Puneeth Rajkumar: ಈ ಕಾರಣಕ್ಕೆ ಫ್ಯಾನ್ಸ್ ತರೋ ಫುಡ್ ಟೇಸ್ಟ್ ಮಾಡ್ತಿದ್ರು ಅಪ್ಪು
ಇಂದು ನಟ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ. ಅಪ್ಪು ಅಭಿಮಾನಿಗಳಿಗೆ ಇದು ಮರೆಯಲಾರದ ದಿನ. ಅಪ್ಪು ಅಗಲಿ ನಾಲ್ಕು ವರ್ಷಗಳೇ ಕಳೆದರೂ ಅಭಿಮಾನಿಗಳ ಆರಾಧ್ಯ ದೈವವಾಗಿ ಇಂದಿಗೂ ಹೃದಯದಲ್ಲಿ ನೆಲೆಸಿದ್ದಾರೆ. ಇಂದಿಗೂ ಎಲ್ಲೆಡೆ ನಗುವಿನ ಒಡೆಯನಾಗಿ ರಾರಾಜಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಅಭಿಮಾನಿಗಳನ್ನು ಸಂಪಾದಿಸಿದ್ದರು ದೊಡ್ಮನೆಯ ಕುಡಿ. ಅಭಿಮಾನಿಗಳು ಎಲ್ಲೇ ಸಿಕ್ಕರೂ ನಗುತ್ತಾ ಅವರೊಂದಿಗೆ ಮಾತನಾಡುತ್ತಿದ್ದರು. ಸೆಲ್ಫಿಗಳಿಗೆ ಸ್ಮೈಲ್ ಮಾಡುತ್ತಿದ್ದರು. ಪುನೀತ್ ಅವರಿಗೆ ಟೇಸ್ಟೀ ಫುಡ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಇದೇ ಕಾರಣಕ್ಕೆ ಫ್ಯಾನ್ಸ್ ಕೂಡ ತರಹೇವಾರಿ ಆಹಾರಗಳನ್ನು ತಯಾರಿಸಿ ಅವರಿಗಾಗಿ ತರುತ್ತಿದ್ರು. ಆಗ ಅಪ್ಪು ಏನ್ ಮಾಡ್ತಿದ್ರು ಗೊತ್ತಾ?
ಈ ಬಗ್ಗೆ ಸಂದರ್ಶನವೊಂದರಲ್ಲಿ ನಟ ಅಪ್ಪು ಅವರೇ ಹೇಳಿಕೊಂಡಿದ್ದರು. 'ನಾನ್ ವೆಜ್ ಅಂದ್ರೆ ನನಗೆ ತುಂಬಾ ಇಷ್ಟ. ಕೋಳಿ ಸಾರು, ಮಟನ್ ಅಂದ್ರೆ ತುಂಬಾ ಇಷ್ಟ ಎಂದಿದ್ದರು. ನನಗೆ ಫುಡ್ ವಿಚಾರದಲ್ಲಿ ಅದೇ ಇದೇ ಅಂತ ಇರಲಿಲ್ಲ. ಯಾವ ಜಾಗಕ್ಕೆ ಹೋದರೂ ಅಲ್ಲಿನ ಆಹಾರ ಇಷ್ಟ. ವರ್ಷದಲ್ಲಿ ಬ್ರೇಕ್ ಸಿಕ್ಕಾಗಲೆಲ್ಲ ಫಾರಿನ್ ಟ್ರಿಪ್ ಹೋಗ್ತೀನಿ, ಅಲ್ಲಿಯೂ ಭಾರತೀಯ ಶೈಲಿಯ ಆಹಾರವನ್ನೇ ಹೆಚ್ಚಾಗಿ ತಿನ್ನುತ್ತೇನೆ. ಒಂದು ವೇಳೆ ಅದು ಸಿಗಲಿಲ್ಲ ಅಂದಾಗ ಚೈನೀಸ್ ಫುಡ್ ತಿಂತಿದ್ದೆ. ಅಭಿಮಾನಿಗಳು ತರುತ್ತಿದ್ದ ಫುಡ್ ಹಿಂದೆ ಮುಂದೆ ಯೋಚನೆ ಮಾಡದೆ ಟೇಸ್ಟ್ ಮಾಡುತ್ತೇನೆ' ಎಂದಿದ್ದರು.

