Pavithra Gowda: 'ಅವಳು ಮುಗ್ಧ ಹುಡುಗಿ'- ಪವಿತ್ರಾ ಗೌಡ ಬಗ್ಗೆ ಸ್ನೇಹಿತೆ ಸಮತಾ ಹೇಳಿದ್ದೇನು?
'ಪವಿತ್ರಾ ಗೌಡ ಅವರಿಗೆ ತುಂಬಾ ಕೆಟ್ಟ್ ಕೆಟ್ಟದಾಗಿ ಸಂದೇಶಗಳು ಬರುತ್ತಿರುವುದನ್ನು ನಾನು ನೋಡಿದ್ದೇನೆ. ಪವಿತ್ರಾ ನಾನು ಸೈಬರ್ ಪೊಲೀಸರಿಗೆ ದೂರು ದಾಖಲಿಸಲು ನಿರ್ಧರಿಸಿದ್ದೆವು. ಆದರೆ ಅದಾಗಿದ್ದು ಬೇರೆ' ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ಹೇಳಿದ್ದಾರೆ.
ನಟಿ ಪವಿತ್ರಾ ಗೌಡ ಅವರ ಸ್ನೇಹಿತೆ ಸಮತಾ ಅವರು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಪವಿತ್ರಾ ಹಾಗೂ ಸಮತಾ ಅವರ ಸ್ನೇಹ ಶುರುವಾಗಿದ್ದು ಯಾವಾಗ? ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸಮತಾ ಹೇಳಿದ್ದೇನು? ಪವಿತ್ರಾ ಹಾಗೂ ದರ್ಶನ್ ಸ್ನೇಹದ ಬಗ್ಗೆ ಸಮತಾ ಅವರಿಗೆ ಗೊತ್ತಿತ್ತಾ? ಇದೆಲ್ಲದಕ್ಕೂ ಸಮತಾ ಕೊಟ್ಟ ಉತ್ತರ ಏನು ಎಂದು ತಿಳಿಯೋಣ.

ಪವಿತ್ರಾ ಹಾಗೂ ಸಮತಾ ಸ್ನೇಹ ಶುರುವಾಗಿದ್ದು ಯಾವಾಗ?
ಪವಿತ್ರಾ ಗೌಡ ಹಾಗೂ ಸಮತಾ ತುಂಬಾ ಆತ್ಮೀಯ ಸ್ನೇಹಿತರು. ಕಳೆದ ಎರಡು ವರ್ಷದಿಂದ ಇವರಿಬ್ಬರೂ ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ರು. ತಮ್ಮ ತಮ್ಮ ಮಕ್ಕಳು ಕ್ಲೋಸ್ ಆಗಿರುವುದರಿಂದ ಇಬ್ಬರು ತಾಯಂದಿರೂ ಕೂಡ ಕ್ಲೋಸ್ ಆಗಿದ್ದರು. ಹೀಗಾಗಿನೇ ಪವಿತ್ರಾ ಜೈಲು ಸೇರಿದ ನಂತರ ಸಮತಾ ಹಲವಾರು ಬಾರಿ ಜೈಲಿಗೆ ಹೋಗಿ ಪವಿತ್ರಾರನ್ನು ಭೇಟಿ ಮಾಡಿ ಬಂದಿದ್ದಾರೆ.
ಆದರೆ ರೇಣುಕಾಸ್ವಾಮಿ ಬಗ್ಗೆ ನನ್ನೊಂದಿಗೆ ಯಾವತ್ತೂ ಕೂಡ ಪವಿತ್ರಾ ಅವರು ಚರ್ಚೆ ಮಾಡಿಲ್ಲ. ಮುಂಚೆ ನಾವು ಒಟ್ಟಿಗೆ ಇದ್ವಿ. ಈ ಪ್ರಕರಣ ಬೆಳಕಿಗೆ ಬರೋದಕ್ಕೂ ಮುನ್ನ ನಾವು ಒಟ್ಟಿಗೆ ಇದ್ದಾಗಲೂ ಪವಿತ್ರಾ ಈ ಬಗ್ಗೆ ಹೇಳಿಕೊಂಡಿಲ್ಲ ಎಂದು ಸಮತಾ ಹೇಳಿದ್ದಾರೆ. ಹಾಗಾದರೆ ಸ್ನೇಹಿತೆ ಸಮತಾ ಅವರಿಗೆ ಪವಿತ್ರಾಗೆ ರೇಣುಕಾಸ್ವಾಮಿ ಕಿರುಕುಳ ನೀಡುತ್ತಿರುವ ಬಗ್ಗೆ ಗೊತ್ತಾಗಿದ್ದು ಯಾವಾಗ?
