Virosh Marriage: ರಶ್ಮಿಕಾ-ವಿಜಯ್ ವಿವಾಹಕ್ಕೆ ಪ್ರಧಾನಿ ಮೋದಿ ಶುಭ ಹಾರೈಕೆ: ವಿರೋಶ್‌ ಜೋಡಿಗೆ ಬರೆದ ಪತ್ರದಲ್ಲಿ ಏನಿದೆ?

ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಜೋಡಿ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಐಟಿಸಿ ಮೊಮೆಂಟೋಸ್‌ನಲ್ಲಿ (ITC Momentos) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ಸಂಭ್ರಮದ ಸಂದರ್ಭದಲ್ಲಿ ಪ್ರಧಾನಿಯವರು ಅಭಿನಂದನಾ ಪತ್ರವನ್ನು ರವಾನಿಸಿದ್ದಾರೆ. ವಿರೋಶ್‌ ಜೋಡಿಯ ವಿವಾಹ ಮಹೋತ್ಸವಕ್ಕೆ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶುಭ ಹಾರೈಕೆಯೂ ಸಂದಿದೆ. ಮೋದಿ ಅವರ ಹೆಸರಿನಲ್ಲಿರುವ ಈ ಪತ್ರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ದೇವರಕೊಂಡ-ಮಂದಣ್ಣ ಕುಟುಂಬಕ್ಕೆ ಪ್ರಧಾನಿ ಸಂದೇಶ

ವಿಜಯ್ ದೇವರಕೊಂಡ ಅವರ ಪೋಷಕರಾದ ಮಾಧವಿ ಮತ್ತು ಗೋವರ್ಧನ ರಾವ್ ಅವರಿಗೆ ಬರೆದ ಪತ್ರದಲ್ಲಿ ಪ್ರಧಾನಿ ಮೋದಿ ಅವರು, "ಫೆಬ್ರವರಿ 26 ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ಆಮಂತ್ರಣ ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಈ ಸಂಭ್ರಮದ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು" ಎಂದು ತಿಳಿಸಿದ್ದಾರೆ.

Narendra Modi

ಈ ವಿವಾಹವು ಜೀವನದ ಒಂದು ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿರುವ ಪ್ರಧಾನಿಯವರು, ದಂಪತಿಗಳ ಜೀವನದ ಹೊಸ ಆರಂಭವನ್ನು ಸುಂದರವಾಗಿ ವಿಶ್ಲೇಷಿಸಿದ್ದಾರೆ. "ಇದು ವಿಜಯ್ ಮತ್ತು ರಶ್ಮಿಕಾ ಅವರ ಜೀವನದಲ್ಲಿ ಹೊಸ ಮತ್ತು ಸುಂದರ ಅಧ್ಯಾಯದ ಆರಂಭವಾಗಿದೆ. ಸಖ ಸಪ್ತಪದ ಭಾವ ಅಂದರೆ ಏಳು ಹೆಜ್ಜೆಗಳನ್ನು ಒಟ್ಟಿಗೆ ನಡೆಯುವ ಮೂಲಕ ದಂಪತಿಗಳು ಜೀವನಪರ್ಯಂತ ಸ್ನೇಹಿತರಾಗುತ್ತಾರೆ" ಎಂದು ಅವರು ಆಶೀರ್ವದಿಸಿದ್ದಾರೆ.

ದೈವಲಿಖಿತ ಎಂದು ಉಲ್ಲೇಖ

"ವಿಜಯ್ ಮತ್ತು ರಶ್ಮಿಕಾ ಇಬ್ಬರಿಗೂ ಸಿನಿಮಾಗಳ ಸ್ಕ್ರಿಪ್ಟ್‌ಗಳು ಹೊಸದಲ್ಲ. ಆದರೆ ಪ್ರೀತಿ ಮತ್ತು ಅನುರಾಗದಿಂದ ತುಂಬಿರುವ ಅವರ ನೈಜ ಜೀವನದ ಈ 'ದೈವಲಿಖಿತ' ಅಧ್ಯಾಯವು ಬೆಳ್ಳಿ ಪರದೆಯ ಮೇಲೆ ಅವರು ಸೃಷ್ಟಿಸಿದ ಮ್ಯಾಜಿಕ್‌ಗಿಂತಲೂ ಹೆಚ್ಚು ಹೊಳೆಯಲಿದೆ ಎಂಬ ನಂಬಿಕೆ ನನಗಿದೆ" ಎಂದು ಬರೆದಿದ್ದಾರೆ. ಸಪ್ತಪದಿಯ ಏಳು ಹೆಜ್ಜೆಗಳ ಮಹತ್ವವನ್ನು ಸ್ಮರಿಸುತ್ತಾ, ದಂಪತಿಗಳು ಜೀವನಪರ್ಯಂತ ಪರಸ್ಪರರ ಶಕ್ತಿ ಮತ್ತು ಲೋಪದೋಷಗಳನ್ನು ಪ್ರೀತಿಯಿಂದ ಸ್ವೀಕರಿಸಿ ಸಾಗಲಿ ಎಂದು ಹರಸಿದ್ದಾರೆ.

