ಉಪೇಂದ್ರ ನನ್ನ ಬೆಸ್ಟ್ ಡೈರೆಕ್ಟರ್ ಎಂದ ಪ್ರಶಾಂತ್ ನೀಲ್!
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಮಾಡ್ತಾರೆ ಅಂದ್ರೆ ಅಭಿಮಾನಿಗಳಿಗೆ ಮಾತ್ರವಲ್ಲ, ಆ ಸಿನಿಮಾ ಬಗ್ಗೆ ಸಿನಿ ರಂಗದ ಸ್ಟಾರ್ ನಿರ್ದೇಶಕರಿಗೂ ಕ್ರೇಜ್ ಇರುತ್ತೆ. ಹೀಗೆಯೇ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೂ ಉಪ್ಪಿ ಕಂಡರೆ ತುಂಬಾ ಇಷ್ಟವಂತೆ. ಹಾಗಾದರೆ, ಈ ಬಗ್ಗೆ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು? ಸೂಪರ್ ಸ್ಟಾರ್ ಉಪೇಂದ್ರಗೆ ನೀಲ್ ಕೊಟ್ಟ ಬಿರುದು ಏನು?
ರಿಯಲ್ ಸ್ಟಾರ್ & ಸೂಪರ್ ಸ್ಟಾರ್ ಉಪೇಂದ್ರ ಅವರು ಏನೇ ಮಾಡಿದ್ರೂ ತುಂಬಾ ಡಿಫರೆಂಟ್. ಹೀಗಾಗಿ ಉಪ್ಪಿ ಅವರಿಗೆ ಸಿಕ್ಕಾಪಟ್ಟೆ ದೊಡ್ಡ ಫ್ಯಾನ್ಸ್ ಇದ್ದು, ಕರ್ನಾಟಕ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿ ಬಳಗ ಇದೆ. ಹೀಗೆ ಉಪೇಂದ್ರ ಅವರ ಹವಾ ಜೋರಾಗಿರುವ ಸಮಯದಲ್ಲೇ, ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಉಪೇಂದ್ರ ಅವರ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ನೀಲ್ ಹೇಳಿದ್ದೇನು? ಉಪ್ಪಿ ಅಭಿಮಾನಿಗಳು ಈಗ ಖುಷ್ ಆಗಿದ್ದೇಕೆ? ಮುಂದೆ ಓದಿ.

ಕನ್ನಡ ನಾಡಿನ ಪ್ರತಿಭೆ ಉಪ್ಪಿ
ಉಪ್ಪಿ ಅಲಿಯಾಸ್ ಉಪೇಂದ್ರ ಅಲಿಯಾಸ್ ರಿಯಲ್ ಸ್ಟಾರ್ ಹೀಗೆ ಕರ್ನಾಟಕ ಪ್ರತಿಭೆ ಉಪೇಂದ್ರ ಅವರು ಇಡೀ ದೇಶಾದ್ಯಂತ ಹವಾ ಇಟ್ಟಿದ್ದಾರೆ. ಉಪ್ಪಿ ಏನನ್ನೇ ಮಾಡಿದರೂ, ಫುಲ್ ವೈರಲ್ ಆಗುತ್ತೆ. ಉಪೇಂದ್ರ ಅವರ ಕ್ರೇಜ್ ದೇಶದ ಮೂಲೆ ಮೂಲೆಯಲ್ಲೂ ಹಬ್ಬಿ ಹೋಗಿದೆ. ಸಿನಿಮಾ ಕ್ಷೇತ್ರದಲ್ಲಿ ಉಪೇಂದ್ರ ಅವರ ಹೆಸರು ರಾರಾಜಿಸುತ್ತಿದೆ. ಇಂತಿಪ್ಪ ಉಪ್ಪಿ ಅವರ ಬಗ್ಗೆ ಈಗ ಮಾತನಾಡಿರುವ ಪ್ರಶಾಂತ್ ನೀಲ್ ಅವರು, ನಾನು ಉಪೇಂದ್ರ ಅವರ ಫ್ಯಾನ್ ಎಂದಿದ್ದು ವೈರಲ್ ಆಗುತ್ತಿದೆ.
ಪ್ರಶಾಂತ್ ನೀಲ್ ಹೇಳಿದ್ದು ಏನು?
ಉಗ್ರಂ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ 10 ವರ್ಷಗಳೇ ಕಳೆದು ಹೋಗಿದೆ. ಹೀಗಿದ್ದಾಗ, ಆಂಕರ್ ಅನುಶ್ರೀ ಅವರು ವಿಶೇಷ ಕಾರ್ಯಕ್ರಮ ಒಂದನ್ನ ನಡೆಸಿದರು. ಈ ವೇಳೆ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ತಮ್ಮ ಜೀವನದ ಕಷ್ಟಗಳನ್ನ ಹಂಚಿಕೊಂಡಿದ್ದಾರೆ. ಇದೇ ವೇಳೆ ಅನುಶ್ರೀ ಅವರು ಮಾತನಾಡುತ್ತಾ, ನಿಮ್ಮ ನೆಚ್ಚಿನ ಡೈರೆಕ್ಟರ್ ಯಾರು? ಅಂತಾ ಪ್ರಶ್ನೆಯ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿದ ಪ್ರಶಾಂತ್ ನೀಲ್ ಅವರು, ನನ್ನ ನೆಚ್ಚಿನ ಡೈರೆಕ್ಟರ್ ಅಂದ್ರೆ ಅದು ಉಪೇಂದ್ರ ಅವರು ಅಂತಿದ್ದಾರೆ. ಅಲ್ಲದೆ ಉಪ್ಪಿ ಯಾಕೆ ಇಷ್ಟ? ಅನ್ನೋದನ್ನ ಕೂಡ ವಿವರಿಸಿದ್ದಾರೆ.