ಈ ಪ್ರಶ್ನೆಗೆ ಉತ್ತರಿಸಿದ ಸಮತಾ, 'ಪವಿತ್ರಾ ಈ ವಿಚಾರದ ಬಗ್ಗೆ ನನ್ನ ಬಳಿ ಏನನ್ನೂ ಹೇಳಿಕೊಂಡಿಲ್ಲ. ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ಪವಿತ್ರಾ ಹೇಳಿಕೊಂಡಿಲ್ಲ. ಆದರೆ ಅವರಿಗೆ ಸಿಕ್ಕಾಪಟ್ಟೆ ನೆಗಿಟಿವ್ ಕಾಮೆಂಟ್ ಬಂದಿರೋದು ಇದೆ. ಇದರಿಂದ ಅವರು ಬೇಜಾರ್ ಮಾಡಿಕೊಂಡಿದ್ದರು. ನಾವು ಇದರ ಬಗ್ಗೆ ಸೈಬರ್ ಪೊಲೀಸರ ಬಳಿ ಹೋಗೋಣ ಅಂದುಕೊಂಡಿದ್ವಿ. ಆದರೆ ಯಾವುದೋ ಕಾರಣಕ್ಕಾಗಿ ಹೋಗಲು ಆಗಲಿಲ್ಲ. ಅಷ್ಟರಲ್ಲಿ ಈ ರೀತಿ ಆಗಿದೆ ಎಂದು ಸಮತಾ ಹೇಳಿದ್ದಾರೆ.
ಪವಿತ್ರಾ ಅವರಿಗೆ ಬ್ಯಾಡ್ ಕಾಮೆಂಟ್ ಬರುತ್ತಿದ್ದಿದ್ದು ನಿಜ- ಸಮತಾ
ಇನ್ನೂ ಪವಿತ್ರಾ ಅವರಿಗೆ ಬ್ಯಾಡ್ ಮೆಸೇಜ್ ಬರುತ್ತಿರುವ ಬಗ್ಗೆ ಮಾತನಾಡಿದ ಸಮತಾ- ಪವಿತ್ರಾ ಅವರಿಗೆ ಸಿಕ್ಕಾಪಟ್ಟೆ ಬ್ಯಾಡ್ ಕಾಮೆಂಟ್ ಬರುತ್ತಿದ್ದವು. ಅವರಿಗೆ ಪರ್ಸನಲ್ ಆಗಿ ಕೆಟ್ಟದಾಗಿ ಮೆಸೇಜ್‌ಗಳನ್ನು ಕಳುಹಿಸಿ ಹಿಂಸೆ ನೀಡುತ್ತಿದ್ದರು. ನಾನು ಅವರಿಗೆ ಧೈರ್ಯ ಹೇಳಿದ್ದೆ. ಅವರು ಕೂಡ ಇದನ್ನು ಕಡೆಗಣಿಸ್ತಾಯಿದ್ದರು. ಆದರೆ ಈ ರೇಣುಕಾಸ್ವಾಮಿ ಕೊಲೆ ವಿಚಾರ ಯಾಕೆ ಹೀಗಾಯ್ತು ಅಂತ ಗೊತ್ತಿಲ್ಲ ಎಂದು ಸಮತಾ ಗೆಳತಿ ಬಗ್ಗೆ ಹೇಳಿಕೊಂಡಿದ್ದಾರೆ.