'ಅಪ್ಪಾಜಿ ಟೈಮಲ್ಲಿ ಸೋಷಿಯಲ್ ಮೀಡಿಯಾ ಇದ್ದಿದ್ರೆ..'
'ಸಿನಿಮಾ ಈಗ ಎಲ್ಲರೂ ನೋಡುವುದರಿಂದ ಜನ ನಾವು ಎಲ್ಲೇ ಹೋದರೂ ಗುರುತಿಸುತ್ತಾರೆ. ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನದವರು ಕೂಡ ತುಂಬಾ ಎಲ್ಲಾದ್ರೂ ಸಿಕ್ಕಾಗ ಮಾತನಾಡಿಸ್ತಾರೆ. ಇದಕ್ಕೆಲ್ಲ ಇವತ್ತಿನ ಟೆಕ್ನಾಲಜಿಗೆ ಥ್ಯಾಂಕ್ಸ್ ಹೇಳಬೇಕು. ಅಪ್ಪಾಜಿ ಸಿನಿಮಾ ಮಾಡುವಾಗ ಸೋಷಿಯಲ್ ಮೀಡಿಯಾ ಇದ್ದಿದ್ರೆ ಏನೆಲ್ಲ ಆಗಿರೋದು? ಅವರು ಇಲ್ಲದಿದ್ದಾಗಲೇ ಅವರ ಬಗ್ಗೆ ಇಷ್ಟೆಲ್ಲ ಚರ್ಚೆಗಳಾಗ್ತಿವೆ' ಎಂದಿದ್ದರು.
'ತಮ್ಮ ಬಾಲ್ಯದ ಬಗ್ಗೆ ಅಚ್ಚರಿ ವಿಚಾರಗಳನ್ನು ಹೇಳಿಕೊಂಡಿದ್ದ ಅಪ್ಪು, ಬಾಲ್ಯದಲ್ಲಿ ನಾವು ಯಾವ ಊರಿನಲ್ಲಿರ್ತೀವಿ ಅನ್ನೋದು ಗೊತ್ತಾಗುತ್ತಿರಲಿಲ್ಲ. ಆಗ ಹೆಚ್ಚಾಗಿ ಚೆನ್ನೈನಲ್ಲಿ ಇದ್ವಿ. ಆಗ ಅಪ್ಪಾಜಿ ಜೊತೆ ಶೂಟಿಂಗ್‌ಗೆ ಹೋಗ್ತಿದ್ದೆ. ಚಿಕ್ಕ ವಯಸ್ಸಲ್ಲೇ ನಾನು ಅಮಿತಾಬ್ ಬಚ್ಚನ್ ಫ್ಯಾನ್. ಮನೆಗೆ ಬಂದಾಗ ನನ್ನ ಎತ್ತಿಕೊಂಡಿದ್ರು. ಆಗ ಅವರನ್ನು ಬಿಟ್ರೆ ಹಿಂದಿಲಿ ಬೇರೆ ಯಾರೂ ಇಷ್ಟ ಆಗುತ್ತಿರಲಿಲ್ಲ. ಯಾರಾದರೂ ಬೇರೆಯವರ ಬಗ್ಗೆ ಮಾತನಾಡಿದ್ರೆ ಸಿಕ್ಕಾಪಟ್ಟೆ ಕೋಪ ಬರ್ತಿತ್ತು. ಅವರು ಬೆನ್ಜ್ ಕಾರಲ್ಲಿ ಚೆನ್ನೈನಲ್ಲಿ ರೌಂಡ್ ಕರ್ಕೊಂಡು ಹೋಗಿದ್ರು. ಅವರನ್ನು ಯಾವಾಗ ನೋಡಿದ್ರೂ ಮೈಯೆಲ್ಲ ರೋಮಾಂಚನವಾಗುತ್ತೆ' ಎಂದು ನೆನೆದಿದ್ದರು.












Click it and Unblock the Notifications