ತರ್ಲೆ ನನ್ಮಗ TO ಓಂ = ಮಿರಾಕಲ್!
ಹೌದು ಉಪೇಂದ್ರ ಅವರನ್ನು ಕಂಡರೆ ನಂಗೆ ಯಾಕೆ ಇಷ್ಟ? ಅನ್ನೋದನ್ನೂ ವಿವರಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು, ಉಪೇಂದ್ರ ಅವರ ಕೆಪಾಸಿಟಿ ಬಗ್ಗೆ ಮಾತನಾಡಿದ್ದಾರೆ. ಯಾಕಂದ್ರೆ 'ತರ್ಲೆ ನನ್ಮಗ' ಸಿನಿಮಾ ಮಾಡಿದ್ದ ಉಪೇಂದ್ರ ಅವರು ನಂತರ 'ಶ್' ಸಿನಿಮಾ ಮಾಡುತ್ತಾರೆ. ಇದೇ ಉಪೇಂದ್ರ ಅವರು ನಂತರ 'ಓಂ' ಅನ್ನೋ ಅಂಡರ್ ವರ್ಲ್ಡ್ ಕಥೆನ ಕನ್ನಡಿಗರ ಎದುರು ಇಡುತ್ತಾರೆ. ಇದು ಸಾಮಾನ್ಯವಾಗಿ ಎಲ್ಲಾ ನಿರ್ದೇಶಕರಿಗೂ ಸಾಧ್ಯವೇ ಇಲ್ಲ, ಹೀಗಾಗಿ ಉಪೇಂದ್ರ ಅವರು ನನ್ನ ಆಲ್ ಟೈಂ ಫೆವರಿಟ್ ನಿರ್ದೇಶಕ ಅಂತಾ ಇದೀಗ ಪ್ರಶಾಂತ್ ನೀಲ್ ಹೇಳಿದ್ದಾರೆ.
ರಿಯಲ್ ಸ್ಟಾರ್ ಈಸ್ ಬ್ಯಾಕ್
ಉಪೇಂದ್ರ ಅವರು ಇದೀಗ 'UI' ಸಿನಿಮಾ ಮೂಲಕ ದೊಡ್ಡ ಸಂಚಲನ ಸೃಷ್ಟಿಸುತ್ತಿದ್ದಾರೆ. ಕನ್ನಡಿಗರ ನಿರೀಕ್ಷೆ ಕೆರಳಿಸಿದ್ದ 'UI' ಸಿನಿಮಾ ಅದನ್ನು ನಿಜ ಮಾಡಲು ಸಜ್ಜಾಗಿದೆ. ಉಪೇಂದ್ರ ಅವರು ಇದೀಗ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡುವ ಮುನ್ಸೂಚನೆ ನೀಡುತ್ತಿದ್ದಾರೆ. ಉಪ್ಪಿ ಡೈರೆಕ್ಷನ್ ಮಾಡಿ ನಟನೆ ಮಾಡಿ ಕನ್ನಡಿಗರ ಎದುರು ಹೊಸ ಲೋಕ ತೆರೆದಿಡಲು ಸಜ್ಜಾಗಿದ್ದಾರೆ. ಹೀಗಿದ್ದಾಗ 'UI' ಸಿನಿಮಾ ಒಟ್ಟಾರೆಯಾಗಿ 9 ಭಾಷೆಗೆ ಡಬ್ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಕನ್ನಡ ಸಿನಿಮಾ ಇಡೀ ಜಗತ್ತಿನಲ್ಲಿ ತನ್ನ ಖದರ್ ತೋರಿಸಲು ಸಜ್ಜಾಗುತ್ತಿದೆ.












Click it and Unblock the Notifications