Bigg Boss Kannada: ಬಿಗ್‌ಬಾಸ್ ನೋಡ್ಬೇಕಂದ್ರೆ ಈ ಬದಲಾವಣೆ ಆಗ್ಬೇಕು ಅಂತಿದ್ದಾರೆ ಜನ, ಏನದು
ಬಿಗ್‌ಬಾಸ್ ಕನ್ನಡ 11ನೇ ಸೀಸನ್ ಹಲವು ಕಾರಣಕ್ಕೆ ಫೇಮಸ್ ಆಗಿದೆ. ಈ ಬಾರಿ ಶೋನ ಇತಿಹಾಸದಲ್ಲೇ ಈ ಹಿಂದೆ ಎಂದೂ ನಡೆಯದ ಘಟನೆಗಳು ನಡೆದಿದ್ದು, ಪ್ರೇಕ್ಷಕರ ಲೆಕ್ಕಾಚಾರ ತಲೆಕೆಳಗಾಗಿದೆ. ಬಿಗ್ ಬಾಸ್ ಸೀಸನ್11ರಿಂದ ಲಾಯರ್ ಜಗದೀಶ್ ಅವರು ಹೊರ ಬರುವಂತಾಗಿದ್ದು, ಪ್ರೇಕ್ಷಕರಿಗೆ ಭಾರೀ ನಿರಾಸೆಯಾಗಿದೆ. ಅವರು ಮತ್ತೆ ಬಂದ್ರೆ ಮಾತ್ರ ನಾವು ಬಿಗ್‌ಬಾಸ್ ನೋಡ್ತೀವಿ ಅಂತ ಜನ ಹೇಳ್ತಿದ್ದಾರೆ. ಅಷ್ಟೇ ಅಲ್ಲ..
ಜಗದೀಶ್ ಅವರು ಮತ್ತೆ ಬಿಗ್‌ಬಾಸ್‌ಗೆ ಬರದೆ ಇದ್ದರೆ. ಈ ಬಾರಿಯ ಶೋ ತನ್ನ ಖದರ್ ಕಳೆದುಕೊಳ್ಳಲಿದೆಯೇ ಎನ್ನುವ ಕುತೂಹಲವೂ ಸಹ ಮೂಡಿದೆ. ಬಿಗ್‌ಬಾಸ್ ಸೀಸನ್ 11ರಲ್ಲಿ ಜಗಳವಾಡಿಕೊಂಡು ಲಾಯರ್ ಜಗದೀಶ್ ಅವರು ಹೊರಬಂದಿದ್ದಾರೆ. ಜಗದೀಶ್ ಅವರು ಹೊರಗೆ ಬರಬಾರದು. ಈ ಬಾರಿಯ ಸೀಸನ್11ರಲ್ಲಿ ಅವರು ಇರಲೇಬೇಕು. ಅವರಿಂದಲೇ ಈ ಶೋಗೆ ಈ ಬಾರಿ ಕಳೆ ಹಾಗೂ ಟಿಆರ್‌ಪಿ ಬರ್ತಿದೆ ಅಂತಿದ್ದಾರೆ ಜನ.

ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ: ಲಾಯರ್ ಜಗದೀಶ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ. ಜಗದೀಶ್ ಅವರು ಮತ್ತೆ ಬಿಗ್‌ಬಾಸ್‌ಗೆ ಹೋಗಬೇಕು. ಅವರು ಬಿಗ್‌ಬಾಸ್‌ಗೆ ಮತ್ತೆ ಬರದೆ ಇದ್ದರೆ. ನಾವು ಬಿಗ್‌ಬಾಸ್ ನೋಡೋದು ಬಿಡ್ತೀವಿ ಅಂತಲೂ ಕೆಲವರು ಹೇಳುತ್ತಿದ್ದಾರೆ.
ಜಗದೀಶ್ ಅವರಿಗೆ ಕರ್ನಾಟಕದಲ್ಲಿ ಅಪಾರ ಫ್ಯಾನ್ಸ್ ಫಾಲೋ ಇದೆ. ಅವರು ಬಿಗ್‌ಬಾಸ್‌ಗೆ ಹೋದ ಮೇಲೆ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದೆ. ಇದೀಗ ಅವರು ಬಿಗ್‌ಬಾಸ್‌ನಲ್ಲಿ ಗಲಾಟೆ ಮಾಡಿಕೊಂಡು ಹೊರ ಬಂದ ಮೇಲೆ ಜನ ಬಿಗ್‌ಬಾಸ್ ಶೋನ ಮನರಂಜನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಿದ್ದಾರೆ. ಅವರು ಇಲ್ಲದೆ ಶೋ ನೋಡೋಕೆ ಆಗ್ತಿಲ್ಲ ಪ್ಲೀಸ್ ಬಿಗ್‌ಬಾಸ್ ಅವರನ್ನು ಮತ್ತೆ ಕರ್ಸಿಕೊಳ್ಳಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡ್ತಿದ್ದಾರೆ.