ಇತ್ತೀಚೆಗಷ್ಟೇ ವಿಜಯ್ ಮತ್ತು ರಶ್ಮಿಕಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ವಿವಾಹದ ಬಗ್ಗೆ ಅಧಿಕೃತವಾಗಿ ಘೋಷಿಸಿಕೊಂಡಿದ್ದರು. "ನಮ್ಮ ಪ್ರೀತಿಯ ಅಭಿಮಾನಿಗಳೇ, ನಾವು ಯಾವುದೇ ಯೋಜನೆಗಳನ್ನು ಮಾಡುವ ಮೊದಲೇ ನೀವು ನಮಗೆ 'ವಿರೋಶ್' (VIROSH) ಎಂದು ಹೆಸರಿಟ್ಟು ಪ್ರೀತಿ ನೀಡಿದ್ದೀರಿ. ಹಾಗಾಗಿ, ಇಂದು ನಮ್ಮ ಈ ಮದುವೆಗೆ ನಿಮ್ಮ ಗೌರವಾರ್ಥವಾಗಿ 'ದ ವೆಡ್ಡಿಂಗ್ ಆಫ್ ವಿರೋಶ್' ಎಂದು ಹೆಸರಿಡುತ್ತಿದ್ದೇವೆ. ನೀವು ಸದಾ ನಮ್ಮ ಭಾಗವಾಗಿರುತ್ತೀರಿ" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ರಾಜಸ್ಥಾನದ ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಾಳೆ ಶಾಸ್ತ್ರೋಕ್ತವಾಗಿ ಮದುವೆ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಚಿತ್ರರಂಗದ ಆಪ್ತ ಗಣ್ಯರು ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮದುವೆ ಪೂರ್ವದ ಸಂಭ್ರಮಗಳು ಈಗಾಗಲೇ ಮುಕ್ತಾಯವಾಗಿದ್ದು, ನಾಳೆ ಈ ಜೋಡಿ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ಕಾಲಿಡಲಿದೆ. ಈಗಾಗಲೇ ಸ್ಟಾರ್ ಜೋಡಿಯ ವಿವಾಹದ ಸಂಭ್ರಮಾಚರಣೆಗಳು ಈಗಾಗಲೇ ಅದ್ಧೂರಿಯಾಗಿ ಶುರುವಾಗಿವೆ.

ವರದಿಗಳ ಪ್ರಕಾರ ಫೆಬ್ರವರಿ 24ರಂದು ಅದ್ಧೂರಿ ಸಂಗೀತ ಕಾರ್ಯಕ್ರಮ ನಡೆದಿದ್ದು, ಫೆಬ್ರವರಿ 25ರಂದು ಹಳದಿ ಮತ್ತು ಮೆಹಂದಿ ಶಾಸ್ತ್ರಗಳು, ಫೆಬ್ರವರಿ 26ರಂದು ಮಂದಣ್ಣ ಮತ್ತು ದೇವರಕೊಂಡ ಕುಟುಂಬಗಳ ಸಂಪ್ರದಾಯಗಳನ್ನು ಗೌರವಿಸುವ ನಿಟ್ಟಿನಲ್ಲಿ ಎರಡು ವಿಭಿನ್ನ ಶೈಲಿಗಳಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಪ್ರಧಾನ ಮಂತ್ರಿಯವರ ಈ ಹಾರೈಕೆ ಪತ್ರವು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ರಶ್ಮಿಕಾ ಮತ್ತು ವಿಜಯ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+