ರೇಣುಕಾಸ್ವಾಮಿ ಬಗ್ಗೆ ನನಗೆ ಏನೂ ಹೇಳಿಲ್ಲ- ಸಮತಾ
ಪವಿತ್ರಾ ಅವರಿಗೆ ಸಾಕಷ್ಟು ಕೆಟ್ಟದಾಗಿ ಮೆಸೇಜ್‌ಗಳು ಬರುತ್ತಿದ್ದದ್ದು ನಿಜ. ಆದರೆ ದರ್ಶನ್ ಅಣ್ಣನಿಗೆ ಪವಿತ್ರಾ ಇಂತಹ ವಿಚಾರಗಳನ್ನು ಹೇಳಲು ಹೋಗಲ್ಲ. ಯಾಕೆಂದರೆ ಪವಿತ್ರಾ ಒಂದು ಸಣ್ಣ ಇರುವೆಗೂ ನೋವು ಮಾಡಿದವಳು ಅಲ್ಲ. ಪವಿತ್ರಾ ಇಂತಹ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ತಾಯಿರಲಿಲ್ಲ. ಆದರೆ ಬೇಸರ ಮಾಡಿಕೊಳ್ತಾಯಿದ್ದರು. ಈ ವಿಚಾರ ಹೇಗೆ ದರ್ಶನ್ ಅಣ್ಣನಿಗೆ ಗೊತ್ತಾಯ್ತೋ ನನಗೂ ಗೊತ್ತಿಲ್ಲ ಎಂದು ಸಮತಾ ಹೇಳಿದ್ದಾರೆ.
ಹೊರ ಬಂದ ಬಳಿಕ ಫೋನ್‌ನಲ್ಲಿ ಪವಿತ್ರಾ ಜೊತೆ ಮಾತನಾಡಿದೆ- ಸಮತಾ
ಪವಿತ್ರಾ ಜೈಲಿನಿಂದ ಹೊರ ಬಂದ ಬಳಿಕ ನಾನು ಅವರನ್ನು ಬೇಟಿ ಮಾಡಲು ಆಗಿಲ್ಲ. ಆದರೆ ಫೋನ್‌ನಲ್ಲಿ ಮಾತನಾಡಿದೆ. ಶ್ವೇತಾ ಗೌಡ ವಿಚಾರ ಬೆಳಕಿಗೆ ಬಂತೋ ಆಗ ನಾನು ಪವಿತ್ರಾ ಅವರಿಗೆ ಕರೆ ಮಾಡಿ ಮಾತನಾಡಿದೆ. 'ಶ್ವೇತಾ ಗೌಡ ಹೀಗೆ ಅಂತ ನನಗೂ ಗೊತ್ತಿಲ್ಲ. ಇನ್ನೂ ನಿನಗೆ ಹೇಗೆ ಗೊತ್ತಿರುತ್ತೆ. ನಿನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಭಯ ಪಡಬೇಡ ಎಂದು ಧೈರ್ಯ ಹೇಳಿದೆ' ಎಂದು ಸಮತಾ ಹೇಳಿದ್ದಾರೆ.
ಸಮತಾ ಜೊತೆ ನೋವು ಹಂಚಿಕೊಂಡ ಪವಿತ್ರಾ
ಇದೇ ವೇಳೆ ಪವಿತ್ರಾ ಗೆಳತಿ ಸಮತಾ ಮುಂದೆ ನೋವು ತೋಡಿಕೊಂಡಿದ್ದಾರೆ. 'ನನಗೆ ಯಾಕೆ ಹೀಗೆ ಆಗ್ತಾಯಿದೆ' ಎಂದು ಸ್ನೇಹಿತೆ ಸಮತಾ ಬಳಿ ಕಣ್ಣೀರು ಹಾಕಿದ್ದಾರೆ. ಪವಿತ್ರಾ ಯಾರಿಗೂ ಕೂಡ ಬೇಸರ ಮಾಡಿಲ್ಲ. ಜೋರಾಗಿ ಕೂಡ ಮಾತನಾಡುವವಳು ಅಲ್ಲ. ತುಂಬಾ ಸೌಮ್ಯ ಹುಡುಗಿ. ಮುಗ್ಧತೆ ಇರೋ ಹುಡುಗಿ ಪವಿತ್ರಾ. ಪವಿತ್ರಾ ಜೊತೆ ಯಾರೇ ಮಾತನಾಡಿದರೂ ಹೇಳುವುದು ಒಂದೇ ಇನೋಸೆಂಟ್ ಲೇಡಿ ಅಂತ. ಆದರೆ ಅವರ ಬಗ್ಗೆ ಯಾಕೆ ಹೀಗೆ ಆಯ್ತು ಅನ್ನೋ ನೋವು ನನಗೂ ಇದೆ ಎಂದು ಸಮತಾ ಹೇಳಿದರು.
