ನಗ್ನ ವಿಡಿಯೋ ವೈರಲ್ ಬೆದರಿಕೆ ಹಾಕಿದ್ರು, ಆ ನಟನಿಂದ ನನ್ನ ಮದುವೆ ನಿಂತು ಹೋಯ್ತು: ನಟಿ ಪೂನಂ
ಬಹುಭಾಷಾ ನಟಿ ಪೂನಂ ಕೌರ್ (Poonam Kaur) ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ನಟಿಯ ಬಗ್ಗೆ ಈ ಹಿಂದೆ ಹಲವು ವದಂತಿಗಳು ಹರಡಿದ್ದವು. ಪೂನಂ ರಹಸ್ಯ ಮಕ್ಕಳಿದ್ದಾರೆ ಮತ್ತು ಗರ್ಭಪಾತವಾಗಿದೆ ಎಂದೆಲ್ಲ ಗಾಸಿಪ್ ಸದ್ದ ಮಾಡಿದ್ದವು. ಈ ಎಲ್ಲದರ ಬಗ್ಗೆಯೂ ಇತ್ತೀಚಿನ ಸಂದರ್ಶನದಲ್ಲಿ ಮೌನ ಮುರಿದಿದ್ದಾರೆ. ಆ ನಟನಿಂದಲೇ ನನ್ನ ಮದುವೆ ನಿಂತು ಹೋಯ್ತು ಎಂದೂ ಅಚ್ಚರಿಯ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಪೂನಂ ತೆಲುಗು ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಶುರು ಮಾಡಿದರು. 'ಇತ್ತೀಚೆಗೆ ಸಿನಿಮಾ ಅವಕಾಶಗಳು ಕಡಿಮೆಯಾದರೂ ಹೈದರಾಬಾದ್‌ನಲ್ಲೇ ವಾಸಿಸುತ್ತಿದ್ದೇನೆ' ಎಂದಿದ್ದಾರೆ. 'ತಮ್ಮ ಹೆಸರನ್ನು ಪದೇ ಪದೇ ರಾಜಕೀಯ ವಿವಾದಗಳಿಗೆ ಎಳೆದು ತರಲಾಗುತ್ತಿದೆ. ಕೆಲವು ರಾಜಕೀಯ ಗುಂಪುಗಳು ತಮ್ಮ ಉದ್ದೇಶಪೂರ್ವಕವಾಗಿ ನಟ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ವ್ಯಕ್ತಿಯೊಂದಿಗೆ ತಮಗೆ ಸಂಬಂಧ ಕಲ್ಪಿಸಿದ್ದರು' ಎಂದು ಆರೋಪಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೂನಂ, 'ನನಗೆ ರಹಸ್ಯ ಮಕ್ಕಳಿದ್ದಾರೆ ಮತ್ತು ಗರ್ಭಪಾತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದವು. ಇವು ಸಂಪೂರ್ಣವಾಗಿ ಸುಳ್ಳು ಮತ್ತು ಮಾನಹಾನಿಕರ' ಎಂದು ತಳ್ಳಿಹಾಕಿದ್ದಾರೆ.
ಕಡಪ ಜನರಿಂದ ಬೆದರಿಕೆ
ಕಿರುಕುಳದ ಆರೋಪಗಳನ್ನು ಮಾಡಿರುವ ಅವರು, 'ಕಡಪದ ಜನರು ಒಮ್ಮೆ ಪತ್ರಿಕಾಗೋಷ್ಠಿ ನಡೆಸಿ ಒಬ್ಬ ನಟನ ವಿರುದ್ಧ ಮಾತನಾಡಲು ನನ್ನ ಮೇಲೆ ಒತ್ತಡ ಹೇರಿದ್ದರು. ಆರಂಭದಲ್ಲಿ ಅವರು ಹಣದ ನೀಡಲು ಆಮಿಷವೊಡ್ಡಿದ್ದರು. ಅಲ್ಲದೆ ರಾಜಕೀಯ ಸ್ಥಾನಗಳನ್ನು ನೀಡುವುದಾಗಿ ಹೇಳಿದರು. ಇದನ್ನು ನಾನು ನಿರಾಕರಿಸಿದಾಗ ನನ್ನ ನಗ್ನ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದರು. ಇದನ್ನು ಎಂದಿಗೂ ಪೊಲೀಸರಿಗೆ ತಿಳಿಸಲಿಲ್ಲ, ಈ ಆಘಾತವನ್ನು ತನ್ನ ಕುಟುಂಬದೊಂದಿಗೆ ಮಾತ್ರ ಹಂಚಿಕೊಂಡೆ. ಇಂದಿಗೂ ಆ ವಿಚಾರಗಳಿಂದ ನಾನು ಮೌನವಾಗಿ ಬಳಲುತ್ತಿದ್ದೇನೆ' ಎಂದಿದ್ದಾರೆ.
