ಗುರೂ ಓದು ಇಲ್ಲಿ... ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಂ. 1 ಹೀರೋ ಯಾರು?
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಆಗಾಗ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತದೆ. ಇನ್ನು ನಮ್ಮ ಹೀರೋ ನಂಬರ್ 1, ನಿಮ್ಮ ಹೀರೋ ನಂಬರ್ 2 ಅಂತಾ ಅಭಿಮಾನಿಗಳು ಬಂದು ಸೋಷಿಯಲ್ ಮೀಡಿಯಾದಲ್ಲಿ ಫೈಟಿಂಗ್ ಮಾಡ್ತಾ ಇರುತ್ತಾರೆ. ಆದರೆ ಈಗ ಅಭಿಮಾನಿಗಳ ಫ್ಯಾನ್ಸ್ ವಾರ್‌ಗೆ ಒಂದು ಮುಕ್ತಿ ಸಿಗಬಹುದು. ಹಾಗೇ ಕನ್ನಡ ಸಿನಿಮಾ ಇಂಡಸ್ಟ್ರಿ ಪಾಲಿಗೆ ನಂಬರ್ 1 ಹೀರೋ ಯಾರು? ಅನ್ನೋ ಪ್ರಶ್ನೆಗೂ ಉತ್ತರವನ್ನ ಹುಡುಕಲು ಮುಂದೆ ನೀವೆ ವಿಡಿಯೋ ನೋಡಿ!
ಅದು 2010ರ ಅಕ್ಟೋಬರ್ ತಿಂಗಳು, ಕನ್ನಡಿಗರು ಊಹೆ ಮಾಡದ ರೀತಿ ಸಿನಿಮಾ ಒಂದು ರಿಲೀಸ್ ಆಗಿತ್ತು. ಕನ್ನಡ ಸಿನಿಮಾ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ಸಿನಿಮಾ ಅದಾಗಿತ್ತು. ಆ ಸಿನಿಮಾದ ಹೆಸರೇ 'ಜಾಕಿ' ಅಂತಾ. ಹೀಗೆ ನೋಡ ನೋಡುತ್ತಲೇ, ಹತ್ತಾರು ಕೋಟಿ ಆಗಿನ ಕಾಲಕ್ಕೆ ದುಡಿದಿದ್ದ, ಪುನೀತ್ ರಾಜ್‌ಕುಮಾರ್ ಅಭಿನಯ ಮಾಡಿದ್ದ ಜಾಕಿ ಸಿನಿಮಾ ಇಂದು ರೀ ರಿಲೀಸ್ ಆಗಿದೆ. ಹಾಗಾದರೆ ಅಭಿಮಾನಿಗಳ ರೆಸ್ಪಾನ್ಸ್ ಹೇಗಿತ್ತು ಗೊತ್ತಾ. ಅದನ್ನ ನೋಡಿದ್ರೆ ನಿಮಗೆ ತಲೆ ಗಿರ್ ಅನ್ನೋದು ಗ್ಯಾರಂಟಿ, ಹಬ್ಬದಂತೆ ಜಾಕಿ ಸಿನಿಮಾ ಆಚರಣೆ ಮಾಡಿದ ಅಭಿಮಾನಿಗಳ ವಿಡಿಯೋ ನೋಡಲು ಮುಂದೆ ಓದಿ.

'ಜಾಕಿ' ಅಬ್ಬರ ನೀವೆ ನೋಡಿ!
ಇಂದು ಕರ್ನಾಟಕದ ಮೂಲೆ ಮೂಲೆಯಲ್ಲೂ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿದ್ದು ಈ ಸಿನಿಮಾ ನೋಡಲು ಕೋಟ್ಯಂತರ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಹುತೇಕ ಎಲ್ಲಾ ಥಿಯೇಟರ್‌ಗಳು ಶುಕ್ರವಾರವೇ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಈ ಮೂಲಕ 'ಜಾಕಿ' ಅಬ್ಬರಕ್ಕೆ ಥಿಯೇಟರ್ ಮಾಲೀಕರು ಕೂಡ ತಲೆಬಾಗಿದ್ದಾರೆ. ಹಾಗೇ ಈ ಸಮಯದಲ್ಲೇ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಅಭಿನಯ & ಡಾನ್ಸ್‌ಗೆ ಫ್ಯಾನ್ಸ್ ಈಗ ಮತ್ತೆ ಮತ್ತೆ ಫಿದಾ ಆಗುತ್ತಿದ್ದಾರೆ.
ಜೈ ಮಾಕಾಳಮ್ಮ 🔥
— ದೃಶ್ಯ | Drushya (@DrushyaDrush) March 14, 2024
" Jackie Fever begins "#AdvanceHBDDrPuneethRajkumar #DrPuneethRajkumar #JackieReRelease pic.twitter.com/sSBC9TssWN
ಥಿಯೇಟ್‌ನಲ್ಲಿ ಭರ್ಜರಿ ಡಾನ್ಸ್!
ಹಾಗೇ ಕನ್ನಡ ನೆಲದ ಥಿಯೇಟರ್‌ನಲ್ಲಿ 'ಜಾಕಿ' ಸಿನಿಮಾ ಅಬ್ಬರ ಹೇಗಿದೆ ಅಂದ್ರೆ, ಅಪ್ಪು ಅವರ ಫ್ಯಾನ್ಸ್ ಥಿಯೇಟರ್‌ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹಾಗೇ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ಸಾವಿರ ಸಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನಿಸುತ್ತಿದೆ.
Round 2 🥳
— Lakshmi Narayan.sl (@Appunetworkk) March 15, 2024
JACKIE FEVER BEGINS #AdvanceHBDDRPuneethRajkumar#DrPuneethRajkumar pic.twitter.com/Vae3l1U5oE
ಬೆಳ್ಳಂಬೆಳಗ್ಗೆ ಶುರುವಾಗಿತ್ತು ಅಪ್ಪು ಹವಾ!
ಕರ್ನಾಟಕದ ಬಹುತೇಕ ಸಿನಿಮಾ ಮಂದಿರದಲ್ಲಿ ಇಂದು ಬೆಳಗ್ಗೆ 4 ಗಂಟೆಗೆಯಿಂದಲೇ ಈ ಸಿನಿಮಾ ಅಬ್ಬರ ಶುರುವಾಗಿತ್ತು. 'ಜಾಕಿ' ಸಿನಿಮಾ ಬೆಳ್ಳಂಬೆಳಗ್ಗೆ ರಿಲೀಸ್ ಆಗಿದ್ದರು ಕೂಡ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಹಾಗೇ ಅಭಿಮಾನಿಗಳು ಕೂಡ ಸಖತ್ ಎಂಜಾಯ್ ಮಾಡಿ ಸಂಭ್ರಮ ಪಟ್ಟರು.
Massive 💥 #JackieReRelease
— 𝙍𝙖𝙣𝙣𝙖 ✨ ರನ್ನ (@iamgopi118) March 15, 2024
This reminded me the school days craze of #Jackie 🔥#AppuLivesOn pic.twitter.com/wGPJyf6gnY
ಕನ್ನಡದ ನಂಬರ್ 1 ಹೀರೋ...
ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಇಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರ ವಿಚಾರ ಟ್ರೆಂಡ್ ಆಗುತ್ತಿದೆ. ಹಾಗೇ ಅಭಿಮಾನಿಗಳು ಈಗ ನಂಬರ್ 1 ಹೀರೋ ಯಾರು..? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಹಾಗೇ ಅನುಮಾನ ಇದ್ದರೆ ಈ ವಿಡಿಯೋಗಳನ್ನು ನೋಡಿ ಅಂತಾನೂ ಪ್ರೀತಿಯಿಂದ ಸವಾಲು ಹಾಕುತ್ತಿದ್ದಾರೆ!
How's the josh guys..#JackieReRelease#DrPuneethRajkumar pic.twitter.com/aPcPtX2V3T
— Hemanth (@Hemanthappu2005) March 12, 2024
ಒಟ್ನಲ್ಲಿ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಜಾಕಿ ಸಿನಿಮಾ ಹವಾ ನೋಡಿ ಫ್ಯಾನ್ಸ್‌ಗೆ ಮನಸ್ಸು ತುಂಬಿ ಬಂದಿದೆ. ಹಾಗೇ ಈ ಸಿನಿಮಾ ಅಬ್ಬರ ಇನ್ನೂ ಹಲವು ವಾರಗಳ ಇದೇ ರೀತಿ ಇರಲಿದೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ. ಇನ್ನೊಂದು ಕಡೆ ಮುಚ್ಚುವ ಭೀತಿಯಲ್ಲಿ ಇದ್ದ ಕರ್ನಾಟಕದ ಬಹುತೇಕ ಥಿಯೇಟರ್‌ಗಳಿಗೆ ಈಗ 'ಜಾಕಿ' ಸಿನಿಮಾದಿಂದ ಮತ್ತೆ ಉಸಿರು ಸಿಕ್ಕಂತಾಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬರ್ತ್ ಡೇಗೆ ಇನ್ನು ಕೇವಲ 2 ದಿನ ಬಾಕಿ ಇದ್ದು, ಶನಿವಾರ & ಭಾನುವಾರ 'ಜಾಕಿ' ಸಿನಿಮಾಗೆ ಇನ್ನೂ ದೊಡ್ಡ ಮಟ್ಟದ ಕಲೆಕ್ಷನ್ ಹರಿದು ಬರುವ ನಿರೀಕ್ಷೆ ಇದೆ. ಹಣಕ್ಕಿಂತಲೂ ಹೆಚ್ಚಾಗಿ, ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳ ಪಾಲಿಗೆ 'ಜಾಕಿ' ಸಿನಿಮಾ ರೀ ರೀಲೀಸ್ ಆಗಿದ್ದು ದೊಡ್ಡ ಹಬ್ಬವೇ ಸರಿ.












Click it and Unblock the Notifications