Priyanka Chopra: ವರ್ಜಿನಿಟಿ ಒಂದು ದಿನದ ಮ್ಯಾಟರ್, ಟ್ವೀಟ್ ವೈರಲ್!
ವರ್ಜಿನಿಟಿ ಅನ್ನೋದು ಒಂದು ದಿನದ ಮ್ಯಾಟರ್ ಅಂತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಹೇಳಿರುವ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಬಾಲಿವುಡ್‌ನಲ್ಲಿ ಬಿಗ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಪ್ರಿಯಾಂಕಾ. ಟಾಲಿವುಡ್, ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲೂ ಮಿಂಚಿದ್ದಾರೆ. 2000ರಲ್ಲಿ ವಿಶ್ವ ಸುಂದರಿ ಪಟ್ಟಕ್ಕೇರಿದ ಮೇಲೆ ಪ್ರಿಯಾಂಕ ತಿರುಗು ನೋಡಿದ್ದೇ ಇಲ್ಲ. ಹಾಲಿವುಡ್ ಸ್ಟಾರ್ ನಿಕ್ ಜೋನಸ್ ಅವರನ್ನು ವಿವಾಹವಾಗಿದ್ದಾರೆ. ಜಾಲಿ ಜಾಲಿ.. ಅಂತ ಫ್ಯಾಮಿಲಿಯೊಂದಿಗೆ ಟೈಮ್ ಕಳಿತಿದ್ದಾರೆ. ಈ ರೀತಿ ಇರುವಾಗಲೇ ಅವರು ವರ್ಜಿನಿಟಿ (ಕನ್ಯತ್ವ)ಯ ಬಗ್ಗೆ ಮಾತನಾಡಿರುವುದು ಸಿಕ್ಕಾಪಟ್ಟೆ ಟ್ರೋಲ್‌ಗೆ ಕಾರಣವಾಗ್ತಿದೆ.
ಬಾಲಿವುಡ್ ಹಾಗೂ ಹಾಲಿವುಡ್ ಸ್ಟಾರ್‌ಗಳು ಸೆ* ಹಾಗೂ ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು. ಆ ವಿಡಿಯೋ ಹಾಗೂ ಹೇಳಿಕೆಗಳು ವೈರಲ್ ಆಗುವುದು ತುಂಬಾ ಸಲ ನಡೆದಿದೆ. ಈಗ ಪ್ರಿಯಾಂಕಾ ಚೋಪ್ರಾ ಅವರು ಇದೇ ತರದ ಒಂದು ವಿಷಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್‌ನಲ್ಲಿ ಇದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಟ್ವೀಟ್‌ಗೆ ಪರ - ವಿರೋಧ ಚರ್ಚೆಗಳು ಶುರುವಾಗಿದೆ. ಇನ್ನು ಪ್ರಿಯಾಂಕಾ ನೇರ ಮಾತುಗಳಿಂದಲೇ ಫೇಮಸ್. ವೈಯಕ್ತಿ ವಿಷಯಗಳನ್ನು ಅವರು ಮಾಧ್ಯಮಗಳ ಮುಂದೆ ಬಂದು ಹಂಚಿಕೊಂಡಿದ್ದು ಕಡಿಮೆನೇ. ಆದರೆ, ಟ್ವಿಟ್ಟರ್‌ನಲ್ಲಿ ಅವರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಮದುವೆಯಾಗುವಾಗ ಹುಡುಗಿಯಲ್ಲಿ ಕನ್ಯತ್ವವನ್ನು (Don't look for a virgin as a wife) ನೋಡಬೇಡಿ ಎನ್ನುವ ಸಾಲುಗಳೊಂದಿಗೆ ಪ್ರಾರಂಭಿಸಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದುವರಿದು ಪ್ರಿಯಾಂಕಾ ಚೋಪ್ರಾ ಅವರು, ಒಳ್ಳೆಯ ನಡತೆ ಇರುವ ಮಹಿಳೆಯನ್ನು ಹುಡುಕಿ. ಕನ್ಯತ್ವ ಎನ್ನುವುದು ಕೇವಲ ಒಂದೇ ರಾತ್ರಿಯಲ್ಲಿ ಕಳೆದುಹೋಗುತ್ತದೆ. ಆದರೆ, ನಡವಳಿಕೆ ಹಾಗೂ ಒಳ್ಳೆಯ ತನ ಶಾಶ್ವತವಾಗಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಈ ಟ್ವೀಟ್‌ಗೆ ಪರ - ವಿರೋಧ ಶುರುವಾಗಿದೆ. ಇನ್ನು ಪ್ರಿಯಾಂಕಾ ಚೋಪ್ರಾ ಮಾಡಿರುವ ಈ ಟ್ವೀಟ್ ಅಥವಾ ಹೇಳಿಕೆ ಹಳೆಯದು ಎನ್ನಲಾಗಿದೆ. ಆದರೆ, ಅದಕ್ಕೆ ರಿಪ್ಲೈಗಳು ಬರುತ್ತಿರುವುದರಿಂದ ಇದು ಮತ್ತೆ ಚರ್ಚೆಯಾಗಿದ್ದು, ಪ್ರಿಯಾಂಕಾ ಅವರು ವಿಮರ್ಶೆಗೆ ಒಳಪಡುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಹೇಳಿಕೆ ಈಗ ಚರ್ಚೆ ಆಗುತ್ತಿರುವುದೇಕೆ ?
ಕನ್ಯತ್ವದ ಬಗ್ಗೆ ಪ್ರಿಯಾಂಕಾ ಚೋಪ್ರಾ ಅವರು ಹೇಳಿರುವ ಮಾತು ಈಗ ಚರ್ಚೆಯಾಗುತ್ತಿರುವುದಕ್ಕೆ ಮುಖ್ಯ ಕಾರಣ ಪ್ರಿಯಾಂಕಾ ಅವರ ಟ್ವೀಟ್‌ಗೆ ವ್ಯಕ್ತಿಯೊಬ್ಬರು ರಿಪ್ಲೈ ಮಾಡುವ ಮೂಲಕ. ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ವ್ಯಕ್ತಿಯು ಪ್ರಿಯಾಂಕಾ, "ಕನ್ಯತ್ವ ಇರುವವರನ್ನು ಹೆಂಡತಿಯಾಗಿ ಹುಡುಕಬೇಡಿ. ಉತ್ತಮ ನಡತೆ ಇರುವ ಮಹಿಳೆಯನ್ನು ಹುಡುಕಿ. ಕನ್ಯತ್ವ ಒಂದೇ ರಾತ್ರಿಯಲ್ಲಿ ಕಳೆದುಹೋಗುತ್ತದೆ. ಉತ್ತಮ ನಡತೆ ಶಾಶತ್ವವಾಗಿ ಉಳಿಯುತ್ತೆ" ಎಂದಿದ್ದರು.
ಇದನ್ನು ರೀಟ್ವೀಟ್ ಮಾಡಿರುವ ವ್ಯಕ್ತಿಯು "ಪುರುಷರ ಆದಾಯ ಅಥವಾ ಹಣವನ್ನು ಹುಡುಕಬೇಡಿ. ನಡವಳಿಕೆ ಹಾಗೂ ವ್ಯಕ್ತಿತ್ವ ನೋಡಿ. ಹಣ ಸಹ ಒಂದು ದಿನ ಕಳೆದುಹೋಗುತ್ತೆ. ಆದರೆ, ನಡವಳಿಕೆ ಜೀವಮಾನ ಪೂರ್ತಿ" ಇರುತ್ತೆ ಎಂದಿದ್ದಾನೆ. ಈ ಕಮೆಂಟ್‌ಗೆ ಹಲವು ಜನ ಪುರುಷರು ಮೆಚ್ಚುಗೆ ಸೂಚಿಸಿದ್ದಾರೆ. ಸರಿಯಾಗಿ ಹೇಳಿದ್ರಿ, ಮಹಿಳೆಯರು ನೋಡುವುದೇ ದುಡ್ಡನ್ನ ಅಂತ ಕಮೆಂಟ್ ಮಾಡಿದ್ದಾರೆ.












Click it and Unblock the Notifications