ಈ ಹಿಂದೆ ರಾಹುಲ್ ಗಾಂಧಿ ಅವರೊಂದಿಗೆ ನಟಿ ಪೂನಂ ಕೌರ್ ನಂಟು ಹೊಂದಿದ್ದಾರೆ ಎಂಬ ವದಂತಿಯನ್ನೂ ಅವರು ತಳ್ಳಿಹಾಕಿದ್ದಾರೆ. 'ನಾನು ಅವರೊಂದಿಗೆ ಯಾವುದೇ ವೈಯಕ್ತಿಕ ಸಂಬಂಧ ಹೊಂದಿಲ್ಲ. ನನ್ನ ಕೈಮಗ್ಗ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತ್ರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೆ. ಒಂದು ಕಾರ್ಯಕ್ರಮದಲ್ಲಿ ಅವರೊಂದಿಗೆ ಸ್ವಲ್ಪ ಸಮಯ ನಡೆದಿದ್ದೇನೆ. ಕೆಲವು ಮಾಧ್ಯಮಗಳು ಇದನ್ನೇ ತಪ್ಪಾಗಿ ತೋರಿಸಿದವು' ಎಂದಿದ್ದಾರೆ.
'ಜೀವನವೇ ತಲೆಕೆಳಗಾಯ್ತು'
'ಟಾಲಿವುಡ್ ನಟ ಪೊಸಾನಿ ಕೃಷ್ಣ ಮುರಳಿ ನೀಡಿದ ಹೇಳಿಕೆಗಳು ಕೂಡ ನನ್ನ ಜೀವನದ ಮೇಲೆ ಪ್ರಭಾವ ಬೀರಿತು. ಅವರಿಂದ ನನ್ನ ವೈಯಕ್ತಿಕ ಜೀವನ ಹಾಳಾಯಿತು. ಇದೇ ಸಮಯದಲ್ಲಿ ನನ್ನ ಮದುವೆ ತಯಾರಿ ನಡೆದಿತ್ತು. ಆ ವಿವಾದದ ನಂತರ ಮದುವೆ ಮುರಿದುಬಿತ್ತು. ನಮ್ಮ ಕುಟುಂಬವನ್ನು ತೀವ್ರವಾಗಿ ಬಾಧಿಸಿತು, ನಮ್ಮ ತಾಯಿ ಹೃದಯಾಘಾತದಿಂದ ಬಳಲುತ್ತಿದ್ದರು. ಆ ಘಟನೆಯ ನಂತರ ನನ್ನ ಜೀವನ ಶಾಶ್ವತವಾಗಿ ಬದಲಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಪೊಸಾನಿ ಪತ್ರಿಕಾಗೋಷ್ಠಿಯ ನಂತರ, ನಾನು ನನ್ನ ಜೀವನದಲ್ಲಿ ಹಣ, ಮದುವೆ, ಕೆಲಸ, ಆರೋಗ್ಯ, ಸಂತೋಷ, ಭರವಸೆ ಎಲ್ಲವನ್ನೂ ಕಳೆದುಕೊಂಡೆ' ಎಂದಿದ್ದಾರೆ.
ಕನ್ನಡದಲ್ಲಿ ನಟ ಶಿವರಾಜ್ ಕುಮಾರ್ ಅವರೊಂದಿಗೆ "ಬಂಧುಬಳಗ" ಸಿನಿಮಾದಲ್ಲಿ ಪೂನಂ ಕೌರ್ ನಟಿಸಿದ್ದಾರೆ. ಮಲಯಾಳಂ, ತಮಿಳು ಸಿನಿಮಾಗಳಲ್ಲಿಯೂ ಕೌರ್ ನಟಿಸಿದ್ದಾರೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications