Power Star Wife: ʼಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ': ಪವರ್ ಸ್ಟಾರ್ ಪತ್ನಿಯ ಪೋಸ್ಟ್ ವೈರಲ್
ತನಗೆ ಆರೋಗ್ಯ ಸಮಸ್ಯೆ ಇದೆ ಎಂದು ಪವನ್ ಕಲ್ಯಾಣ್ ಅವರ ಪತ್ನಿ ದಿಢೀರ್ ಶಾಕ್ ಕೊಟ್ಟಿದ್ದಾಳೆ. ಪವನ್ ಕಲ್ಯಾಣ್ ಅವರ ಪತ್ನಿ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ರೇಣು ದೇಸಾಯಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಸದ್ಯ ಈಗ ಸಾಕಷ್ಟು ಸಂಚಲನ ಮೂಡಿಸಿದ್ದು, ತನಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳುವ ಮೂಲಕ ಅಭಿಮಾನಿಗಳ ಕೊಟ್ಟಿದ್ದಾರೆ. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ರೇಣು ದೇಸಾಯಿ ಅವರು ಫೋಸ್ಟ್ ಹಾಕುವ ಮೂಲಕ ಆರೋಗ್ಯ ಸಮಸ್ಯೆ ಕುರಿತು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಹೃದಯ ಮತ್ತು ಇತರ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದೇನೆ. ಈ ವಿಷಯವನ್ನು ಬಹಿರಂಗಪಡಿಸಲು ಕಾರಣ.. ನನ್ನಂತಹ ಸಮಸ್ಯೆ ಎದುರಿಸುತ್ತಿರುವವರಿಗೆ ಧೈರ್ಯ ತುಂಬಬೇಕು" ಎಂದು ಬರೆದುಕೊಂಡಿದ್ದಾರೆ.
ನಾನು ಕೆಲವು ವರ್ಷಗಳಿಂದ ಹೃದಯ ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದೇನೆ ಎಂದು ನನ್ನ ಹತ್ತಿರದ ಮತ್ತು ಆತ್ಮೀಯರಿಗೆ ತಿಳಿದಿದೆ ಮತ್ತು ಕೆಲವೊಮ್ಮೆ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಶಕ್ತಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟವಾಗುತ್ತದೆ. ಆದರೆ ನಾನು ಪೋಸ್ಟ್ ಮಾಡುತ್ತಿರುವ ಕಾರಣ ಇದು ಇಂದು ಇಲ್ಲಿ ನನ್ನ ಮತ್ತು ತಮ್ಮ ಸ್ವಂತ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವ ಅನೇಕ ಇತರರಿಗೆ ನೆನಪಿಸುವುದಾಗಿದೆ, ಏನೇ ಇರಲಿ ನಾವು ಬಲವಾಗಿರಬೇಕು ಮತ್ತು ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.
"ದುಃಖಿಸಬೇಡಿ... ದೃಢವಾಗಿರಿ ಮತ್ತು ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಈ ಪ್ರಪಂಚವು ನಮಗಾಗಿ ಸುಂದರವಾದ ಯೋಜನೆಗಳನ್ನು ಹೊಂದಿದೆ. ನಗುತ್ತಾ ಬದುಕೋಣ.. ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಉತ್ತಮ ಆಹಾರ ಸೇವಿಸುತ್ತೇನೆ ಮತ್ತು ಯೋಗ ಮತ್ತು ವ್ಯಾಯಾಮ ಮಾಡುತ್ತೇನೆ. ಈ ಸಮಸ್ಯೆಯನ್ನು ನಾನು ನಿವಾರಿಸುತ್ತೇನೆ" ಎಂದು ರೇಣು ದೇಸಾಯಿ ಸುದೀರ್ಘ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ತಮ್ಮ ಸ್ವಂತ ಸಮಸ್ಯೆಗಳೊಂದಿಗೆ ಹೋರಾಡುವ ಜನರು ಕಷ್ಟದ ಸಮಯದಲ್ಲಿ ಗಟ್ಟಿಯಾಗಿರಬೇಕೆಂದು ನಾನು ಬಯಸುತ್ತೇನೆ ಎಂದು ನಾನು ಆರೋಗ್ಯ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡಿದ್ದೇನೆ ಎಂದು ರೇಣು ದೇಸಾಯಿ ಹೇಳಿದ್ದಾರೆ.
ರೇಣು ದೇಸಾಯಿ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, ಹೆಚ್ಚಿನ ಶಕ್ತಿಯೊಂದಿಗೆ ಮೊದಲಿಗಿಂತ ಬಲವಾಗಿ ಹಿಂತಿರುಗಿ ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ, "ದೇವರು ನಿಮಗೆ ಬೇಕಾದ ಎಲ್ಲಾ ಶಕ್ತಿಯನ್ನು ನೀಡಲಿ, ತಾಯಿ, ಶೀಘ್ರದಲ್ಲೇ ಗುಣಮುಖರಾಗಲಿ" ಎಂದು ಬರೆದಿದ್ದಾರೆ. "ಶೀಘ್ರವಾಗಿ ಗುಣಮುಖರಾಗಿರಿ ಮೇಮ್.." ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.ಆಕೆ ಏನೇ ಕಷ್ಟದಲ್ಲಿದ್ದರೂ ಚೇತರಿಸಿಕೊಳ್ಳಬೇಕೆಂದು ಅಭಿಮಾನಿಗಳು ಬಯಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆಕೆಗೆ ಬೇಗ ಚೇತರಿಸಿಕೊಳ್ಳಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ 2012 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಅವರಿಗೆ ಅಕಿರಾ ಮತ್ತು ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ರೇಣು ಜೊತೆ ಬೆಳೆಯುತ್ತಿದ್ದಾರೆ. ವಿಚ್ಛೇದನದ ನಂತರ ರೇಣು ದೇಸಾಯಿ ಪುಣೆಯಲ್ಲಿ ನೆಲೆಸಿದ್ದರು. ವಿಚ್ಛೇದನ ಪಡೆದಿದ್ದರೂ, ರೇಣು ದೇಸಾಯಿ ಪವನ್ ಕಲ್ಯಾಣ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications