರ್‌ಪಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಧಾರಾವಾಹಿ ಯಾವುದು? ಇಲ್ಲಿದೆ ವಿವರ

ಮನೋರಂಜನಾ ಕ್ಷೇತ್ರದಲ್ಲಿ ಕಿರುತೆರೆ ಅತಿದೊಡ್ಡ ವೇದಿಕೆ. ಇಲ್ಲಿ ರಿಯಾಲಿಟಿ ಶೋ ಹಾಗೂ ಧಾರವಾಹಿಗಳದ್ದೇ ಕಾರುಬಾರು. ಅದರಲ್ಲೂ ಪ್ರತಿ ದಿನ ಪ್ರಸಾರವಾಗುವ ಧಾರವಾಹಿಗಳದ್ದೇ ಕಿರುತೆರೆಯಲ್ಲಿ ಮೇಲು ಗೈ. ವೀಕ್ಷಕರು ತಮ್ಮ ದಿನ ನಿತ್ಯದ ಜೀವನದಲ್ಲಿ ಊಟ-ತಿಂಡಿಯಾದರೂ ಮಿಸ್‌ ಮಾಡಿಕೊಳ್ಳಬಹುದು ಆದರೆ ತಮ್ಮ ಮೆಚ್ಚಿನ ಧಾರವಾಹಿಯನ್ನಲ್ಲಾ ಎನ್ನುವ ಮಾತಿದೆ. ಅಷ್ಟರ ಮಟ್ಟಿಗೆ ಕೆಲವರ ಜೀವನದಲ್ಲಿ ಧಾರವಾಹಿಗಳು ಹಾಸು ಹೊಕ್ಕಿರುತ್ತದೆ.

ಮಧ್ಯಾಹ್ನ ಹಾಗೂ ಸಂಜೆ, ರಾತ್ರಿ ಪ್ರಸಾರವಾಗುವ ಧಾರಾವಾಹಿ ವೀಕ್ಷಿಸಲು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಧಾರಾವಾಹಿ ವೀಕ್ಷಕರ ಬಳಗಕ್ಕೆ ವಯಸ್ಸಿನ ಮಿತಿ ಇಲ್ಲ. ದೊಡ್ಡವರಿಂದ ಚಿಕ್ಕವರ ತನಕ ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ. ಇಂತಹ ಧಾರವಾಹಿಗಳ ಗುಣಮಟ್ಟ ಅಥವಾ ಜನಪ್ರಿಯತೆಯನ್ನು ಅಳೆಯುವ ಮಾಪನವೇ ಟಿಆರ್‌ಪಿ.

ಈ ವಾರ ಐಪಿಎಲ್‌ ಅಬ್ಬರದ ನಡುವೆಯೂ ಕನ್ನಡದ ಕಿರುತೆರೆಯ ಧಾರವಾಹಿಗಳು ಅತಿಹೆಚ್ಚು ವೀಕ್ಷಣೆ ಕಂಡಿದೆ. ಟಿಆರ್‌ಪಿಯ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದಿರುವ ಧಾರಾವಾಹಿಗಳ ವಿವರ ಇಲ್ಲಿದೆ.

Puttakkana Makkalu Serial Got First Place In Kannada Serial 17th Week TRP List

1. ಪುಟ್ಟಕ್ಕನ ಮಕ್ಕಳು

ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 17ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಸತತ ಎರಡುವಾರಗಳ ಕಾಲ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನ ಕಾಪಾಡಿಕೊಂಡಿದೆ. ಒಬ್ಬ ತಾಯಿ ಹಾಗೂ ಮೂವರು ಹೆಣ್ಣು ಮಕ್ಕಳ ಬದುಕಿನ ಕಥಾ ಹಂದರವಿರುವ ಪುಟ್ಟಕ್ಕನ ಮಕ್ಕಳು ವೀಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ, ಹಿರಿಯ ನಟ ರಮೇಶ್‌ ಪಂಡಿತ್‌, ಸಂಜನಾ ಬುರ್ಲಿ, ಧನುಷ್ ಎನ್​ಎಸ್ ಮೊದಲಾದವರು ನಟಿಸುತ್ತಿದ್ದಾರೆ.

Puttakkana Makkalu Serial Got First Place In Kannada Serial 17th Week TRP List

2. ಲಕ್ಷ್ಮೀ ನಿವಾಸ

ಇತ್ತೀಚೆಗೆ ಪ್ರಸಾರ ಕಂಡ ಲಕ್ಷ್ಮೀ ನಿವಾಸ ಧಾರಾವಾಹಿ ಟಿಆರ್‌ಪಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದ ಮೊದಲು ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ಈ ವಾರ ಕೆಲವೇ ಕೆಲವು ಪಾಯಿಂಟ್‌ ಅಂತರದಲ್ಲಿ ಎರಡನೇ ಸ್ಥಾನದದಲ್ಲಿದೆ. ಒಂದು ಕೂಡ ಕುಟುಂಬದವರ ಕನಸಿನ ಬಗ್ಗೆ ಕಥಾಹಂದರ ಹೊಂದಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸದ್ಯ ಜಾಹ್ನವಿ-ಜಯಂತ್‌ ಜೋಡಿಯ ಸ್ಟೋರಿಯೇ ಹೈಲೆಟ್‌.

Puttakkana Makkalu Serial Got First Place In Kannada Serial 17th Week TRP List

3. ಸೀತಾ ರಾಮ

17ನೇ ವಾರದ ಟಿಆರ್​ಪಿ ಪಟ್ಟಿಯಲ್ಲಿ ಸೀತಾ ರಾಮ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಸೊಗಸಾದ ಹಾಡು, ವಿಭಿನ್ನವಾದ ಕಥೆಯಿಂದ ಜನರ ಮನಸ್ಸು ಗೆದ್ದಿರುವ ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಎನ್ನುವ ಪುಟಾಣಿಯ ಪಾತ್ರವೇ ಹೈಲೆಟ್‌. ದಿನದಿಂದ ದಿನಕ್ಕೆ ಸೀತಾ ರಾಮ ಧಾರಾವಾಹಿ ಕಥೆ ಇಂಟ್ರಸ್ಟಿಂಗ್‌ ಆಗುತ್ತಿದ್ದು, ವೀಕ್ಷಕರು ಕೂಡ ಕುತೂಹಲದಿಂದ ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ವೈಷ್ಣವಿ ಗೌಡ, ಗಗನ್ ಚಿನ್ನಪ್ಪ, ರೀತು ಸಿಂಗ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Puttakkana Makkalu Serial Got First Place In Kannada Serial 17th Week TRP List

4. ಶ್ರಾವಣಿ ಸುಬ್ರಮಣ್ಯ

ಇತ್ತೀಚೆಗೆ ಪ್ರಸಾರ ಆರಂಭಿಸಿದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಟಿಆರ್​ಪಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಿನಿಸ್ಟರ್‌ ಮಗಳು ಶ್ರಾವಣಿಯ ತರಲೆ, ಮಿನಿಸ್ಟರ್‌ ಬಲಗೈ ಬಂಟ ಸುಬ್ರಮಣ್ಯನ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಕಥೆಯೂ ಕೂಡ ಇಂಟ್ರಸ್ಟಿಂಗ್‌ ಆಗಿದ್ದು, ತಂದೆ-ಮಗಳನ್ನು ದ್ವೇಷಿಸಲು ಕಾರಣವೇನು..? ಎನ್ನುವುದರ ಬಗ್ಗೆ ನೋಡುಗರಿಗೆ ಕುತೂಹಲವಿದೆ.

Puttakkana Makkalu Serial Got First Place In Kannada Serial 17th Week TRP List

5. ರಾಮಾಚಾರಿ

ವಿಭಿನ್ನವಾದ ಕಥೆಯಿಂದ ಆರಂಭವಾದ ರಾಮಾಚಾರಿ ಧಾರಾವಾಹಿ ಇದೀಗ ಬೇರೆ ತಿರುವನ್ನು ಪಡೆದುಕೊಂಡಿದೆ. ಜನ ಮೆಚ್ಚಿದ ಮಗ ರಾಮಚಾರಿಗೆ ಒಬ್ಬ ತಮ್ಮನಿರುವ ವಿಚಾರ ಕೂಡ ಎಲ್ಲಿರಿಗೂ ಗೊತ್ತಾಗಿದ್ದು, ತಮ್ಮ ಶತ್ರುಗಳಿಗೆ ಅಣ್ಣ-ತಮ್ಮ ಹಾಗೂ ಚಾರು ಸೇರಿ ಯಾವ ರೀತಿಯ ಪಾಠ ಕಲಿಸುತ್ತಾರೆ ಎನ್ನುವುದನ್ನು ಕಾರಣ ಪ್ರೇಕ್ಷಕರು ಕಾತುರರಾಗಿದ್ದಾರೆ. ಅಂದಹಾಗೆ ಟಿಆರ್​ಪಿ ಪಟ್ಟಿಯಲ್ಲಿ ರಾಮಾಚಾರಿ ಐದನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+