ಪವಿತ್ರಾ ಹಾಗೂ ದರ್ಶನ್ ನಡುವೆ ಸಮತಾ ಬ್ರಿಡ್ಜ್?
ಇದೇ ವೇಳೆ ಪವಿತ್ರಾ ಹಾಗೂ ದರ್ಶನ್ ನಡುವಿನ ಸ್ನೇಹಕ್ಕೆ ಸಮತಾ ಬುನಾದಿಯಾಗಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಮತಾ, 'ಜನ ಸಾವಿರ ಹೇಳಬಹುದು. ಆದರೆ ದರ್ಶನ್ ಅಣ್ಣ ನಮ್ಮನ್ನ ಚಿಕ್ಕ ಮಕ್ಕಳಂತೆ ಕೂಡಿಸಿ ಊಟ ಮಾಡಿಸಿದ್ದಾರೆ. ನನ್ನ ಮಗಳನ್ನೂ ಅವರು ಕೂಡಿಸಿಕೊಂಡು ತನ್ನ ಮಗಳಂತೆ ಊಟ ಮಾಡಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ದರ್ಶನ್ ಅಣ್ಣನನ್ನು ಮೀಟ್ ಮಾಡಿದ್ದೆ' ಎಂದಿದ್ದಾರೆ.
'ಪವಿತ್ರಾ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಸಿದ್ದಾಳೆ ಅನ್ನೋದನ್ನು ನಾನು ಒಪ್ಪಲ್ಲ'
ಪವಿತ್ರಾ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಸಿದ್ದಾಳೆ ಅನ್ನೋದನ್ನು ನಾನು ಒಪ್ಪುವುದಿಲ್ಲ. ಬ್ಯಾಡ್ ಮೆಸೇಜ್ ಮಾಡಿದ ಸಾಕಷ್ಟು ನಂಬರ್‌ಗಳನ್ನು ಪವಿತ್ರಾ ಬ್ಲ್ಯಾಕ್ ಮಾಡಿದ್ದಾರೆ. ದೂರು ದಾಖಲಿಸಲು ಕೂಡ ನಾವು ರೆಡಿ ಆಗಿದ್ವಿ. ಇದೆಲ್ಲಾ ಮೀಡಿಯಾ ವಿಷಯ ಆಗುತ್ತೆ ಅನ್ನೋ ಕಾರಣಕ್ಕೆ ಹಿಂಜರಿದ್ವಿ. ಅಷ್ಟರಲ್ಲಿ ಇದೆಲ್ಲಾ ಆಗೋಗಿದೆ ಎಂದಿದ್ದಾರೆ ಸಮತಾ.
ಜೈಲಿಗೆ ಹೋದಾಗ ಪವಿತ್ರಾ ಹೇಳಿದ್ದೇನು?
ಜೈಲಿನಲ್ಲಿ ಪವಿತ್ರಾ ಇದ್ದಾಗ ನಾನು ಕೂಡ ಹೋಗಿ ಅವರನ್ನು ಭೇಟಿ ಮಾಡಿ ಬರುತ್ತಿದ್ದೆ. ಆದರೆ ಪವಿತ್ರಾ ದರ್ಶನ್ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ. ಐದು ನಿಮಿಷ ಮಾತಾಡಿ ಧೈರ್ಯ ಹೇಳಿ, ಹಣ್ಣು ಕೊಟ್ಟು ಬರುತ್ತಿದ್ದೆ ಅಷ್ಟೇ. ನಾವಿಬ್ಬರೂ ಫ್ರೆಂಡ್ಸ್ ಅಷ್ಟೆ. ಮುಂದೆ ಕೂಡ ನಾವು ಫ್ರೆಂಡ್ಸ್ ಆಗಿ ಇರುತ್ತೇವೆ ಎಂದು ಸಮತಾ ಹೇಳಿದ್ದಾರೆ. ಒಟ್ಟಿನಲ್ಲಿ ಸಮತಾ ಪ್ರಕಾರ ಪವಿತ್ರಾ ಕೆಟ್ಟವರಲ್ಲ. ದರ್ಶನ್ ಅವರೂ ಕೆಟ್ಟವರಲ್ಲ. ಆದರೆ ಸಮಯ ಈ ರೀತಿ ಇದೆ. ಮುಂದೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.












Click it and Unblock the Notifications