ತಾಳ್ಮೆ Is More Important; ಕುತೂಹಲ ಮೂಡಿಸಿದ ಪವಿತ್ರಾ ಗೌಡ ಪೋಸ್ಟ್‌: ಏನದು?

ಬೆಂಗಳೂರು, ಮೇ 24: ಚಿತ್ರದುರ್ಗ ಮೂಲ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಬರೋಬ್ಬರಿ ಆರು ತಿಂಗಳ ಬಳಿಕ ಪರಪ್ಪನ ಅಗ್ರಹಾರದಿಂದ ಹೊರಗೆ ಬಂದಿದ್ದಾರೆ. ಆರು ತಿಂಗಳು ಜೈಲಿನಲ್ಲಿ ವಿಲವಿಲ ಎಂದಿದ್ದ ಪವಿತ್ರಗೌಡ ಹಾಗೂ ದರ್ಶನ್‌ ಸದ್ಯ ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಜೈಲಿನಿಂದ ಬಂದ ಮೇಲೆ ಬೆಂಗಳೂರಿನ ಬನಶಂಕರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಿಗೆ ವಿಶೇಷ ಪೂಜೆ ಕೂಡ ಮಾಡಿಸಿದ್ದಾರಂತೆ.

ಇದೀಗ ಪವಿತ್ರಾ ಗೌಡ ಅವರು ಹಿಂದಿನ ಜೀವನ ಶೈಲಿಗೆ ಮರಳಿದ್ದು, ರೆಡ್ ಕಾರ್ಪೆಟ್ ರೀ ಓಪನ್ ಮಾಡಿರುವ ಪವಿತ್ರಾ ಗೌಡ ಅವರು ಈಗಾಗಲೇ ಬಟ್ಟೆ ಅಂಗಡಿಗೆ ರಾ ಮೇಟಿರಿಯಲ್ ಖರೀದಿಯಲ್ಲಿ ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ಪವಿತ್ರಾ ಗೌಡ ಆಗಾಗ ಹೊಸ ಹೊಸ ಫೋಟೋಗಳು ಸ್ಟೋರಿಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.

Pavithra Gowda Shares Post After A Day Of Meeting Darshan

ಇನ್ನೂ ಇತ್ತೀಚೆಗಷ್ಟೇ ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ನಟಿ ಪವಿತ್ರಾ ಗೌಡ, ನಟ ದರ್ಶನ್ ಸೇರಿ 16 ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಮುಖಾಮುಖಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್‌ ಹಾಗೂ ನಟಿ ಪವಿತ್ರಾ ಗೌಡ ಅವರಿಬ್ಬರು ನ್ಯಾಯಾಲಯದಲ್ಲಿ ಭೇಟಿಯಾಗಿದ್ದರು. ಕೋರ್ಟ್ನಲ್ಲಿ ದರ್ಶನ್ ಭೇಟಿಯಾಗಿ ಒಂದು ದಿನದ ಬಳಿಕ ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕಾಲ, ತಾಳ್ಮೆ, ಮೌನದ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ಪವಿತ್ರಾ ಗೌಡ ಅವರು ಸ್ಟೋರಿಯಲ್ಲಿ ಸಮಯ, ತಾಳ್ಮೆ, ಮೌನದ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದಾರೆ. ಒಂದು ಸ್ಟೋರಿಯಲ್ಲಿ ಸಮಯ ಮತ್ತು ತಾಳ್ಮೆ ತುಂಬಾ ಮುಖ್ಯ.. ಎಲ್ಲಾ ಪ್ರಶ್ನೆಗಳಿಗೂ ಮೌನವೇ ಅತ್ಯುತ್ತಮ ಉತ್ತರ.. ಪ್ರತಿಯೊಂದು ಸನ್ನಿವೇಶದಲ್ಲೂ ನಗುವುದು ಅತ್ಯುತ್ತಮ ಪ್ರತಿಕ್ರಿಯೆ ಅಂತ ಹಾಕಿಕೊಂಡಿದ್ದಾರೆ. ಇನ್ನೂ ಮತ್ತೊಂದು ಸ್ಟೋರಿಯಲ್ಲಿ ಎಲ್ಲವನ್ನು ಕಳೆದುಕೊಂಡ ಹಾಗೆ ಸ್ವಲ್ಪದಿನ ನಟಿಸಿ ನೋಡು, ನಿನ್ನವರು ಯಾರು ಎಂದು ತಿಳಿಯುತ್ತದೆ. ತಾಳ್ಮೆ ತುಂಬಾ ಮುಖ್ಯ ಎಂದು ಪವಿತ್ರಾ ಗೌಡ ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ದರ್ಶನ್‌ ಹಾಗೂ ವಿಜಯಲಕ್ಷ್ಮಿ ಅವರು ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿ ಕೊಂಡಿದ್ದು, ಇದೀಗ ಪವಿತ್ರಾ ಗೌಡ ಅವರ ಈ ಪೋಸ್ಟ್ ಹಾಕಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+