Darshan Thoogudeepa: ರೇಣುಕಾಸ್ವಾಮಿ ಮಾಡಿದ್ದು ಸರಿನಾ? ಪವಿತ್ರಾ ಗೌಡ ಮಾಜಿ ಗಂಡನ....
ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದಲ್ಲಿ ಹಾಯಾಗಿ ರಾಜನ ರೀತಿ ಇದ್ದರು, ಆದರೆ ಈ ರೇಣುಕಾಸ್ವಾಮಿ ಮ್ಯಾಟರ್ ಅಡ್ಡ ಬಂದು ಎಲ್ಲಾ ಹಾಳಾಗಿ ಹೋಯ್ತು... ಅಂದಹಾಗೆ ಈ ರೀತಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಪದೇ ಪದೇ ಬೇಸರ ವ್ಯಕ್ತಪಡಿಸಿ ರೇಣುಕಾಸ್ವಾಮಿಗೆ ಬೈಯುತ್ತಾರೆ.
ಜೊತೆಗೆ ಪವಿತ್ರಾ ಗೌಡ ವಿರುದ್ಧ ಕೂಡ ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳಿಗೆ ಸಖತ್ ಕೋಪ ಇದೆ. ಇಂತಹ ಸಮಯದಲ್ಲೇ, ಪವಿತ್ರಾ ಗೌಡ ಮಾಜಿ ಗಂಡ ಕೂಡ ರೇಣುಕಾಸ್ವಾಮಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ರೇಣುಕಾಸ್ವಾಮಿ ವಿಚಾರವಾಗಿ ಮೊಟ್ಟ ಮೊದಲ ಬಾರಿಗೆ ಈಗ ಪವಿತ್ರಾ ಗೌಡ ಮಾಜಿ ಗಂಡ ಮುಕ್ತವಾಗಿ ಮಾತನಾಡಿದ್ದು, ತಮ್ಮ ಹೆಂಡತಿಗೆ ಅಶ್ಲೀಲ ಕೆಟ್ಟ ಕೆಟ್ಟ ಮೆಸೇಜ್ & ಫೋಟೋಗಳನ್ನು ಕಳಿಸಿದ ಬಗ್ಗೆ ಪವಿತ್ರಾ ಗೌಡ ಮಾಜಿ ಗಂಡ....

ಡಿ-ಬಾಸ್ ದರ್ಶನ್ ಅವರಿಗೆ ಕೊಲೆ ಕಂಟಕ?
ರೇಣುಕಾಸ್ವಾಮಿ ಕೊಲೆ ಕೇಸ್ ಇಡೀ ಇಂಡಿಯಾದಲ್ಲೇ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಯಾಕಂದ್ರೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಒಬ್ಬ ದೊಡ್ಡ ನಟ ಈ ರೀತಿ ಕೊಲೆ ಕೇಸ್‌ನಲ್ಲಿ ಸಿಲುಕಿ ನರಳಾಡಿ ಜೈಲು ಸೇರಿದ್ದು ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ನಿಂತು ಹೋದವು, ದೊಡ್ಡ ಸಮಸ್ಯೆ ಆಗಿತ್ತು. ಹೀಗಿದ್ದಾಗಲೇ ಪವಿತ್ರಾ ಗೌಡ ಮಾಜಿ ಗಂಡ ಕೂಡ ರೇಣುಕಾಸ್ವಾಮಿ ಮಾಡಿದ ಕೆಲಸಕ್ಕೆ ಈಗ ರೊಚ್ಚಿಗೆದ್ದಿದ್ದಾರೆ.
ಪವಿತ್ರಾ ಗೌಡ ಮಾಜಿ ಗಂಡ ಆಕ್ರೋಶ
ದರ್ಶನ್ ತೂಗುದೀಪ್ ಅವರ ಹೆಂಡತಿ ವಿಜಯಲಕ್ಷ್ಮೀ ಅವರು & ಪವಿತ್ರಾ ಗೌಡ ನಡುವೆ ಫೈಟ್ ನಡೆವಾಗ ಸೋಷಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ಈ ವಿಷಯಕ್ಕೆ ಎಂಟ್ರಿ ಕೊಟ್ಟಿದ್ದ. ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿ ಪವಿತ್ರಾ ಗೌಡಗೆ ಕೆಟ್ಟ ಕೆಟ್ಟ ಮೆಸೇಜ್ ಮತ್ತು ಅಶ್ಲೀಲ ಫೋಟೋಗಳನ್ನ ಕಳುಹಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು.
ತಾನು ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಂತಾ ಹೇಳಿಕೊಂಡು ಈ ರೀತಿಯಾಗಿ ಇದೇ ರೇಣುಕಾಸ್ವಾಮಿ ಮೆಸೇಜ್ ಕಳುಹಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಕಾರಣಕ್ಕೆ ರೇಣುಕಾಸ್ವಾಮಿಗೆ ಬಲೆ ಬೀಸಿ, ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದೂ ಅಲ್ಲದೆ ಮರ್ಮಾಂಗಕ್ಕೆ ಒದ್ದು, ಎದೆಗೆ ಬರೆ ಹಾಕಿ & ತಲೆಗೆ ತೂತು ಮಾಡಿ ಬರ್ಬರವಾಗಿ ಕೊಲೆ ಮಾಡಿದ ಆರೋಪ ಕೇಳಿ ಬಂದಿತ್ತು. ಇಂತಹ ಘಟನೆ ಬೆನ್ನಲ್ಲೇ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದ್ದು, ಪವಿತ್ರಾ ಗೌಡ ಮಾಜಿ ಗಂಡ ಕೂಡ ರೇಣುಕಾಸ್ವಾಮಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಹಂಗಾದ್ರೆ ರೇಣುಕಾಸ್ವಾಮಿ ಮಾಡಿದ್ದು ಸರಿನಾ?
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ಪವಿತ್ರಾ ಗೌಡ ಮಾಜಿ ಗಂಡ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊಲೆ ಕೇಸ್ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಬಗ್ಗೆ ಮಾತನಾಡಿರುವ ಪವಿತ್ರಾ ಗೌಡ ಮಾಜಿ ಗಂಡ, ಪವಿತ್ರಾ ಆ ರೀತಿ ಕೊಲೆ ಮಾಡುವವರು ಅಲ್ಲ. ಹಂಗಾದ್ರೆ ರೇಣುಕಾಸ್ವಾಮಿ ಮಾಡಿದ್ದು ಸರಿನಾ? ಅಂತಾ ಪ್ರಶ್ನೆ ಮಾಡಿದ್ದಾರೆ ಪವಿತ್ರಾ ಗೌಡ ಮಾಜಿ ಗಂಡ.
ಮಾಜಿ ಗಂಡನ ಹೇಳಿಕೆಯಿಂದ ಸಂಚಲನ!
ಚಾಲೆಂಜಿಂಗ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಹೊರ ಬರುತ್ತಿರುವ ವಿಚಾರ ಭರ್ಜರಿ ಸೌಂಡ್ ಮಾಡ್ತಿದೆ. ಡಿ-ಬಾಸ್ ದರ್ಶನ್ ಅಭಿಮಾನಿಗಳು, ಇಂದು ಆಸ್ಪತ್ರೆಯಿಂದ ದರ್ಶನ್ ತೂಗುದೀಪ್ ಅವರು ಹೊರ ಬಂದ ತಕ್ಷಣ ದೊಡ್ಡ ಮೆರವಣಿಗೆ ಮಾಡಲು ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ, ಪವಿತ್ರಾ ಗೌಡ ಮಾಜಿ ಗಂಡ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಮುಂದೆ ಇದೆಲ್ಲಾ ಹೊಸ ತಿರುವು ಪಡೆಯುತ್ತಾ? ಎಂಬ ಕುತೂಹಲ ಮೂಡಿಸಿದೆ.












Click it and Unblock the Notifications