ಜಗ್ಗು ಎಂಟ್ರಿಗಾಗಿ ಇಡೀ ಕರ್ನಾಟಕ ಕಾಯ್ತಿದೆ. ಜಗ್ಗು ಅವರು ಮತ್ತೆ ಬಂದ್ರೆ ಮಾತ್ರ ನಾವು ಮತ್ತೆ ಬಿಗ್‌ಬಾಸ್ ನೋಡ್ತೀವಿ. ದಯವಿಟ್ಟು ಜಗ್ಗು ಅವರನ್ನು ವಾಪಸ್ ಕರೆದುಕೊಂಡು ಬನ್ನಿ ಅವರು ಇಲ್ಲದೆ ಬಿಗ್‌ಬಾಸ್‌ನ ಈ ಬಾರಿಯ ಸೀಸನ್ ಸಪ್ಪೆ ಸಪ್ಪೆಯಾಗಿದೆ ಅಂತಲೂ ಕೆಲವು ಬಿಗ್‌ಬಾಸ್ ನೋಡುವ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಬಿಗ್‌ಬಾಸ್ ಮನೆಗೆ ಜಗದೀಶ್ ಅವರು ವಾಪಸ್ ಬರದೆ ಇದ್ದರೆ. ನಾವು ಶೋ ನೀಡುವುದನ್ನು ನಿಲ್ಲಿಸಲಿದ್ದೇವೆ ಎಂದೂ ಸಹ ಕೆಲವರು ಹೇಳಿದ್ದಾರೆ.
ಸಾರ್ವಜನಿಕರಿಂದ ಬೆಂಬಲ: ಜಗದೀಶ್ ಅವರನ್ನು ವಾಪಸ್ ಬಿಗ್‌ಬಾಸ್‌ಗೆ ಕರೆಸಿಕೊಳ್ಳಿ. ಅವರು ನಡೆದಿರುವ ಘಟನೆಗೆ ಕ್ಷಮಾಪಣೆಯನ್ನೂ ಕೇಳಿದ್ದಾರೆ. ಅಲ್ಲದೇ ಜಗದೀಶ್ ಅವರು ಮಾತನಾಡಿದ್ದು ತಪ್ಪು ನಿಜ. ಅದೇ ರೀತಿ ಉಳಿದ ಅಭ್ಯರ್ಥಿಗಳು ಸಹ ಕೆಟ್ಟದಾಗಿ ಮಾತನಾಡಿದ್ದಾರೆ. ಜಗದೀಶ್ ಮತ್ತು ರಂಜಿತ್‌ರನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿದೆ. ಅಲ್ಲದೇ ಹೆಣ್ಣು ಮಕ್ಕಳು ಸಹ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಅವರನ್ನು ಮನೆಯಲ್ಲಿ ಬಿಗ್‌ಬಾಸ್ ಶೋನಲ್ಲೇ ಉಳಿಸಿಕೊಳ್ಳಲಾಗಿದೆ ಎಂದೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಗದೀಶ್ ಬಿಗ್‌ಬಾಸ್‌ಗೆ ಬರುವ ಬಗ್ಗೆ ಗೊಂದಲ: ಇನ್ನು ಬಿಗ್‌ಬಾಸ್‌ನ ನಿರೂಪ ಕಿಚ್ಚ ಸುದೀಪ್ ಅವರು ಜಗದೀಶ್ ಅವರು ವಾಪಸ್ ಬರ್ತಾರಾ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಜಗದೀಶ್ ಅವರು ಒಳ್ಳೆಯವರು ಅಥವಾ ಅವರು ತಪ್ಪೇ ಮಾಡಿಲ್ಲ ಎಂದು ಹೇಳಲು ಬಂದಿಲ್ಲ. ಆದರೆ, ಮಾತಿನ ಮೇಲೆ ನಿಗಾ ಇಲ್ಲದೆ ಇರುವುದರಿಂದ ಅವರು ಕಾರ್ಯಕ್ರಮದಿಂದ ಹೊರ ಹೋಗಬೇಕಾಗಿದೆ. ಈ ರೀತಿ ಮಾಡುವುದು ಬಿಗ್ ಬಾಸ್ ಸಹಿಸುವುದಿಲ್ಲ. ಜಗದೀಶ್ ಬಿಗ್ ಬಾಸ್ ಪಾಲಿಗೆ ಮುಗಿದ ಅಧ್ಯಾಯ ಎಂದಿದ್ದಾರೆ.












Click it and Unblock the Notifications